Headlines

ಗಿಲ್ಲಿ ಕ್ರೇಜ್ ಬಗ್ಗೆ ಕೇಳಿದಾಗ ‘ಜನ ಮರುಳೋ ಜಾತ್ರೆ ಮರುಳೋ’ ಎಂದ ಜಾನ್ವಿ

ಗಿಲ್ಲಿ ಕ್ರೇಜ್ ಬಗ್ಗೆ ಕೇಳಿದಾಗ ‘ಜನ ಮರುಳೋ ಜಾತ್ರೆ ಮರುಳೋ’ ಎಂದ ಜಾನ್ವಿ


ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿ ಗಿಲ್ಲಿಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಅವರಿಗೆ ಸಾಕಷ್ಟು ಕ್ರೇಜ್ ಸೃಷ್ಟಿಯಾಗಿದೆ ಎಂಬುದು ಜಾನ್ವಿಗೆ ತಿಳಿದಂತೆ. ಗಿಲ್ಲಿ ಕ್ರೇಜ್ ಬಗ್ಗೆ ಕೇಳಿದಾಗ ಅವರು ‘ಜನ ಮರುಳೋ ಜಾತ್ರೆ ಮರುಳೋ’ ಎಂದು ಹೇಳಿದರು. ಅವರು ಹೇಳಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಇದನ್ನು ಟೀಕಿಸಿದ್ದಾರೆ. ‘ಜನರು ಸುಮ್ಮನೆ ಬೆಂಬಲ ನೀಡುವುದಿಲ್ಲ’. ‘ಗಿಲ್ಲಿ ಕ್ರೇಜ್ ನೋಡಿ ಜಾನ್ವಿಗೆ ಉರಿದಿರಬೇಕು’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ಹಾಗೂ ಗಿಲ್ಲಿ ಮಧ್ಯೆ ಸಾಕಷ್ಟು ಕಿತ್ತಾಟ ನಡೆದ ಉದಾಹರಣೆ ಇದೆ. ಗಿಲ್ಲಿಯನ್ನು ಅವರು ಪ್ರಶಂಸಿಸಿದ್ದು ಕಡಿಮೆ ಎನ್ನಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *