Headlines

ಹದ್ದು ಮೀರಬೇಡಿ ಎಂದು ಜಡ್ಜ್​ಗೆ ವಕೀಲನ ಎಚ್ಚರಿಕೆ; ಹೈಕೋರ್ಟ್​ನಲ್ಲಿ ಅಡ್ವೋಕೇಟ್ ವಿರುದ್ಧ ಪ್ರಕರಣ

ಹದ್ದು ಮೀರಬೇಡಿ ಎಂದು ಜಡ್ಜ್​ಗೆ ವಕೀಲನ ಎಚ್ಚರಿಕೆ; ಹೈಕೋರ್ಟ್​ನಲ್ಲಿ ಅಡ್ವೋಕೇಟ್ ವಿರುದ್ಧ ಪ್ರಕರಣ


ರಾಂಚಿ, ಅಕ್ಟೋಬರ್ 17: ಮುಖ್ಯನ್ಯಾಯಮೂರ್ತಿಗಳ ಮೇಲೆ ವಕೀಲರಾದ ಶೂ ಎಸೆದ ಪ್ರಕರಣದ ನೆನಪು ಈಗಾಗಲೇ ಅಂತಹ ಮತ್ತೊಂದು ಪ್ರಕರಣ ಜಾರ್ಖಂಡ್ ಹೈಕೋರ್ಟ್‌ನಲ್ಲಿ (ಜಾರ್ಖಂಡ್ ಹೈಕೋರ್ಟ್) ನಡೆದಿದೆ. ಇಲ್ಲಿ ಹಿರಿಯ ವಕೀಲ ಜಡ್ಜ್ ಅವರಿಗೆ ಹದ್ದು ಮೀರಿ ವರ್ತಿಸಿದ ಘಟನೆ ನಡೆದಿದೆ. ಅಕ್ಟೋಬರ್ 16 ರಂದು ರಾಂಚಿಯಲ್ಲಿರುವ ಜಾರ್ಖಂಡ್ ಹೈಕೋರ್ಟ್ ನ ಕೋರ್ಟ್ ರೂಮ್ 24 ರಲ್ಲಿ ನಡೆದಿದೆ. ಈ ಘಟನೆ ಬೆನ್ನಲ್ಲೇ ಅಡ್ವೋಕೇಟ್ ವಿರುದ್ಧ ಉಚ್ಚ ನ್ಯಾಯಾಲಯವು ಸುವೋಮೋಟೋ ಪ್ರಕರಣ ದಾಖಲಿಸಿ ವಿಚಾರಣೆ ಆರಂಭವಾಗಿದೆ.

ಹದ್ದು ಮೀರಿ ವರ್ತಿಸಿದಿರಿ ಎಂದು ಜಡ್ಜ್‌ಗೆ ಅಡ್ವೋಕೇಟ್ ಹೇಳಿದ್ದು ಯಾಕೆ?

ವ್ಯಕ್ತಿಯೊಬ್ಬರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಕೋರ್ಟ್ ರೂಮ್ 24 ರಲ್ಲಿ ನಡೆಯುತ್ತಿದೆ. ಗ್ರಾಹಕ ಪರ ಮಹೇಶ್ ತಿವಾರಿ ವಕಾಲತ್ತು ವಹಿಸಿಕೊಂಡು ವಾದಿಸುತ್ತಿದ್ದರು. ನ್ಯಾ| ರಾಜೇಶ್ ಕುಮಾರ್ ಅವರು ಜಡ್ಜ್ ಆಗಿದ್ದರು.

ಇದನ್ನೂ ಓದಿ: ಗುಜರಾತ್ ಹೊಸ ಕ್ಯಾಬಿನೆಟ್: ಹರ್ಷ್ ಸಾಂಘ್ವಿ ಅತ್ಯಂತ ಕಿರಿಯ ಡಿಸಿಎಂ; ರವೀಂದ್ರ ಜಡೇಜಾ ಪತ್ನಿ ಸೇರಿ 26 ಮಂತ್ರಿಗಳು

ಈ ವೇಳೆ ವಕೀಲರು ವಾದ ಮಾಡಿದ ರೀತಿ ಬಗ್ಗೆ ಜಡ್ಜ್ ಅಸಮಾಧಾನದಿಂದ ಏನೋ ಕಾಮೆಂಟ್ ಮಾಡಿದ್ದಾರೆ. ಆಗ ತಿವಾರಿ ಸಿಟ್ಟಿಗೆದ್ದಂತೆ ಕಾಣಿಸುತ್ತಿದೆ. ‘ನಾನು ನನ್ನದೇ ರೀತಿಯಲ್ಲಿ ವಾದ ಮಾಡುತ್ತೇನೆ. ನೀವು ಹೇಳುವ ರೀತಿಯಲ್ಲ…. ನೀವು ನಿಮ್ಮ ಮಿತಿ ದಾಟಿ ಹೋಗಬೇಡಿ. ಈ ದೇಶ ಹೊತ್ತಿ ಉರಿಯುತ್ತಿದೆ, ನ್ಯಾಯಾಂಗದ ಜೊತೆಗೆ. ಯಾವುದೇ ವಕೀಲರನ್ನು ನೀವು ಅವಮಾನಿಸಬೇಡಿ. ನಾನು 40 ವರ್ಷದಿಂದ ವಕೀಲಿಕೆ ಮಾಡುತ್ತಿದ್ದೇನೆ..’ ಎಂದು ಮಹೇಶ್ ತಿವಾರಿ ಹೇಳಿದ್ದಾರೆ.

ಘಟನೆಯ ವಿಡಿಯೋ ಎಕ್ಸ್‌ನಲ್ಲಿ ಪೋಸ್ಟ್ ಆಗಿದ್ದು…

ಸಹ-ವಕೀಲರು ತಿವಾರಿಯನ್ನು ಸಮಾಧಾನಗೊಳಿಸಿದರು. ಈ ಘಟನೆಯಿಂದ ನ್ಯಾಯಾಧೀಶರಾದ ರಾಜೇಶ್ ಕುಮಾರ್ ಮತ್ತಷ್ಟು ಅಸಮಾಧಾನಗೊಂಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪರ ಮತ್ತು ವಿರೋಧ ಅಭಿಪ್ರಾಯಗಳನ್ನು ತೋರಿಸಿವೆ. ಅಡ್ವೋಕೇಟ್ ಮಾಡಿದ್ದು ಸರಿ ಎಂದು ಕೆಲವರು ಹೇಳಿದ್ದಾರೆ, ನ್ಯಾಯಾಧೀಶರಿಗೆ ಬೆಲೆಯೇ ಇಲ್ಲದ ಸ್ಥಿತಿ ಬಂದಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತ-ಅಫ್ಘಾನ್ ವಿರುದ್ಧ ಯುದ್ಧ ಮಾಡಲು ನಾವು ಸಿದ್ಧ: ಪಾಕ್ ರಕ್ಷಣಾ ಸಚಿವ

ಜಾರ್ಖಂಡ್ ಹೈಕೋರ್ಟ್ ನಿಂದ ಅಡ್ವೋಕೆ ವಿರುದ್ಧ ಪ್ರಕರಣ

ಇದೇ ವೇಳೆ ಅಡ್ವೋಕೇಟ್ ಮಹೇಶ್ ತಿವಾ ವಿರುದ್ಧ ಜಾರ್ಖಂಡ್ ಸ್ವಯಂಪ್ರೇರಿತವಾಗಿ (ಸುವೋಮೋಟೋ) ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ. ಜಾರ್ಖಂಡ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ತಾರಲೋಕ್ ಸಿಂಗ್ ಚೌಹಾಣ್, ನ್ಯಾಯಮೂರ್ತಿಗಳಾದ ಸುಜಿತ್ ನಾರಾಯಣ್ ಪ್ರಸಾದ್, ರಂಗೋನ್ ಮುಖೋಪಾಧ್ಯಾಯ, ಆನಂದ ಸೇನ್ ಮತ್ತು ರಾಜೇಶ್ ಶಂಕರ್ ಅವರಿರುವ ಹೈಕೋರ್ಟ್ ನ್ಯಾಯಪೀಠವು ಇದರ ವಿಚಾರಣೆಯನ್ನು ನಡೆಸುತ್ತಿದೆ. ವಕೀಲ ಮಹೇಶ್ ತಿವಾರಿಗೆ ನೋಟೀಸ್ ಕೊಡಲಾಗಿದೆ, ಮೂರು ವಾರಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 2:07 pm, ಶುಕ್ರ, 17 ಅಕ್ಟೋಬರ್ 25





Source link

Leave a Reply

Your email address will not be published. Required fields are marked *