ಧಾರವಾಡ, (ಫೆಬ್ರವರಿ 24): ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು (ಉದ್ಯೋಗಗಳು) ಭರ್ತಿಗೆ ಭೇಟಿ ಇಂದು (ಫೆಬ್ರವರಿ 24) ವಿದ್ಯಾಕಾಶಿ ಧಾರವಾಡದಲ್ಲಿ (ಧಾರವಾಡ) ಉದ್ಯೋಗಾಕಾಂಕ್ಷಿಗಳು ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಸಾವಿರಾರು ಯುವಕ-ಯುವತಿಯರು ಜುಬಿಲಿ ವೃತ್ತಕ್ಕೆ ದೌಡಾಯಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಇನ್ನು ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ಸ್ನೇಹಲ್ ಆಗಮಿಸಿ ಉದ್ಯೋಗಾಕಾಂಕ್ಷಿಗಳ ಮನವಿ ಸ್ವೀಕರಿಸಿದರು. ಈ ವೇಳೆ ಜಿಲ್ಲಾಧಿಕಾರಿ ಆರ್.ಸ್ನೇಹಲ್ ಮುಂದೆ ಮಹಿಳಾ ಉದ್ಯೋಗಾಕಾಂಕ್ಷಿಯೊಬ್ಬರು ತಮ್ಮ ನೋವು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ.