ಕೆಡಿ ಸಿನಿಮಾದಲ್ಲಿ ಸರ್ಸೆ ನಿನ್ನ ಸೆರಗ ಸರ್ಸೆ ಎಂಬ ಅಶ್ಲೀಲ ಹಾಡು ರಿಲೀಸ್ ಆಗಿತ್ತು.
ಅಸಹ್ಯ, ಅಶ್ಲೀಲ, ಗಲೀಜು ಸಾಹಿತ್ಯ ಎಂದು ಪ್ರೇಮ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಜಾಲತಾಣಗಳಲ್ಲಿ ಕೆಡಿ ಸಿನಿಮಾ ನಿರ್ದೇಶಕ ಪ್ರೇಮ್ ವಿರುದ್ಧ ಟೀಕೆ ಮಾಡಲಾಗಿತ್ತು. ವಿವಾದದ ಬೆನ್ನಲ್ಲೇ ಪ್ರಕರಣಕ್ಕೆ ಮಹಿಳಾ ಆಯೋಗ ಎಂಟ್ರಿ ಕೊಟ್ಟು, ಹೆಣ್ಣು ಮಕ್ಕಳಿಗೆ ಮುಜುಗರ ಆಗುವಂತಹ ಅಶ್ಲೀಲ ಸಾಹಿತ್ಯ ಬಳಕೆಯಾಗಿದೆ ಎಂದು ಹೇಳಿತ್ತು, ಅಷ್ಟೇ ಅಲ್ಲದೆ ಹಾಡು ತೆಗೆಯುವಂತೆ ವಾಣಿಜ್ಯಮಂಡಳಿ, ಸೆನ್ಸಾರ್ ಬೋರ್ಡ್ಗೆ ಪತ್ರ ಬರೆಯಲಾಗಿದೆ.
ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು ನೀಡಲಾಗಿದೆ. ಪ್ರೇಮ್, ನಟಿ ನೋರಾ ಫತೇಹಿ, ನಟ ಸಂಜಯ್ ದತ್ತ ವಿರುದ್ಧ ದೂರು ಸಲ್ಲಿಕೆ ಆಗಿದೆ, ಆಶುತೋಷ್ ಎಂಬ ವಕೀಲರಿಂದ ಕೇಂದ್ರಕ್ಕೂ ದೂರು ಸಲ್ಲಿಕೆಯಾಗಿದೆ. ಇನ್ನು ಪ್ರೇಮ್ ಕೂಡ ಕ್ಷಮೆ ಕೇಳಿದ್ದಾರೆ.