
ಯಂಗ್ ಟೈಗರ್ ಎನ್ಟಿಆರ್ ತಮ್ಮ ಜೀವನದ ಲವ್ ಸ್ಟೋರಿ ಬಗ್ಗೆ ಸಂದರ್ಶನವೊಂದರಲ್ಲಿ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದು ಪ್ರೀತಿನೋ ಅಥವಾ ಕೇವಲ ಆಕರ್ಷಣೆಯೋ ಎಂದು ತಿಳಿಯದಿದ್ದಾಗ ತನಗೆ ಸತ್ಯದ ಅರಿವಾಯಿತು ಎಂದು ಎನ್ಟಿಆರ್ ಹೇಳಿದ್ದಾರೆ.<img>ಯಂಗ್ ಟೈಗರ್ ಎನ್ಟಿಆರ್ ಸದ್ಯ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲೂ ತಾರಕ್ ನಟಿಸುತ್ತಿದ್ದಾರೆ. ವೃತ್ತಿಜೀವನದ ಆರಂಭದಲ್ಲೇ ‘ಆದಿ’, ‘ಸಿಂಹಾದ್ರಿ’ಯಂತಹ ಸೂಪರ್ಹಿಟ್ ಚಿತ್ರಗಳ ಮೂಲಕ ಎನ್ಟಿಆರ್ ಸ್ಟಾರ್ಡಮ್ ಗಳಿಸಿದರು. ಆದರೆ ‘ಸಿಂಹಾದ್ರಿ’ ನಂತರ ಅವರಿಗೆ ಸತತ ಸೋಲುಗಳು ಎದುರಾಗಿದ್ದವು.<img>ಸಂದರ್ಶನವೊಂದರಲ್ಲಿ ಎನ್ಟಿಆರ್ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ‘ನರಸಿಂಹುಡು’ ಚಿತ್ರದಲ್ಲಿ ಎನ್ಟಿಆರ್, ಸಮೀರಾ ರೆಡ್ಡಿ ಜೊತೆ ನಟಿಸಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿದೆ ಎಂದು ಆಗ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು.<img>ಈ ವದಂತಿಗಳು ಬಹಳ ಕಾಲ ಮುಂದುವರಿದಿದ್ದವು. ಸಿನಿಮಾ ಕ್ಷೇತ್ರವೆಂದರೆ ಆಕರ್ಷಣೆ ಹೆಚ್ಚು. ‘ನೀವು ಯಾರ ಬಗ್ಗೆಯಾದರೂ ಆಕರ್ಷಿತರಾಗಿದ್ದೀರಾ? ಪ್ರೀತಿಯಲ್ಲಿ ಬಿದ್ದಿದ್ದೀರಾ?’ ಎಂದು ಕೇಳಿದಾಗ ಎನ್ಟಿಆರ್, ‘ನನ್ನ ಲವ್ ಸ್ಟೋರಿ ಬಗ್ಗೆ ಮಾಧ್ಯಮದವರೇ ಚೆನ್ನಾಗಿ ಪ್ರಚಾರ ಕೊಟ್ಟಿದ್ದೀರಲ್ಲ. ಆಕೆ ಯಾರೆಂದು ನಿಮಗೆ ಗೊತ್ತು’ ಎಂದು ಪರೋಕ್ಷವಾಗಿ ಸಮೀರಾ ರೆಡ್ಡಿ ಬಗ್ಗೆ ಹೇಳಿದ್ದರು.<img><p>ಆ ಸಮಯದಲ್ಲಿ ನನ್ನ ವಯಸ್ಸು ಕೇವಲ 23 ವರ್ಷ. ಒಬ್ಬರ ಬಗ್ಗೆ ಇಷ್ಟವಾಗುವುದು, ಆಕರ್ಷಣೆಗೆ ಒಳಗಾಗುವುದು ಸಹಜ. ಅದು ನನ್ನ ವೃತ್ತಿಜೀವನದ ಒಂದು ‘ಪಾಸಿಂಗ್ ಫೇಸ್’ ಅಷ್ಟೇ. ಇದು ನಿಜವಾದ ಪ್ರೀತಿಯಲ್ಲವೇನೋ ಎಂದು ಬೇಗನೆ ಅರಿತುಕೊಂಡೆ. </p><img><p>ಪ್ರೀತಿಯನ್ನು ಬಿಟ್ಟಿದ್ದಕ್ಕೆ ಎಂದಾದರೂ ವಿಷಾದ ಪಟ್ಟಿದ್ದೀರಾ ಎಂದು ಕೇಳಿದಾಗ, ‘ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಯಾವುದೇ ನಿರ್ಧಾರಕ್ಕೂ ವಿಷಾದಿಸಿಲ್ಲ’ ಎಂದು ಎನ್ಟಿಆರ್ ಹೇಳಿದ್ದರು.</p><img>ಹೀಗೆ ಒಬ್ಬರ ಮೇಲೆ ಆಕರ್ಷಣೆಯಾದಾಗ ನನಗೆ ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ. ನಂತರ, ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನವನ್ನು ಬೆರೆಸಬಾರದು, ಎರಡನ್ನೂ ಪ್ರತ್ಯೇಕವಾಗಿ ನೋಡಬೇಕು ಎಂದು ಅರಿತುಕೊಂಡೆ ಎಂದು ತಾರಕ್ ತಿಳಿಸಿದರು.
Source link
Jr NTR Love Story: ಪ್ರೀತಿಸಿದ ಹುಡುಗಿಯನ್ನೇ ಜೂ.ಎನ್ಟಿಆರ್ ಮದುವೆಯಾಗಲಿಲ್ಲವೇಕೆ? ಆಮೇಲೆ ಏನಾಯ್ತು?