
ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿಯನ್ನು ಶುಭ ಗ್ರಹ ಎಂದು ಕರೆಯಲಾಗುತ್ತದೆ. ಗುರುವು ಜ್ಞಾನ, ಸಂತಾನ, ಭಾಗ್ಯ ಮತ್ತು ಸಮೃದ್ಧಿಯ ಕಾರಕ. ಪ್ರಸ್ತುತ ಗುರುವು ಮಿಥುನ ರಾಶಿಯ ಪುನರ್ವಸು ನಕ್ಷತ್ರದ ಮೂಲಕ ಸಂಚರಿಸುತ್ತಿದ್ದಾನೆ. ಪುನರ್ವಸು ನಕ್ಷತ್ರದ ಅಧಿಪತಿಯೂ ಕಾಣಿಸಿಕೊಂಡ ಗುರುವೇ ಆಗಿರುವುದರಿಂದ, ಈ ಸಂಚಾರವು ಅತ್ಯಂತ ಶಕ್ತಿ ಮತ್ತು ಪ್ರಭಾವಶಾಲಿಯಾಗಿದೆ.
ಗುರುವಿನ ದೃಷ್ಟಿ ಸ್ಥಾನ:
ಗುರುವು ತಾನು ಕುಳಿತಿರುವ ಸ್ಥಾನದಿಂದ 5, 7 ಮತ್ತು 9ನೇ ಮನೆಯನ್ನು ಪೂರ್ಣ ದೃಷ್ಟಿಯಿಂದ ನೋಡುತ್ತಾನೆ. ಮಿಥುನ ರಾಶಿಯಲ್ಲಿರುವ ಗುರುವು ಈ ಕೆಳಗಿನ ರಾಶಿಗಳ ಮೇಲೆ ತನ್ನ ಪ್ರಭಾವ ಬೀರುತ್ತಾನೆ.
- ತುಲಾ ರಾಶಿ: ಇದು ಪಂಚಮ ದೃಷ್ಟಿ ಅಥವಾ ಸಂತಾನ ದೃಷ್ಟಿ, ಇದು ಜ್ಞಾನ ಮತ್ತು ಕ್ರಿಯಾಶೀಲತೆಯನ್ನು ಹೊಂದಿದೆ.
- ಧನು ರಾಶಿ: ಇದು ಸಪ್ತಮ ದೃಷ್ಟಿ ಅಥವಾ ಕಂಕಣ ದೃಷ್ಟಿ, ಈ ಸಂಬಂಧಗಳು ಮತ್ತು ಪಾಲುದಾರಿಕೆಯನ್ನು ವೃದ್ಧಿಸುತ್ತದೆ.
- ಕುಂಭ ರಾಶಿ: ಇದು ನವಮ ದೃಷ್ಟಿ ಅಥವಾ ಭಾಗ್ಯ ದೃಷ್ಟಿ. ಇದು ಅದೃಷ್ಟ ಮತ್ತು ಧಾರ್ಮಿಕ ಏಳಿಗೆಯನ್ನು ಸೂಚಿಸುತ್ತದೆ.
ರಾಶಿಗಳ ಮೇಲೆ ಶುಭಾಶುಭ ಫಲಗಳು:
ಮಿಥುನ ರಾಶಿ :
ಗುರುವು ನಿಮ್ಮ ರಾಶಿಯಲ್ಲೇ ಭರವಸೆ ಹೆಚ್ಚುತ್ತದೆ. ಪುನರ್ವಸು ನಕ್ಷತ್ರದಲ್ಲಿ ಗುರು ಹಳೆಯ ಬಾಕಿ ಉಳಿದ ಕೆಲಸಗಳು ಮರುಜೀವ ಪಡೆಯುತ್ತವೆ. ಆದರೆ, ತೂಕ ಹೆಚ್ಚಾಗುವ ಸಾಧ್ಯತೆಯಿದೆ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಜ್ಞಾನಾರ್ಜನೆಗೆ ಇದು ಸುವರ್ಣಾವಕಾಶ.
ತುಲಾ ರಾಶಿ:
ತುಲಾ ರಾಶಿಯವರಿಗೆ ಈ ಕಾಲವು ವರದಾನದಂತಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಮತ್ತು ಸಂಶೋಧಕರಿಗೆ ಅತ್ಯುತ್ತಮ ಫಲಗಳು ದೊರೆಯಲಿವೆ. ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯದ ಯೋಗವಿದೆ. ನಿಮ್ಮ ಹೂಡಿಕೆಗಳಿಂದ ನಿರೀಕ್ಷಿತ ಲಾಭ ಪಡೆಯುವಿರಿ. ಕಲಾತ್ಮಕ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ಹುಡುಕಿ ಬರಲಿವೆ.
ಧನು ರಾಶಿ:
ಧನು ರಾಶಿಯ ಅಧಿಪತಿಯೂ ಗುರುವೇ ಆಗಿರುವುದರಿಂದ, ಸಪ್ತಮ ದೃಷ್ಟಿಯು ವಿವಾಹದ ಕನಸು ಕಾಣುತ್ತಿರುವವರಿಗೆ ಶುಭ ವಾರ್ತೆ ತರಲಿದೆ. ವೈವಾಹಿಕ ಜೀವನದಲ್ಲಿನ ಕಲಹಗಳು ದೂರವಾಗಿ ಪ್ರೀತಿ ಹೆಚ್ಚುತ್ತದೆ. ವ್ಯಾಪಾರದಲ್ಲಿ ಹೊಸ ಒಪ್ಪಂದಗಳು ಲಾಭದಾಯಕವಾಗಲಿವೆ. ಸಾಮಾಜಿಕವಾಗಿ ನಿಮ್ಮ ಗೌರವವು ದುಪ್ಪಟ್ಟಾಗಲಿದೆ.
ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?
ಕುಂಭ ರಾಶಿ:
ಕುಂಭ ರಾಶಿಯವರಿಗೆ ಅದೃಷ್ಟ ಕೈಹಿಡಿಯಲಿದೆ. ಪಿತಾರ್ಜಿತ ಆಸ್ತಿಯ ವಿವಾದಗಳು ಬಗೆಹರಿಯಲಿವೆ. ದೂರದ ಪ್ರಯಾಣ ಅಥವಾ ತೀರ್ಥಯಾತ್ರೆ ಕೈಗೊಳ್ಳುವ ಸಾಧ್ಯತೆಯಿದೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಪ್ರಯತ್ನಗಳು ಯಶಸ್ವಿಯಾಗಲಿವೆ. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮಾನಸಿಕ ಶಾಂತಿ.
ಪುನರ್ವಸು ನಕ್ಷತ್ರ:
ಪುನರ್ವಸು ಎಂದರೆ ಮತ್ತೆ ಸಂಪತ್ತು ಎಂದರ್ಥ. ಈ ನಕ್ಷತ್ರದಲ್ಲಿರುವ ಗುರುವು ಸೋಲನ್ನು ಗೆಲುವನ್ನಾಗಿ ಪರಿವರ್ತಿಸುವ ಶಕ್ತಿ ಹೊಂದಿದ್ದಾನೆ. ಕಳೆದುಕೊಂಡ ಗೌರವ ಅಥವಾ ಹಣವನ್ನು ಮರಳಿ ಪಡೆಯಲು ಇದು ಸೂಕ್ತ ಕಾಲ.
ಗುರುವಾರಗಳಂದು ಶಿವನ ದಕ್ಷಿಣಾಮೂರ್ತಿ ರೂಪವನ್ನು ಪೂಜಿಸುವುದು. ಹಳದಿ ಬಣ್ಣದ ವಸ್ತ್ರ ಅಥವಾ ಬೇಳೆಯನ್ನು ಅರ್ಚಕರಿಗೆ ಅಥವಾ ಬಡವರಿಗೆ ದಾನ ಮಾಡುವುದು.
– ಲೋಹಿತ ಹೆಬ್ಬಾರ್