Headlines

ಬೆಂಗಳೂರಿನ ಬಡ ರೋಗಿಗಳಿಗೆ ಸಿಹಿಸುದ್ದಿ: ಕೆ ಸಿ ಜನರಲ್ ಆಸ್ಪತ್ರೆಯನ್ನು ಹೈಟೆಕ್ ಮಾಡಲು ಮುಂದಾದ ಆರೋಗ್ಯ ಇಲಾಖೆ

ಬೆಂಗಳೂರಿನ ಬಡ ರೋಗಿಗಳಿಗೆ ಸಿಹಿಸುದ್ದಿ: ಕೆ ಸಿ ಜನರಲ್ ಆಸ್ಪತ್ರೆಯನ್ನು ಹೈಟೆಕ್ ಮಾಡಲು ಮುಂದಾದ ಆರೋಗ್ಯ ಇಲಾಖೆ


ಬೆಂಗಳೂರು, ಜ.21: ಬೆಂಗಳೂರು ಒಂದು ಜನರಿಗೆ ಸಿಹಿಸುದ್ದಿ ಇದೆ. ವಿಕ್ಟೋರಿಯಾ ಬೌರಿಂಗ್ ಆಸ್ಪತ್ರೆಗಳಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕೋವಿಡ್ ಬಳಿಕ ವಿಕ್ಟೋರಿಯಾದಲ್ಲಿ ನಿರಂತರವಾಗಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಒತ್ತಡ . ಇದೀಗ ಈ ಒತ್ತಡವನ್ನು ಕಡಿಮೆ ಮಾಡಲು, ಮಲ್ಲೇಶ್ವರಂನಲ್ಲಿ ಸ್ಥಿತ ಕೆ ಸಿ ಜನರಲ್ ಆಸ್ಪತ್ರೆ (ಕೆಸಿ ಜನರಲ್ ಆಸ್ಪತ್ರೆ) ಹೈಟೆಕ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಕೆಸಿಜಿ ಆಸ್ಪತ್ರೆಯಲ್ಲಿ ಮುಂದಿನ ತಿಂಗಳಿನಿಂದ 50 ಬೆಡ್ ವ್ಯವಸ್ಥೆಯ ಟ್ರಾಮಾ ಎಮರ್ಜೆನ್ಸಿ ಕೇರ್ ಹಾಗೂ ಬ್ಲಡ್ ಬ್ಯಾಂಕ್ ಡಿಎನ್ ಬಿ ಬ್ಲಾಕ್ ಆರಂಭಿಸಲಾಗಿದೆ ಎಂದು ಹೇಳಲಾಗಿದೆ. ಈ ನಿರ್ಧಾರದಿಂದ ಬೆಂಗಳೂರಿನಲ್ಲಿ ತುಂಬಾ ಒಳ್ಳೆಯ ಚಿಕಿತ್ಸೆ ಹಾಗೂ ಬಡ ರೋಗಿಗಳಿಗೆ ಇದು ಪ್ರಯೋಜನವನ್ನು ನೀಡುತ್ತದೆ. ಟ್ರಾಮಾ ಕೇರ್ಸೆನ್ಸಿ ಟ್ರೀಟ್ಮೆಂಟ್ ಘಟಕದ ಕಟ್ಟಡ ಕೆಲಸ ಶೇ 80% ಪೂರ್ಣಗೊಂಡಿದೆ, ಮುಂದಿನ ತಿಂಗಳ ಸೇವೆಗೆ ಲಭ್ಯತೆ. 50ಬೆಡ್ ಸೌಲಭ್ಯದ ಟ್ರಾಮಾ ಕೇರ್ ಸೆಂಟರ್ 14HDU ಬೆಡ್ 2 OT ಸೌಲಭ್ಯ 15 ಐಸಿಯು ಹಾಗೂ ಎಚ್ ಡಿಯೂ ಬೆಡ್ ವ್ಯವಸ್ಥೆಗಳು ಇರಲಿದೆ ಎಂದು ಹೇಳಲಾಗಿದೆ.

ಇದರೊಂದಿಗೆ ಬ್ಲಡ್ ಬ್ಯಾಂಕ್, ಡಿಎನ್ ಬಿ ಜೊತೆ ಟ್ರಾಮಾ ಕೇರ್ ಸೆಂಟರ್ ಜನರಿಗೆ ಇದು ಸಹಾಯ ಪಾವತಿ. ಜೊತೆಗೆ ಕೆಸಿಜಿ ಆವರಣದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆ ಡಿಸೆಂಬರ್‌ನಲ್ಲಿ ಲೋಕಾರ್ಪಣೆ ಸಿದ್ಧವಾಗುತ್ತಿದೆ. ಹೀಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಶೀಲನೆ ಹೊಂದಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಿಬ್ಬಂದಿ ಕೊರತೆ ಸರಿ ಮಾಡಿದ್ದೇನೆ. ಇನ್ನು ಟ್ರಾನ್ಸಫರ್ ತೊಂದರೆಯನ್ನು ಅನುಭವಿಸುತ್ತಿರುವ ಸಂಪೂರ್ಣವಾಗಿ ಗುತ್ತಿಗೆಯಲ್ಲಿ ತಗೆದುಕೊಳ್ಳಲು ಮುಂದಾಗಿವೆ. ಮುಂದಿನ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಇದಕ್ಕೆ ಚಾಲನೆ ನೀಡಲಿದೆ, ಜನರ ಸೇವೆಗೆ ಸಹಾಯಕವಾಗಿದೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಪವರ್ ಮುಂದೆ ಡಮ್ಮಿಯಾದ ಅರಣ್ಯಾಧಿಕಾರಿಗಳು: ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ

ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ನಾಯಿ ಕಡಿತ ಹಾಗೂ ಹಾವು ಹೆಚ್ಚಾಗಿದ್ದು ಈ ಕಾರಣದಿಂದ ಪಿಎಚ್ ಸಿಟರ್ ನಲ್ಲಿ ಆಂಟಿ-ರೇಬೀಸ್ , ಆ್ಯಂಟಿ ಸ್ನೇಕ್ ವೆನಮ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನಲೆ ಬೆಂಗಳೂರಿನ ಎಲ್ಲ ಪಿಎಸ್ ಸಿ ಸೆಂಟರ್ ಗಳಲ್ಲಿ ಶೇಖರಣೆಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಆಂಟಿ-ರೇಬೀಸ್ ಚುಚ್ಚುಮದ್ದು ಇರಲೇಬೇಕು ಎಂದು ಸೂಚನೆ ನೀಡಲಾಗಿದೆ. ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಅನಕೂಲಕ್ಕೆ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹೈಟೆಕ್ ಟ್ರಾಮಾ ಕೇರ್ ಸೆಂಟರ್, ಬ್ಲಡ್ ಬ್ಯಾಂಕ್ ಸೇರಿದ್ದಂತೆ, ಬೇರೆ ಬೇರೆ ಚಿಕಿತ್ಸೆಗೆ ಅವಕಾಶ ನೀಡುವ ಗುರಿಯನ್ನು ಹೊಂದಿದ್ದು, ಈ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮುಂದಿನ ತಿಂಗಳ ಕೊನೆಯಲ್ಲಿ ಜನರ ಸೇವೆಗೆ ಸಿದ್ಧ ಎಂದು ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *