2019ರಲ್ಲಿ ತಮಿಳಿನಲ್ಲಿ ಬಂದ ‘ಕೈದಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಕಾರ್ತಿ ನಟಿಸಿದ್ದರು. ಡಿಲ್ಲಿ ಪಾತ್ರ ಮೆಚ್ಚುಗೆ ಪಡೆಯಿತು. ಡ್ರಗ್ಸ್ ಕಥೆಯನ್ನು ಆಧರಿಸಿ ಸಿನಿಮಾ ಸಿದ್ಧಗೊಂಡಿತ್ತು. ಈ ಚಿತ್ರವನ್ನು ಜನರು ಹಾಡಿ ಹೊಗಳಿದರು. ಈ ಚಿತ್ರ ನಿರ್ದೇಶನ ಮಾಡಿದ್ದು ಲೋಕೇಶ್ ಕನಕರಾಜ್ (ಲೋಕೇಶ್ ಕನಕರಾಜ್) ಅವರು. ಇದಕ್ಕೆ ಸೀಕ್ವೆಲ್ ಮಾಡುವ ಬಗ್ಗೆ ಆಗಲೇ ಘೋಷಣೆ ಮಾಡಿದರು. ಆದರೆ, ಈ ಚಿತ್ರ ರಿಲೀಸ್ ಆಗಿ ಏಳು ವರ್ಷಗಳು ಕಳೆದು ಹೋಗಿವೆ. ಆದಾಗ್ಯೂ ಭಾಗ 2 ಬಗ್ಗೆ ಯಾವುದೇ ಟಾಕ್ ಇಲ್ಲ. ನಿರ್ದೇಶಕನ ಅತಿ ಆಸೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
‘ಕೈದಿ’ ಬಳಿಕ ಲೋಕೇಶ್ ಅವರು ‘ಮಾಸ್ಟರ್’, ‘ವಿಕ್ರಮ್’, ‘ಲಿಯೋ’, ‘ಕೂಲಿ’ ಸಿನಿಮಾ ನಿರ್ದೇಶನ ಮಾಡಿದರು. ವಿಕ್ರಮ್ ಉಳಿದಿತ್ತು ಉಳಿದೆಲ್ಲವೂ ಸಾಧಾರಣ ಎನಿಸಿಕೊಂಡ. ಆದಾಗ್ಯೂ ಅವರಿಗೆ ಇರೋ ಬೇಡಿಕೆ ಕಡಿಮೆ ಆಗಿಲ್ಲ. ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ‘ಕೈದಿ 2’ ಬಗ್ಗೆ ಚರ್ಚೆ ನಡೆದಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಕೈದಿ 2’ ಅಲ್ಲಿ ಸೆಟ್ಟೇರಬೇಕಿತ್ತು. ಆದರೆ, ಲೋಕೇಶ್ ಅವರ ಅತಿ ಆಸೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅವರು ಈ ಚಿತ್ರ ನಿರ್ದೇಶನ ಮಾಡಲು 75 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರಂತೆ. ನಿರ್ಮಾಪಕರ ಪಾಲಿಗೆ ಇದು ನಿಜಕ್ಕೂ ದೊಡ್ಡ ಹೊರೆ. ಇಷ್ಟು ಮೊತ್ತದ ಸಂಭಾವನೆಯನ್ನು ನಿರ್ದೇಶಕರಿಗೆ ಕೊಡಲು ನಿರ್ಮಾಪಕರು ರೆಡಿ ಇಲ್ಲ.
ಕೈತಿ 2 ವಿಳಂಬಕ್ಕೆ ಕಾರಣಗಳು —
ಲೋಕಿಯ ಹೆಚ್ಚಿನ ಸಂಬಳದ ಪ್ಯಾಕೇಜ್ ಅವರ ಹೊಸ ಚಲನಚಿತ್ರಕ್ಕೆ ಪ್ರಾಥಮಿಕ ಕಾರಣ @ಅಲ್ಲುಅರ್ಜುನ್ಅವರು ಸುಮಾರು 75 ಕೋಟಿ ಗಳಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅದು ಅವರು ತಮ್ಮ ಹಳೆಯ ಚಿತ್ರಗಳಿಗೆ ಗಳಿಸಿದ್ದಕ್ಕಿಂತ ದುಪ್ಪಟ್ಟು!
ಒಳಗಿನ ವದಂತಿಯು ಲೋಕೇಶ್ ಮತ್ತು ನಟ ಕಾರ್ತಿ ಇರಬಹುದು ಎಂದು ಸೂಚಿಸುತ್ತದೆ… pic.twitter.com/NGGfP5F6xJ
— ಲೆಟ್ಸ್ X OTT ಗ್ಲೋಬಲ್ (@LetsXOtt) ಜನವರಿ 19, 2026
ಪ್ರಶ್ನೆ: #ಲೋಕೇಶ್ಕನಗರಾಜ್ ನಿರ್ದೇಶಿಸಲು ಹೋಗಿದ್ದಾರೆ #ಅಲ್ಲು ಅರ್ಜುನ್. ಸ್ಥಿತಿ ಏನಾಗಿದೆ #ಕೈತಿ2 ..❓#ಕಾರ್ತಿ : ಅವರೆ ಸೊಲ್ವರು..!!
ಕೈತಿ 2..🚶 ನಿಂದ ಕಾರ್ತಿ ಮುಂದೆ ಹೋಗಿರುವಂತೆ ತೋರುತ್ತಿದೆpic.twitter.com/UfJ5POcylO
– ಲಕ್ಷ್ಮೀಕಾಂತ್ (@iammoviebuff007) ಜನವರಿ 17, 2026
ಇತ್ತೀಚೆಗೆ ಲೋಕೇಶ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ನೀಡುತ್ತಿರುವ ಪರ್ಫಾರ್ಮೆನ್ಸ್ ನೋಡಿದರೆ ಹಾಕಿದ ಹಣ ಸಿಗುತ್ತದೆ ಎಂಬ ಭರವಸೆ ಇಲ್ಲ. ಹೀಗಾಗಿ, ಸುಖಾಸುಮ್ಮನೆ ಬಜೆಟ್ ಹೆಚ್ಚಿಸಿಕೊಳ್ಳುವ ಬದಲು ಸುಮ್ಮನೆ ಇರೋದೇ ಬೆಸ್ಟ್ ಎಂಬ ಆಲೋಚನೆ ನಿರ್ಮಾಪಕರಿಗೆ ಬಂದಿದೆಯಂತೆ.
ಇದನ್ನೂ ಓದಿ: ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಚಿತಾ ರಾಮ್?
ಇತ್ತೀಚೆಗೆ ‘ಕೈದಿ 2’ ಬಗ್ಗೆ ಕಾರ್ತಿಗೆ ಕೇಳಲಾಗಿದೆ. ‘ನಿರ್ದೇಶಕರೇ ಆ ಬಗ್ಗೆ ಮಾಹಿತಿ ಕೊಡ್ತಾರೆ’ ಎಂದು ಹೇಳಿ ಜಾರಿಕೊಂಡಿದ್ದಾರೆ. ಅವರು ಈ ವಿಷಯದಲ್ಲಿ ಬೇಸರದಲ್ಲಿ ಇರುವುದು ಸ್ಪಷ್ಟವಾಗಿದೆ. ಕಾರ್ತಿ ಹಾಗೂ ಲೋಕೇಶ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತು ಕೂಡ ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 9:03 am, ಮಂಗಳವಾರ, 20 ಜನವರಿ 26