Headlines

ವೋಟ್ ಚೋರಿ ಕೇಸ್​​: ಕಲಬುರಗಿಯ 5 ಮನೆಗಳ ಮೇಲೆ ಎಸ್​ಐಟಿ ದಾಳಿ, ಸಾವಿರಾರು ವೋಟರ್ ಐಡಿ ಪತ್ತೆ

ವೋಟ್ ಚೋರಿ ಕೇಸ್​​: ಕಲಬುರಗಿಯ 5 ಮನೆಗಳ ಮೇಲೆ ಎಸ್​ಐಟಿ ದಾಳಿ, ಸಾವಿರಾರು ವೋಟರ್ ಐಡಿ ಪತ್ತೆ


ಎಸ್ ಐಟಿ ಅಧಿಕಾರಿಗಳಿಂದ ಪರಿಶೀಲನೆ

ಕಲಬುರಗಿ, ಅಕ್ಟೋಬರ್ 16: ಕಲಬುರಗಿಯ (ಕಲಬುರ್ಗಿ) ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯ ಮತಗಳ ಪ್ರಕರಣ (ವೋಟ್ ಚೋರಿ ಕೇಸ್) ತನಿಖೆಗಾಗಿ ನಗರದ ಐದು ಮನೆಗಳ ಮೇಲೆ ಬುಧವಾರ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಆರೋಪಿ ಅಕ್ರಂ ಮನೆಯಲ್ಲಿ ರಾಶಿ ರಾಶಿ ವೋಟರ್ ಐಡಿಗಳು ಪತ್ತೆ ಆಗಿವೆ. ಒಟ್ಟು 15 ಮೊಬೈಲ್ ಫೋನ್, 7 ಲ್ಯಾಪ್ ಟಾಪ್ ಗಳನ್ನು ಎಸ್ಸೈಟಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಇಂದು ಸಹ ಎಸ್ಐಟಿ ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರಿಯಲಿದೆ.

ಕಳೆದೊಂದು ತಿಂಗಳಿನಿಂದ ಸಾಕಷ್ಟು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಎಸ್ ಐಟಿ ಅಧಿಕಾರಿಗಳು ಕೊನೆಗೂ ನಿನ್ನೆ ನಗರದ ಐದು ಕಡೆಗಳಲ್ಲಿ ದಾಳಿ ನಡೆಸಿ ಪರೀಶಿಲನೆ ನಡೆಸಿದ್ದಾರೆ. ನಗರದ ರೋಜಾ ಬಡಾವಣೆ ಅಷ್ಪಾಕ್, ಜುಂಜುಂ ಕಾಲೋನಿಯ ನದೀಂ ಹಾಗೂ ಅಕ್ರಂ, ರಾಮನಗರ ಬಡಾವಣೆಯ ಅಸ್ಲಂ ಹಾಗೂ ಯಾದುಲ್ ಕಾಲೋನಿಯ ಮೊಹಮ್ಮದ ಜುನೈದ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದು, ದಾಳಿ ವೇಳೆ ಲ್ಯಾಪ್ ಟಾಪ್ ಸೇರಿದಂತೆ ಕೆಲ ಕಡತಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಆಳಂದ ಮತಗಳ್ಳತನ ಪ್ರಕರಣದ ತನಿಖೆಗೆ ಎಸ್ ಐಟಿ ರಚನೆ; ಸಿಎಂ ಸಿದ್ದರಾಮಯ್ಯ ಆದೇಶ

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬರಬೇಕಾದ 6038 ಮತಗಳನ್ನೇ ಡಿಲಿಟ್ ಮಾಡಲು ಯತ್ನಿಸಿದ ಎಂಬ ಆರೋಪ ಕೇಳಿಬಂದಿತ್ತು. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ ಪ್ಲ್ಯಾನ್ ಮಾಡಿರುವಾಗ ಆರೋಪಿಸಲಾಗಿದೆ, ರಾಜ್ಯ ಸರ್ಕಾರ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

2023ರಲ್ಲಿ ಅಂದು ಚುನಾವಣಾ ಅಧಿಕಾರಿಗಳು ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಎಸ್‌ಐಟಿ ರಚಿಸಿ ತನಿಖೆಗೆ ಒಳಪಡಿಸಲಾಗಿತ್ತು. ಅದಾದ ಬಳಿಕ ರಾಜ್ಯದಲ್ಲಿ ಎರಡು ಪಕ್ಷಗಳ ನಡುವೆ ಟಾಕ್ ಫೈಟ್ ಸಹ ನಡೆದಿತ್ತು. ಇದರ ಬೆನ್ನಲ್ಲೇ ನಿನ್ನೆ ಕಲಬುರಗಿ ಸುಮಾರು ಎಸ್ ಐಟಿ ದಾಳಿ ಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

ಸದ್ಯ ಎಸ್ ಐಟಿ ತಂಡ 5 ಮನೆಗಳ ಮೇಲೆ ದಾಳಿ ಮಾಡಿ ವೋಟರ್ ಐಡಿಗಳು ಸೇರಿದಂತೆ ಪ್ರಮುಖ ಕಡತಗಳನ್ನು ಸಂಗ್ರಹಿಸಲಾಗಿದೆ. ಆ ಕಡತಗಳ ಪರಿಶೀಲನೆ ಬಳಿಕವೇ ಮುಂದಿನ ತನಿಖೆ ನಡೆಸಲಿದೆ. ಹೀಗಾಗಿ ಎರಡು ರಾಜಕೀಯ ಪಕ್ಷದ ಕಣ್ಣು ಇದೀಗ ಎಸ್ ಐಟಿ ತನಿಖೆ ಮೇಲೆ ಮೇಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *