ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ, ನಿರ್ಗಮನ ಸಮಯ, ಮಾರ್ಗ ಸೇರಿದಂತೆ ಕೆಲ ಮಹತ್ತರ ಬದಲಾವಣೆ ಮಾಡಲಾಗಿದೆ. ರೈಲು ಬದಲಾವಣೆ ವಿವರವನ್ನು ಸಚಿವಾಲಯ ಪ್ರಕಟಿಸಿದೆ.

ಭಾರತೀಯ ರೈಲ್ವೇ ರೈಲುಗಳ ಪೈಕಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಭಾರಿ ಬೇಡಿಕೆ. ಹಂತ ಹಂತವಾಗಿ ವಂದೇ ಭಾರತ್ ರೈಲುಗಳನ್ನು ವಿಸ್ತರಣೆ ಮಾಡಲಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಪ್ರಯಾಣಿಕರಿಗೆ ನಿರಂತರವಾಗಿ ಸೇವೇ ನೀಡುತ್ತಿದೆ. ಆದರೆ ಹೊಸ ವರ್ಷದಿಂದ (ಜನವರಿ 1, 2026) ಬೆಂಗಳೂರು-ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವೇಳಾಪಟ್ಟಿಯಲ್ಲಿ ಮಹತ್ತರ ಬದಲಾವಣೆ ಮಾಡಲಾಗುತ್ತಿದೆ.

ಸೌತ್ ವೆಸ್ಟರ್ನ್ ರೈಲ್ವೇ (SWR) ನಿರ್ವಹಣೆ ಮಾಡುವ ಕಲಬುರಗಿ SMVT -ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು 2024ರ ಮಾರ್ಚ್ ತಿಂಗಳಲ್ಲಿ ಉದ್ಘಾಟನೆಗೊಂಡಿತ್ತು. ಎರಡು ರೈಲು ಈ ಮಾರ್ಗದಲ್ಲಿ ಸೇವೆ ನೀಡುತ್ತಿದೆ. ರೈಲು ಸಂಖ್ಯೆ 22231 ಹಾಗೂ ರೈಲು ಸಂಖ್ಯೆ22232 ರೈಲುಗಳು ಸೇವೆ ನೀಡುತ್ತಿದೆ. ಗುರುವಾರ ಹೊರತುಪಡಿಸಿ ಇನ್ನುಳಿದ ಎಲ್ಲಾ ದಿನ ಪ್ರಯಾಣಕರಿಗೆ ಸೇವೆ ನೀಡುತ್ತಿದೆ.

ಬೆಂಗಳೂರು ಕಲಬುರಗಿ ಬೆಂಗಳೂರು ವಂದೇ ಭಾರತ್ ರೈಲು ಮಾರ್ಗ, ನಿಲುಗಡೆಯಲ್ಲೂ ಬದಲಾವಣೆ ಮಾಡಲಾಗಿದೆ. ಹೊಸದಾಗಿ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮಾರ್ಗದ ಮೂಲಕ ಸಾಗಲಿದೆ.ಇದೇ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಇನ್ನು ಯಾದಗಿರಿ, ರಾಯಚೂರು, ಮಂತ್ರಲಾಯ ರಸ್ತೆ, ಗುಂಟಕಲ್, ಅನಂತಪುರ, ಯಲಂಹಕಾ ಜಂಕ್ಷನ್ಗಳ ನಿಲುಗಡೆ ಯಥಾ ಪ್ರಕಾರ ಮುಂದುವರಿಯಲಿದೆ.

ಕಲಬುರಗಿಯಿಂದ ಬೆಂಗಳೂರು ಹೊರಡುವ 22231 ರೈಲು ಕಲಬುರಗಿಯಿಂದ ಬೆಳಗ್ಗೆ 6.10ಕ್ಕೆ ಹೊರಡಲಿದೆ. ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಂಯ ನಿಲ್ದಾಣಕ್ಕೆ 11 ಗಂಟೆಗೆ ಆಗಮಿಸಲಿದೆ. ಬೆಂಗಳೂರಿಗೆ ಮಧ್ಯಾಹ್ನ 2.00 ಗಂಟೆಗೆ ಆಗಮಿಸಿಲಿದೆ.

ರೈಲು ಸಂಖ್ಯೆ 22232 ಬೆಂಗಳೂರಿನಿಂದ ಮಧ್ಯಾಹ್ನ 2.40ಕ್ಕೆ ಹೊರಡಲಿದೆ. ಸಂಜೆ ವೇಳೆ ಹೊಸದಾಗಿ ನಿಲುಗಡೆ ಮಾಡಿರುವ ಸಾಯಿ ಸತ್ಯ ನಿಲಯಂಗೆ ಬರಲಿದೆ. ಕಲಬುರಗಿಗೆ ರಾತ್ರಿ 10.45ಕ್ಕೆ ತಲುಪಲಿದೆ. ಇನ್ನು ಸದ್ಯ ಇರುವ ನಿಲುಗಡೆಗಳಲ್ಲಿ ರೈಲು ನಿಲುಗಡೆಯಾಗಲಿದೆ.

ಬೆಂಗಳೂರು ಟು ಕಲಬರುಗಿ ಸಮಯ

ಬೆಂಗಳೂರು ಕಲಬುರಗಿ ಬೆಂಗಳೂರು ರೈಲು ಟಿಕೆಟ್ ದರ ಎಸಿ ಚೇರ್ಗೆ 1,475 ರೂಪಾಯಿ ಹಾಗೂ ಎಕ್ಸಿಕ್ಯೂಟೀವ್ ಚೇರ್ ಟಿಕೆಟ್ ಬೆಲೆ 2,710 ರೂಪಾಯಿ ನಿಗದಿ ಮಾಡಲಾಗಿದೆ.

ವಂದೇ ಭಾರತ್ ರೈಲು ಟಿಕೆಟ್

Source link
ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ