
ಕಲಬುರಗಿ, ಮಾರ್ಚ್ 13: ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ ನಮ್ಮ ರಾಜ್ಯಕ್ಕೂ ಅದರ ಪರಿಣಾಮ ನೇರವಾಗಿ ತಟ್ಟಿದೆ. ಸಿಲಿಂಡರ್ಗಳು (LPG ಸಿಲಿಂಡರ್) ಪೂರೈಕೆಯಲ್ಲಿ ವ್ಯತ್ಯಯ ಶುರುವಾಗಿದೆ. ಇತ್ತ ಕಲಬುರಗಿಯಲ್ಲಿ ಇಂದಿರಾ ಕ್ಯಾಂಟಿನ್ (ಇಂದಿರಾ ಕ್ಯಾಂಟೀನ್)ಅಡುಗೆ ಮಾಡುವುದಕ್ಕೆ ಸೌದೆ ಒಲೆಯೇ ಗತಿ ಎನ್ನುವಂತಾಗಿದೆ.
ಕಳೆದ ಹತ್ತು ದಿನಗಳಿಂದ ಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದೆ. ಅದು ಎಲ್ಲಿಜಿ ಸಿಲಿಂಡರ್ ಮೇಲೆ ನೇರ ಪರಿಣಾಮ ಬೀರಿತು. ಇರಾನ್ – ಇಸ್ರೇಲ್ ಯುದ್ದದಿಂದ ಕಲಬುರಗಿಯಲ್ಲಿಯೂ ನಿನ್ನೆಯಿಂದಲೇ ಕಮರ್ಷಿಯಲ್ ಸಿಲಿಂಡರ್ ಕೊರತೆ ಜನ, ಹೋಟೆಲ್ ಉದ್ಯಮಿಗಳು ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!
ಇಂದಿರಾ ಕ್ಯಾಂಟಿನ್ ಗೂ ಸಿಲಿಂಡರ್ ಸಪ್ಲೈ ಬಂದ್ ಆದ ಹಿನ್ನಲೆ ಸಿಬ್ಬಂದಿ ಸೌದೆ ಓಲೆ ಮೋರೆ ಹೋಗಿದ್ದಾರೆ. ಕಲಬುರಗಿ ನಗರದ ಎಂಟು ಇಂದಿರಾ ಕ್ಯಾಂಟಿನ್ಗಳಿಗೆ ಸೌದೆ ಓಲೆ ಮೇಲೆಯೇ ಅಡುಗೆ ಮಾಡಲಾಯಿತು. ಏಕೆಂದರೆ ನಿನ್ನೆಯವರೆಗೂ ತಮ್ಮ ಬಳಿ ಇದ್ದ ಸಿಲಿಂಡರ್ಗಳ ಮೂಲಕ ಸಿಬ್ಬಂದಿ ಅಡುಗೆ ಮಾಡಿದ್ದಾರೆ. ಆದರೆ ಸಿಲಿಂಡರ್ ಸಿಗದ ಕಾರಣ, ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನ ಸೌದೆ ಒಲೆಯಲ್ಲಿಯೇ ಮಾಡಿದ್ದಾರೆ.
ಅಷ್ಟೆ ಜೊತೆಗೆ ಚಪಾತಿಯನ್ನ ಹೊರಗಡೆಯಿಂದ ಖರೀದಿ ಮಾಡಿ ಜನರಿಗೆ. ಇನ್ನು ಆಸ್ಪತ್ರೆಗಳ ಪಕ್ಕ ಇರುವ ಇಂದಿರಾ ಕ್ಯಾಂಟಿನ್ನಲ್ಲಿ ಇಡ್ಲಿ, ಸಾಂಬರ್ಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಸಿಲಿಂಡರ್ ಇಲ್ಲದ ಪರಿಣಾಮ ಕೇವಲ ಉಪ್ಪಿಟ್ಟು, ಅವಲಕ್ಕಿ ಮಾಡಲಾಗುತ್ತಿದೆ. ಸೌದೆ ಒಲೆ ಮೇಲೆ ಅಡುಗೆ ಮಾಡುವುದಕ್ಕೆ ಕೆಲಸಗಾರರು ಮುಂದೆ ಬರ್ತಿಲ್ಲ, ಆದರೆ ಬಡವರು ಉಪವಾಸ ಇರಬಾರದು ಎಂಬ ಕಾರಣಕ್ಕೆ ನಾವೇ ಅಡುಗೆ ಮಾಡುತ್ತೇನೆ ಎಂದು ಸಿಬ್ಬಂದಿ ಬಸವರಾಜ್ ಹೇಳುತ್ತಾರೆ.
ರಾಜ್ಯದಲ್ಲಿ ಯಾವಾಗ ಸಿಲಿಂಡರ್ ಸಮಸ್ಯೆ ಉದ್ಭವವಾಯ್ತೋ, ಅಲ್ಲಿಗೆ ಹೋಟೆಲ್, ದಾಬಾ ಹಾಗೂ ಮದುವೆ ಕಾರ್ಯಕ್ರಮಗಳಿಗೆ ಕೇಟರಿಂಗ್ ನವರು ಸೌದೆ ಒಲೆಯತ್ತ ಮುಖ ಮಾಡಿದ್ದಾರೆ. ಅದಕ್ಕಾಗಿ ಕಟ್ಟಿಗೆ ಅಡ್ಡೆಗಳಲ್ಲಿ ಸೌದೆ ಖರೀದಿ ಮಾಡಲು ಮುಗಿದಿದೆ. ವಿವಿಧ ಕಾರ್ಯಕ್ರಮಗಳಿಗೆ ಅಡುಗೆ ಗುತ್ತಿಗೆ ಹಿಡಿದಿರುವ ಕೇಟರಿಂಗ್ನವರಿಗೆ ಗ್ಯಾಸ್ ಟ್ರಬಲ್ ಎದುರಾಗಿದೆ. ಹೀಗಾಗಿ ಸೌದೆ ಒಲೆಯಲ್ಲೇ ಅಡುಗೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಇದೆಂಥಾ ಕಾಲ ಬಂತಪ್ಪಾ… ಹೋಟೆಲ್ಗಳ ಬಿಲ್ನಲ್ಲಿ ಜಿಎಸ್ಟಿ ಜತೆ ಸೇರ್ಪಡೆಯಾಯ್ತು ಗ್ಯಾಸ್ ಶುಲ್ಕ!
ಒಟ್ಟಿನಲ್ಲಿ ಸದ್ಯ ಕಲಬುರಗಿಯಲ್ಲಿಯೂ ಸಿಲಿಂಡರ್ ಹಾಕಾರ ಶುರುವಾಗಿದೆ. ಮುಂದೆ ಅದ್ಯಾವ ಮಟ್ಟಕ್ಕೆ ಹೋಗುತ್ತೋ ಕಾದುನೋಡಬೇಕು. ಏಕೆಂದರೆ ಸಿಲಿಂಡರ್ ಸಿಗದಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗೋದು ಕಟ್ಟಿಟ್ಟತ್ತಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.