ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ
ಕಲಬುರಗಿ, (ಅಕ್ಟೋಬರ್ 30): ಇದೇ ನವೆಂಬರ್ 2 ರಂದು ಚಿತ್ತಾಪುರದಲ್ಲಿ (ಚಿತ್ತಾಪುರ) ಆರ್ ಎಸ್ ಎಸ್ (ಆರ್ಎಸ್ಎಸ್) ಪಥಸಂಚಲನ ಸಂಬಂಧ ನ್ಯಾಯಾಲಯ, ವಿಚಾರಣೆಯನ್ನು ಮುಂದೂಡಲಾಗಿದೆ. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ವಿಭಾಗೀಯ ಪೀಠ (ಕಲಬುರಗಿ ಉಚ್ಚ ನ್ಯಾಯಾಲಯದ ಪೀಠ) ಮತ್ತೊಂದು ಶಾಂತಿ ಸಭೆಯನ್ನು ಇದೇ ನವೆಂಬರ್ 5 ರಂದು ಬೆಂಗಳೂರಿನಲ್ಲಿ ನಡೆಸಲು ಸೂಚಿಸಲಾಗಿದೆ. ಹೀಗಾಗಿ ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಮುಂದಾಗಿದ್ದ ಆರ್ ಎಸ್ ಎಸ್ ಗೆ ಹಿನ್ನಡೆಯಾಗಿದೆ.
ವಾದ ಪ್ರತಿವಾದ ವಿವರ ಇಲ್ಲಿದೆ
ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ : ಶಾಂತಿಗೆ ರಿಟ್ ಅರ್ಜಿದಾರರೇ ಸಭೆ ಸೇರಿರಲಿಲ್ಲ . ವಿವಾದವನ್ನು ಶೀಘ್ರ ಮುಗಿಸಲು ಅರ್ಜಿದಾರರೇ ನೀಡುತ್ತಿಲ್ಲ. ಅರ್ಜಿದಾರರಿಗೆ ಬದಲಾಗಿ ಬೇರೆ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ.
RSS ಪರ ವಕೀಲ ಅರುಣ್ ಶ್ಯಾಮ್: ಅರ್ಜಿದಾರರ ಮನೆಯಲ್ಲಿ ಸಾವು ಸಂಭವಿಸಿದರೂ ಅವರು ಬಂದಿರಲಿಲ್ಲ.
ಹೆಚ್ಚಿನ: ಅರ್ಜಿದಾರರೇ ಶಾಂತಿಸಭೆಗೆ ಹಾಜರಾಗದೆ, ಅರ್ಜಿದಾರರು ಅಥವಾ ಅವರ ವಕೀಲರು ಸಭೆಗೆ ಹಾಜರಾಗಬಹುದಿತ್ತು. ನೀವು ಅರ್ಹತೆಯ ಮೇಲೆ ವಾದ ಮಂಡಿಸಿ ವಿಚಾರಣೆ ನಡೆಸೋಣ. ಯಾರಿಗಿ ವಿಚಾರಣೆ ಗೊತ್ತಿರುತ್ತದೋ ಅವರೇ ಶಾಂತಿಸಭೆಗೆ ಹಾಜರಾಗಬೇಕಿತ್ತು. ನಾವು ಹೇಳಿದ್ದಕ್ಕೂ ಒಂದು ಕಾರಣವಿತ್ತು ಎಂದು ತಿಳಿಯಬೇಕಿತ್ತು.
ಅರುಣ್ ಶ್ಯಾಮ್: ರಿಟ್ ಅರ್ಜಿದಾರರು ಶಾಂತಿಸಭೆಗೆ ಹೋಗದ್ದಕ್ಕೆ ಸಹ ಒಂದು ಕಾರಣವಿತ್ತು. ಪರ ವಕೀಲರಿಗೆ ಅರ್ಜಿ ಸಲ್ಲಿಸಿಲ್ಲ. ಮತ್ತೊಂದು ಸಬೆ ನಡೆಸಿದರೆ ಹಾಜರಾಗುತ್ತೇವೆ.
ಶಶಿಕಿರಣ್ ಶೆಟ್ಟಿ: ನವೆಂಬರ್ 5 ರಂದು ಬೆಂಗಳೂರಿನಲ್ಲೇ ಸಭೆ ನಡೆಸಲು ಸಿದ್ಧ. ಸಮಸ್ಯೆಯನ್ನು ಬಗೆಹರಿಸುವುದಷ್ಟೇ ನಮ್ಮ ಉದ್ದೇಶವೆಂದು ಎಜಿ.