ಬಂಧಿತ ಆರೋಪಿಗಳ ಜೊತೆಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ
ಕಲಬುರಗಿ, ಫೆಬ್ರವರಿ 02: ದೆಹಲಿ ಪೊಲೀಸರ ಸೋಗಿನಲ್ಲಿ ದರೋಡೆ ಮಾಡ್ತಿದ್ದ ನಟೋರಿಯಸ್ ಗ್ಯಾಂಗ್ ನ ಖೆಡ್ಡಾಕ್ಕೆ ಕೆಡವುವಲ್ಲಿ ಕೊನೆಗೂ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಐದು ರಾಜ್ಯಗಳ ಪೊಲೀಸರು ನಿದ್ದೆಗೆಡಿಸಿದ್ದರು ಎನ್ನಲಾಗಿದ್ದು, ಅಂತಾರಾಜ್ಯ ದರೋಡೆಕೋರರಿಂದ ದೆಹಲಿ ಪೊಲೀಸರ ನಕಲಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 90 ಗ್ರಾಂ ಚಿನ್ನಾಭರಣ ಸೇರಿದರೆ ಬರೋಬ್ಬರಿ 27 ಲಕ್ಷ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ.
ದೆಹಲಿ ಮತ್ತು ಭೂಪಾಲ್ ಮೂಲದ ಜಹೀರ್ ಅಬ್ಬಾಸ್ ಅಲಿ, ಖಾಸೀಂ ಯೂಸುಫ್ ಅಲಿ, ಅಲಿ ಮಿರ್ಜಾ, ಅಲಿ ರಾಜಾ ಶೇಖ್ ಬೇಗ್, ಲಾಲ್ ಶೇಖ್, ಜಫರ್ ಮತ್ತು ಜಫರ್ ಆಸೀಮ್ ಬಂಧಿತ ಆರೋಪಿಗಳಾಗಿದ್ದಾರೆ. ದೆಹಲಿ ಪೊಲೀಸರ ಸೋಗಿನಲ್ಲಿ ಸಾರ್ವಜನಿಕ ಚಿನ್ನಾಭರಣ ಟಿ ಮಾಡಿ ಗ್ಯಾಂಗ್ ಎಸ್ಕೇಪ್ ಆಗಲೂ ಸಹ ಎನ್ನಲಾಗಿತ್ತು, ಕಳೆದ ವಾರವಷ್ಟೆ ತೆಲಂಗಾಣ ಮೆಹಬೂಬ್ ನಗರದಲ್ಲಿ ಎರಡೂ ಕಡೆ ಖದೀಮರು ದರೋಡೆ ನಡೆಸಿದ್ದರು. ಬಳಿಕ ಕಲಬುರಗಿಗೆ ಎಂಟ್ರಿ ಕೊಟ್ಟಿದ್ದ ಈ ತಂಡದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅರ್ಬನ್ ಪೊಲೀಸರು ನಗರದ ತಾವರಗೇರಾ ಕ್ರಾಸ್ ಬಳಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇನ್ನು ಈ ಗ್ಯಾಂಗ್ ಸುಳಿವು ಕೊಟ್ಟ ದೆಹಲಿ ಪೊಲೀಸ್ ಇಲಾಖೆ 2 ಲಕ್ಷ ಬಹುಮಾನ ಘೋಷಣೆ ಮಾಡಿದರೂ ಆರೋಪಿಗಳ ಸುಳಿವು ಸಿಕ್ಕಿಲ್ಲ. ಆದರೆ ಕಲಬುರಗಿ ಪೊಲೀಸರ ಕೈಗೀಗ ಖದೀಮರು ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಸಿನಿಮಾ ಸ್ಟೈಲಲ್ಲಿ ಯುವಕನ ಅಡ್ಡಗಟ್ಟಿ, ಲಾಂಗ್ ಬಿಸಿ 31 ಕ್ಷ ರೂ. ದರೋಡೆ; ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ಕೃತ್ಯ
ಇನ್ನು ಈ ಗ್ಯಾಂಗ್‌ನ ಏಳು ಜನರಲ್ಲಿ ಇಬ್ಬರು ಪಿಎಸ್‌ಐ ಎಂದು ಹೇಳಿಕೊಂಡು ಫೀಲ್ಡಿಗಿಳಿಯುತ್ತಿದ್ದರು. ಮುಂದೆ ಕಳ್ಳರು ಇದ್ದಾರೆಂದು ರಸ್ತೆಯಲ್ಲಿ ತೆರಳುವ ಕಾರು ಮತ್ತು ಬೈಕ್ ಸವಾರರನ್ನು ನಂಬಿಸಿ, ನಿಮ್ಮ ಬಳಿ ಇರುವ ಚಿನ್ನಾಭರಣ ನಮ್ಮ ಬಳಿ ಕೊಡಿ ಎನ್ನುತ್ತಿದ್ದಾರೆ. ಅಷ್ಟರಲ್ಲಿ ಉಳಿದವರು ದರೋಡೆಕೋರರಂತೆ ಬಂದಾಗ ಅವರಿಂದ ಕಾಪಾಡಿದ್ದೇವೆ ಎಂಬಂತೆ ಬಿಂಬಿಸಿ ಚಿನ್ನಾಭರಣ ಪಡೆಯುತ್ತಿದ್ದ ಇಬ್ಬರು ನಕಲಿ ಅಧಿಕಾರಿಗಳು ಕ್ಷಣಮಾತ್ರದಲ್ಲಿ ಅವರಿಗೆ ನಕಲಿ ಚಿನ್ನಾಭರಣ ನೀಡುತ್ತಿದ್ದರು. ಇದೇ ರೀತಿ ದೆಹಲಿ, ಮಹಾರಾಷ್ಟ್ರ, ತೆಲಂಗಾಣ , ಮಧ್ಯಪ್ರದೇಶ, ಆಂಧ್ರ ಪ್ರದೇಶದ ಹಲವೆಡೆ ಲಕ್ಷ ಲಕ್ಷದ ಚಿನ್ನಾಭರಣವನ್ನು ಆರೋಪಿಗಳು ಲೂಟಿ ಮಾಡಿದ್ದಾರೆ. ಇದೇ ಗ್ಯಾಂಗ್‌ನ ಆರೋಪಿಯೋರ್ವ ಕಲಬುರಗಿಯ ನೆಂಟಸ್ತನ ಮಾಡಿದ್ದಾನೆ. ಹೀಗಾಗಿ ಇಲ್ಲಿ ರೂಂ ಮಾಡಿಕೊಂಡು ತೆಲಂಗಾಣದ ಮೇಲೆ ದರೋಡೆ ಮಾಡಲಾಗ್ತಿತ್ತು ಎಂಬ ವಿಚಾರವೂ ಬಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.