
ಕಲಬುರಗಿ, ಏಪ್ರಿಲ್ 07: ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಕೊಲೆಯಾದ ಮಹಿಳಾ ಶಾಲಾ ಶಿಕ್ಷಕಿ (ಶಿಕ್ಷಕ) ಜ್ಯೋತಿ ಕಪಾಳೆ ಹಿರೇಮಠ(57) ಎಂಬುದು ಗೊತ್ತಾಗಿದ್ದು, ಕೊಟ್ಟ ಹಣ (ಹಣ) ವಾಪಸ್ ಕೇಳಿದ್ದಕ್ಕೆ ಪರಿಚಯಸ್ಥ ವ್ಯಕ್ತಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂಡು ಶಿಕ್ಷಕಿಯ ಮೃತ ದೇಹವನ್ನು ಸುತ್ತು ಹಾಕಿರೋದು ಹೊತ್ತಾಗಿದೆ. ಪ್ರಕರಣ ಸಂಬಂಧ ಆರೋಪಿ ಆನಂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಜ್ಯೋತಿ ಕಪಾಳೆ ಹಿರೇಮಠ ಕೆಲಸ ಮಾಡುತ್ತಿದ್ದರು. ಹೀಗಾಗಿ ಬೀದರ್ ನಲ್ಲಿಯೇ ಮನೆಗೆ ಹೋಗಿ ಶಾಲೆಗೆ ಬರಲು. ಆದರೆ ವಾರಕೊಮ್ಮೆ ಕಲಬುರಗಿಗೆ ಬಂದು ವಾಪಸ್ ತೆರಳುವ ಅಭ್ಯಾಸ ಅವರಿಗೆ ಇತ್ತು. ಹೀಗೆ ಬಂದವರು ಕಲಬುರಗಿಯಿಂದ ಬೀದರ್‌ಗೆ ತೆರಳುವಾಗ ಆರೋಪಿ ಕೊಲೆಗೈದಿದ್ದಾನೆ. ಶಿಕ್ಷಕಿ ಜ್ಯೋತಿಗೆ ಪರಿಚಯವಾಗಿದ್ದ ಆರೊಪಿ ಅವರಿಂದ 14 ಲಕ್ಷ ಹಣ ಪಡೆದಿದ್ದಾರೆ. ಕೊಟ್ಟ ಈ ಹಣವನ್ನು ಜ್ಯೋತಿ ವಾಪಸ್ ಕೇಳಿರುವುದೇ ಕೊಲೆಗೆ ಕಾರಣ.
ಇದನ್ನೂ ಓದಿ: ಸ್ನೇಹಿತನ ಮನೆಗೆ ಊಟಕ್ಕೆ ಬಂದಿದ್ದ ಗೆಳೆಯರು ಸಾವು; ದೇವರಿಗೆ ಹರಕೆ ತೀರಿಸಲು ಹೋಗಿದ್ದ ಮತ್ತಿಬ್ಬರು ನದಿ ಪಾಲು
ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಮಹಿಳೆಯೋರ್ವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ ಹಿನ್ನೆಲೆ ಬೇರೆಡೆ ಕೊಲೆ ಮಾಡಿ ಶವ ತಂದು ಹಾಕಿರುವ ಶಂಕೆ ವ್ಯಕ್ತವಾಗಿತ್ತು. ಇಡೀ ದೇಹ ಸುತ್ತು ಕೇವಲ ಕಾಲು ಮಾತ್ರ ಉಳಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಈ ಹಿನ್ನೆಲೆ ಸ್ಥಳಕ್ಕೆ ಎಸ್ಪಿ, ಶ್ವಾನದಳ, ಬೆರಳಚ್ಚು ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿ ಬಳಿಕ ತನಿಖೆಗಿಳಿದಾಗ ಕೊಲೆ ಹಿಂದಿನ ಸತ್ಯ ಬಯಲಾಗಿದೆ. ಸದ್ಯ ಆರೋಪಿ ಆನಂದನನ್ನು ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.