Headlines

ಮಹಿಳೆ ಜತೆ ಲಿವಿಂಗ್​​​​​​​ ರಿಲೇಶನ್ ಶಿಪ್​: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ ಈಗ ಜೈಲು ಪಾಲು

ಮಹಿಳೆ ಜತೆ ಲಿವಿಂಗ್​​​​​​​ ರಿಲೇಶನ್ ಶಿಪ್​: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ ಈಗ ಜೈಲು ಪಾಲು


ಕಲಬುರಗಿ, (ಡಿಸೆಂಬರ್ 04): ಲಿ ತನ್ನವ್ ಇನ್ (ಲಿವ್ ಇನ್ ರಿಲೇಶನ್ ಶಿಪ್) ಗೆಳತಿ ಆಸೆ ಪೂರೈಸಲು, ಖರ್ಚು ನಿಭಾಯಿಸಲು ಕಳ್ಳತನಕ್ಕಿಳಿದಿದ್ದ ವ್ಯಕ್ತಿ ಹಾಗೂ ಸಹಾಯ ಮಾಡಿದ್ದವ ಸಿಕ್ಕಿಬಿದ್ದಿದ್ದಾರೆ. ಹೌದು.. ಕೂಲಿ ಕೆಲಸ ಮಾಡುತ್ತಿರುವ ಬಡಪಾಯಿ ಮಹಿಳೆಯನ್ನ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಚಿನ್ನಾಭರಣಗಳನ್ನ ಸುಲಿಗೆ ಮಾಡಿದ್ದ ಇಬ್ಬರು ಕುಖ್ಯಾತ ಸುಲಿಗೆಕೋರರನ್ನ ಕಲಬುರಗಿ ವಿಶ್ವವಿದ್ಯಾಲಯ ಠಾಣೆ (ಕಲಬುರಗಿ ವಿವಿ ಪೊಲೀಸ್) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲ್ಲಪ್ಪ ಅಲಿಯಾಸ್ ಸಂಜು ಸೋಮಣ್ಣ (24) ಬಂಧಿತ ಪ್ರಮುಖ ಆರೋಪಿ, ಇನ್ನು ಕಲ್ಲಪ್ಪನಿಗೆ ಸಹಾಯ ಮಾಡ್ತಿದ್ದ ಸಂತೋಷ್ ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 22 ರಂದು ಓಂ ನಗರ ಗೇಟ್ ಬಳಿ ಕೂಲಿ ಕೆಲಸಕ್ಕೆಂದು ದಾರುನಾಯಕ್ ತಾಂಡಾ ನಿವಾಸಿ ಸುನೀತಾ ರಾಠೋಡ್ ಎಂಬ ಮಹಿಳೆಯನ್ನು ಕಲ್ಲಪ್ಪ ಅಲಿಯಾಸ್ ಸಂಜು ಮತ್ತು ಸಂತೋಷ್, ಕಟ್ಟಡ ನಿರ್ಮಾಣ ಕಾಮಗಾರಿ ಎಂದು ವಾಜಪೇಯಿ ಬಡಾವಣೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿ ಬೆದರಿಸಿ ಕೊರಳಲ್ಲಿನ ಚಿನ್ನದ ಮಾಂಗಲ್ಯವನ್ನು ಸರಿಸಿಕೊಂಡು ಪರಾರಿಯಾಗಿದ್ದರು.

ಇದನ್ನೂ ಓದಿ: ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಲಿವಿಂಗ್ ರಿಲೇಶನ್ ಶಿಪ್: ಪ್ರೇಯಸಿಗಾಗಿ ಕಳ್ಳನಾದ ಪ್ರಿಯಕರ

ಈ ಪ್ರಕರಣ ದಾಖಲಾತಿ ಪಡೆದ ಕಲಬುರಗಿ ವಿವಿ ಪೊಲೀಸರು, ವಾಜಪೇಯಿ ಬಡಾವಣೆಯಲ್ಲಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ, ಈ ವೇಳೆ ಕೂಲಿ ಮಹಿಳೆ ಸುನೀತಾಳನ್ನ ಕರೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಇದರ ಆಧಾರದ ಮೇಲೆ ಕಲ್ಲಪ್ಪ ಅಲಿಯಾಸ್ ಸಂಜು ಮತ್ತು ಸಂತೋಷ್ ಎಂಬಾತರನ್ನ ಬಂಧಿಸಿದ್ದಾರೆ. ಬಂಧಿತ ಸುಲಿಗೆಕೋರರಿಂದ 7.62 ಲಕ್ಷ ಮೌಲ್ಯದ 61 ಗ್ರಾಂ ಚಿನ್ನಾಭರಣ, 600 ಗ್ರಾಂ ಬೆಳ್ಳಿ ವಸ್ತುಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.

ಲಿವ್ ಇನ್ ಗೆಳತಿ ಆಸೆ ಪೂರೈಸಲು ಸುಲಿಗೆ

ಇನ್ನೂ ಕೂಲಿ ಕೆಲಸ ಮಾಡುತ್ತಿರುವ ಕಲ್ಲಪ್ಪ ಅಲಿಯಾಸ್ ಸಂಜು, ಮಹಿಳೆಯೊಬ್ಬಳ ಜೊತೆ ಲಿವಿಂಗ್ ಟುಗೆದರ್ ರಿಲೆಷನ್‌ಶಿಪ್‌ನಲ್ಲಿದ್ದ. ಹೀಗಾಗಿ ಆಕೆಯೊಂದಿಗೆ ಮೋಜು ಮಸ್ತಿ ಮಾಡಲು ಹಣ ಕಡಿಮೆ ಬಿದ್ದಾಗ ಪಿಕ್ ಪಾಕೇಟ್ ದಂಧೆ ಎಂದು ಸೂಚಿಸಲಾಗಿದೆ. ಅದರಂತೆ ಕೂಲಿ ಮಾಡುವ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡಲು ತನಿಖೆಯಲ್ಲಿ ತೊಡಗಿದೆ.

ಮೈ ಮುರಿದು ದುಡಿದು ಬದುಕುವುದು ಬಿಟ್ಟು ಮಹಿಳೆಯೊಂದಿಗೆ ಮೋಜು ಮಸ್ತಿಗಾಗಿ ಸುಲಿಗೆ ಮಾಡಿ ಇದೀಗ ಜೈಲುಪಾಲಾಗಿದ್ದರೆ, ಲಿವಿಂಗ್ ಟುಗೆದರ್ ನಲ್ಲಿ ಮಹಿಳೆ ಅರಾಮ್ ಆಗಿ ಮನೆಯಲ್ಲಿದ್ದಾಳೆ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *