ಕಲಬುರಗಿ, (ಡಿಸೆಂಬರ್ 22): ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಕುಡಿದು ರಂಪಾಟ ಮಾಡಿದ್ದಾರೆ. ಕೆಲ ತಿಂಗಳಿನಿಂದ ನಾಪತ್ತೆಯಾಗಿದ್ದ ಕಲಬುರಗಿ (ಕಲಬುರ್ಗಿ) ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಮಠದ ಶಾಂತಲಿಂಗ ಶಿವಾಚಾರ್ಯ, ಇದೀಗ ದಿಢೀರ್ ಮಠದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹೊಸ ಪೀಠಾಧಿಪತಿ ಮಠಕ್ಕೆ ನೇಮಕಗೊಂಡ ಬಗ್ಗೆ ಚರ್ಚೆ ನಡೆಯುತ್ತಿರುವ ಸುದ್ದಿ ತಿಳಿದು ಸ್ವಾಮೀಜಿ ಮಠಕ್ಕೆ ವಾಪಸ್ ಆಗಿದ್ದಾರೆ. ಆದರೆ, ಕುಡಿದು ಮಠದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಮೂಲಕ ತಮ್ಮ ವಿರೋಧಿಗಳನ್ನು ಹೆದರಿಸಲು ಗುಂಡು ಹಾರಿಸಿದ್ರಾ ಎಂಬ ಚರ್ಚೆಗಳು ನಡೆದಿದ್ದು, ಸದ್ಯ ಗುಂಡು ಹಾರಿಸಿರುವ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.