ನಮ್ಮ ಮೆಟ್ರೋ : ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್

ನಮ್ಮ ಮೆಟ್ರೋ : ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್


ಬೆಂಗಳೂರು, (ಫೆಬ್ರವರಿ 09): ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಇಂದು (ಫೆಬ್ರವರಿ 09) ಬೆಂಗಳೂರಿನ ಡಾ. ಬಿಆರ್ ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮೆಟ್ರೋ ದರ ಏರಿಕೆ ಮಾಡಿ ಪ್ರಾಯಾಣಿಕರ ಹೊರೆಯನ್ನ ಹೆಚ್ಚು ಮಾಡಿ ಕನ್ನಡಿಗರನ್ನ ಕೆರಳುವಂತೆ ಮಾಡಿದೆ. ಈ ಕೂಡಲೇ ಮೆಟ್ರೋ ದರವನ್ನು ಹಿಂಪಡೆಯಬೇಕು,ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಬಳಸಬೇಕು. ಇಲ್ಲವಾದರೆ ನಾವು ಬೀದಿಗೆ ಇಳಿಯುತ್ತೇವೆ. ಮಾರ್ಚ್ 7ರವರೆಗೆ ನಿಮ್ಗೆ ಅವಕಾಶ ಕೊಡುತ್ತೇವೆ. ಒಪ್ಪದೆ ಹೋದ್ರೆ ಅವತ್ತು ಇಡೀ ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಮೆಟ್ರೋ ನಿಲ್ಲಿಸುತ್ತೇವೆ. ಜೊತೆಗೆ ಸಾರ್ವಜನಿಕರಿಗೂ ಕೂಡ ಮೆಟ್ರೋ ಹತ್ತೋಕೆ ಬಿಡಲ್ಲ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *