Master Anand New Home: ಕನ್ನಡದ ಅನೇಕ ಸಿನಮಾಗಳಲ್ಲಿ ಬಾಲನಟನಾಗಿ ನಟಿಸಿದ್ದ ಮಾಸ್ಟರ್ ಆನಂದ್ ಅವರು ಸಾಕಷ್ಟು ಧಾರಾವಾಹಿಗಳ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಸಾಕಷ್ಟು ಶೋಗಳ ನಿರೂಪಣೆ ಕೂಡ ಮಾಡಿದ್ದಾರೆ. ಈಗ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಮಾಸ್ಟರ್ ಆನಂದ್ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ, ಗೃಹ ಪ್ರವೇಶ ಆಗಿದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ. ಆದರೆ ವಿಷಯ ಬೇರೆ ಇದೆ.

ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ಅವರು ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿದ್ದಾರೆ.

ಸತ್ಯನಾರಾಯಣ ಪೂಜೆ ಮಾಡಿದ್ದು, ಕಿರುತೆರೆ ಕಲಾವಿದರಿಗೆ ಆಹ್ವಾನ ನೀಡಿದ್ದರು. ಹೀಗಾಗಿ ಗಿಚ್ಚಿ ಗಿಲಿಗಿಲಿ ಶೋ ಸ್ಪರ್ಧಿಳು ಕೂಡ ಬಂದಿದ್ದರು.

ಮಾಸ್ಟರ್ ಆನಂದ್ ದಂಪತಿಯು ಹಾಲು ಉಕ್ಕಿಸುವ ಶಾಸ್ತ್ರ ಮಾಡಿದ್ದಾರೆ.

ಮಾಸ್ಟರ್ ಆನಂದ್ ದಂಪತಿಯು ದೈವ ಭಕ್ತರು. ಸದ್ಯ ಆನಂದ್ ಅವರು ಆಧ್ಯಾತ್ಮಿಕಕ್ಕೆ ಸಂಬಂಧಪಟ್ಟಂತೆ ಪಾಡ್‌ಕಾಸ್ಟ್ ಮಾಡುತ್ತಿದ್ದಾರೆ.

ಮಾಸ್ಟರ್ ಆನಂದ್ ದಂಪತಿಯು ಹಳೆ ಮನೆಯನ್ನು alteration ಮಾಡಿಸಿದ್ದಾರೆ ಎನ್ನಲಾಗಿದೆ. ಹೊಸ ಮನೆ ಎನ್ನುವ ಹಾಗೆ ಅಷ್ಟು alteration ಮಾಡಿಸಿದ್ದಾರಂತೆ.

ಈಗ ಕಿಚನ್‌ನಿಂದ ಹಿಡಿದು ಮನೆಯಲ್ಲಿ ಸಾಕಷ್ಟು ತಂತ್ರಜ್ಞಾನ, ವ್ಯವಸ್ಥೆಗಳು ಬರುತ್ತಿವೆ. ಅದರಂತೆ ಕಾಲಕ್ಕೆ ತಕ್ಕಂತೆ ಮಾಸ್ಟರ್ ಆನಂದ್ ಮನೆಯನ್ನು ಕೂಡ ಬದಲಾವಣೆ ಮಾಡಲಾಗಿದೆ.

ಕಿಚನ್‌ನಲ್ಲಿ ಸ್ಟೋರೇಜ್ ರೂಮ್‌ನ್ನು ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಮಾಡಿದ್ದಾರೆ. ಪಾತ್ರೆಗಳು, ಡಬ್ಬಗಳನ್ನು ನೀಟ್ ಆಗಿ ಇಡಲು ಅನುಕೂಲವಾಗುವಂತೆ ರ್ಯಾಕ್ಸ್ ಮಾಡಿದ್ದಾರೆ. ಇದನ್ನು ನೋಡಿ ಎಲ್ಲರಿಗೂ ಸರ್ಪ್ರೈಸ್ ಆಗಿದೆ.

ಮನೆ ಅಲ್ಟ್ರೇಶನ್ ಮಾಡಿಸಿದ್ದು ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ, ಶುಭಾಶಯ ತಿಳಿಸಿದ್ದಾರೆ.

Source link
Master Anand Home: ಮಾಸ್ಟರ್ ಆನಂದ್ ಹೊಸ ಮನೆ ಹೈಟೆಕ್ ಕಿಚನ್ ನೋಡಿ ಬೆಕ್ಕಸ ಬೆರಗಾದ 'ಗಿಚ್ಚಿ ಗಿಲಿಗಿಲಿ' ಟೀಂ