ಕನ್ನಡ ಚಿತ್ರರಂಗದಲ್ಲಿ ಜೋಶಿತಾ (ಜೋಶಿತಾ) ಅವರು ಸಹ-ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಮೇಲೆ ಗಂಡನಿಂದಲೇ ಹಲ್ಲೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಪತಿ ಸುರೇಶ್ ನಾಯ್ಡು (ಸುರೇಶ್ ನಾಯ್ಡು) ನೀಡಿದ ಕಿರುಕುಳಗಳ ಬಗ್ಗೆ ಜೋಶಿತಾ ಅವರು ಮಾತನಾಡಿದ್ದಾರೆ. ಜೋಶಿತಾ ಅವರ ತಾಯಿ ಮೇಲೆಯೂ ಹಲ್ಲೆ ಮಾಡಲಾಗಿದೆ. ಅಷ್ಟಕ್ಕೂ ಅವರ ಸಂಸಾರದಲ್ಲಿ ಕಿರಿಕ್ ಶುರುವಾಗಲು ಕಾರಣ ಏನು ಎಂದು ಜೋಶಿತಾ ವಿವರಿಸಿದ್ದಾರೆ. ಟಿವಿ9 ಜೊತೆ ಅವರು ಮಾತನಾಡಿದ್ದು, ತಮ್ಮ ಮೇಲೆ ಏನೆಲ್ಲ ಕಿರುಕುಳ (ಕಿರುಕುಳ) ನೀಡಲಾಗಿದೆ ಎಂದು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.
‘ನಾವು ಮದುವೆ ಆಗಿ 2 ವರ್ಷ ಆಯಿತು. ನಮ್ಮ ಮಗುವಿಗೆ ಈಗ ಒಂದು ವರ್ಷ ಮೂರು ತಿಂಗಳು. ಹೆಣ್ಣು ಮಗು ಆಗಿದೆ. ಮದುವೆ ಆದುದರಿಂದ ನನಗೆ ಯಾವತ್ತೂ ನೆಮ್ಮದಿ ಇಲ್ಲ. ಅತ್ತೆ, ಮಾವನ ಕಿರುಕುಳು ಇತ್ತು. ಯಾವಾಗಲೂ ಕೆಲಸ ಮಾಡುತ್ತಲೇ ಇರಬೇಕು. ನನ್ನನ್ನು ಕೆಲಸದವಳ ರೀತಿ ಇಟ್ಟುಕೊಂಡಿದ್ದರು. ಎಲ್ಲಿಗೂ ನನ್ನನ್ನು ಕರೆದುಕೊಂಡು ಹೋಗಲಿಲ್ಲ’ ಎಂದು ಜೋಶಿತಾ ಅವರು ಹೇಳಿದ್ದಾರೆ.
‘ಮಗು ಆಗುವ ತನಕ ನಾನು ಎಲ್ಲವನ್ನೂ ಸಹಿಸಿಕೊಂಡು, ಕೆಲಸ ಮಾಡಿಕೊಂಡು ಇದ್ದೆ. ಮಗು ಆದ ನಂತರ ನನಗೆ ಸ್ವಲ್ಪ ವಿಶ್ರಾಂತಿ ಬೇಕಿತ್ತು. ಅಮ್ಮನ ಮನೆಯಲ್ಲಿ ಒಂದೇ ತಿಂಗಳು ಬಾಣಂತನ ಮಾಡಿಕೊಂಡು ಬಂದು ಬಿಡಬೇಕು ಅಂತ ಆಸ್ಪತ್ರೆಯಲ್ಲೇ ಜಗಳ ಮಾಡಿದರು. ಹಾಗೆಲ್ಲ ಮಾಡಿದ್ದಕ್ಕೆ ಅವರ ಅಪ್ಪ ಅಮ್ಮ ನೋಡಿಕೊಳ್ಳಲ್ಲ ಎಂದರು. ಕೈ-ಕಾಲು ಹಿಡಿದುಕೊಂಡು ಅಪ್ಪ-ಅಮ್ಮನ ಮನೆಗೆ ಬಿಟ್ಟ’ ಎಂದು ಜೋಶಿತಾ ಹೇಳಿದ್ದಾರೆ.
‘ಮತ್ತೆ 2-3 ತಿಂಗಳು ಕಳೆದ ಬಳಿಕ ಜಗಳ ಮಾಡಿಕೊಂಡು ಅವರ ಮನೆಗೆ ಕರೆದುಕೊಂಡು ಹೋದೆ. ಆವಾಗಲೇ ಸಮಸ್ಯೆ ಶುರುವಾಗಿದೆ. ಪಬ್, ಕ್ಲಬ್‌ಗೆ ಹೋಗೋಣ, ನೀನು ಯಾರ ಜೊತೆಗೆ ಬೇಕಾದರೂ ಹೋಗಿ ಮಲಗು. ನಾನು ನನಗೆ ಬೇಕಾದವರ ಜೊತೆ ಹೋಗುತ್ತೇನೆ. ನೀನು ನೋಡೋಕೆ ಚೆನ್ನಾಗಿ ಇದ್ದೀಯ. ಸಿನಿಮಾಗೆ ಕಮಿಟ್ ಆಗು ಎನ್ನಲು ಶುರು ಮಾಡಿದೆ. ಇಂಥ ವ್ಯಕ್ತಿತ್ವ ಇರುವವನ ಮದುವೆ ಆದನಲ್ಲ ಅಂತ ನನಗೆ ನಾಚಿಕೆ ಆಯಿತು’ ಎಂದು ಜೋಶಿತಾ.
ಇದನ್ನೂ ಓದಿ: ಖ್ಯಾತ ನಟಿಗೆ ಅಪರಾಧ ಕಿರುಕುಳ ನೀಡಿದ 6 ಮಂದಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
‘ಇದು ಸರಿ ಆಗುತ್ತಿಲ್ಲ ಅಂತ ನಾನು ಅವನನ್ನು ಬಿಟ್ಟು ಬಂದೆ. ನಾನು ಅಪ್ಪ-ಅಮ್ಮನ ಮನೆಯಲ್ಲಿ ಇದ್ದೆ. ಅಪ್ಪನಿಗೆ ಸ್ಟ್ರೋಕ್ ಆಗಿಲ್ಲ ಬ್ರೇನ್ ಆಪರೇಷನ್ ಆಗಿದೆ. ಅವರಿಗೆ ಟೆನ್ಷನ್ ಕೊಡಬಾರದು ಅಂತ ನಾನು ವಿಷಯ ಮುಚ್ಚಿಟ್ಟುಕೊಂಡೆ. ಬಳಿಕ ಮನೆಗೆ ನನ್ನನ್ನು ಗಂಡನ ಮನೆಗೆ ಬಿಟ್ಟುಬಂದರು. ಒಂದೇ ದಿನದಲ್ಲಿ ಜಗಳ ಆಯಿತು. ಬಿಟ್ಟು ಬಂದೆ. 11 ತಿಂಗಳು ಆಯಿತು. ನಾನು ಅವರ ಮನೆಗೆ ಕಾಲಿಟ್ಟಿಲ್ಲ’ ಎಂದು ಜೋಶಿತಾ ಹೇಳಿದ್ದಾರೆ.
‘ಮಗು ನನ್ನ ಜೊತೆ ಇತ್ತು. ಮಗು ಹುಟ್ಟಿದಾಗಿನಿಂದ ನಿನ್ನೆಯ ತನಕ ನಮ್ಮ ಮನೆಯಲ್ಲಿ ನಮ್ಮ ತಾಯಿಯೇ ನೋಡಿಕೊಳ್ಳುತ್ತಾರೆ. ನಾನು ಡಿವೋರ್ಸ್ ಕೇಳುತ್ತಿದ್ದೆವು. ಕೊಡ್ತೀನಿ, ಕೊಡಲ್ಲ ಅಂತ ತುಂಬ ಆಟ ಆಡುತ್ತಿದ್ದರು. ಬನ್ನಿೋಣ ಅಂತ ಅವರ ಮನೆ ಬಳಿ ನಮ್ಮನ್ನು ಕರೆಸಿಕೊಂಡ. ದುಡ್ಡು ಕೊಡಲ್ಲ ಏನು ಬೇಕಾದರೂ ಮಾಡಿಕೋ ಅಂದ. ಹಾಗಾದರೆ ನಿನ್ನ ಮಗು ನೀನು ಇಟ್ಟುಕೊ, ಅದರ ಖರ್ಚು ನೋಡಿಕೋ ಅಂತ ಮಗು ಕೊಡಲು ಹೋದೆ. ಅವನು ಎತ್ತಿಕೊಳ್ಳಲಿಲ್ಲ. ಅಲ್ಲಿಂದ ಮಾತು ಬೆಳೆದು ನನ್ನ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ” ಎಂದು ಜೋಶಿತಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.