ಸಿನಿಮಾ ಈವೆಂಟ್‌ಗಳಿಗೆ ಬರುವ ಕೆಲವು ಪಾಪರಾಜಿಯರು ನಟಿಯರನ್ನು ಅಸಭ್ಯ ಕೋನದಿಂದ ಚಿತ್ರೀಕರಿಸಿ ಅದನ್ನು ಪೋಸ್ಟ್ ಮಾಡುತ್ತಿರುವ ಬಗ್ಗೆ ವಿರೋಧದ ಅಲೆ ಎದ್ದಿದೆ. ಅನೇಕ ನಟಿಯರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ನಟಿ ಸಪ್ತಮಿ ಗೌಡ (ಸಪ್ತಮಿ ಗೌಡ) ಅವರು ಈ ಬಗ್ಗೆ ಮೊದಲು ಪ್ರಶ್ನೆ ಮಾಡಿದರು. ಆ ಬಳಿಕ ರಮ್ಯಾ ಸೇರಿದಂತೆ ಅನೇಕರು ಅವರಿಗೆ ಬೆಂಬಲ ಸೂಚಿಸಿದರು. ಈಗ ಶಿವರಾಜ್ ಕುಮಾರ್ ಕೂಡ ಈ ಆಂದೋಲನದಲ್ಲಿ ಭಾಗಿ ಆಗಿದ್ದಾರೆ.
ಸಿನಿಮಾ ಈವೆಂಟ್ ಕವರ್ ಮಾಡೋಕೆ ಬರುವವರು ಅಸಭ್ಯ ರೀತಿಯಲ್ಲಿ ನಟಿಯರ ವಿಡಿಯೋ ಹಾಗೂ ಫೋಟೋ ತೆಗೆದಿದ್ದಾರೆ. ಅದು ಸಾಮಾನ್ಯ ಎಂಬ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಕೆಲಸ ಆಗಿದೆ. ನಟಿಯರನ್ನು ಕೆಟ್ಟ ರೀತಿಯಲ್ಲಿ ತೋರಿಸಿ ವೀವ್ಸ್ ಪಡೆದುಕೊಳ್ಳುವುದಕ್ಕೆ ಸಪ್ತಮಿ ಗೌಡ, ರಮ್ಯಾ ಮೊದಲಾದವರು ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗದಲ್ಲಿ ಇದು ಆಂದೋಲನವಾಗಿ ಬದಲಾಯಿತು. ಇದಕ್ಕೆ ಶಿವಣ್ಣ ಬೆಂಬಲ ಸೂಚಿಸಿದ್ದಾರೆ.
‘ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ. ದಯವಿಟ್ಟು ಆತ್ಮಸಾಕ್ಷಿ ಇಟ್ಟುಕೊಂಡು ಕೆಲಸ ಮಾಡಿ. ಹೆಣ್ಣು ಮಕ್ಕಳ ಗೌರವಕ್ಕೆ ಚ್ಯುತಿ ತರಬೇಡಿ’ ಎಂದು ಶಿವರಾಜ್ ಕುಮಾರ್ ಅವರು ಕೋರಿದ್ದಾರೆ.
ನಟಿಯರು ಹೇಳಿದ್ದು ಏನು?
‘ಚಿತ್ರರಂಗ ಮಹಿಳೆಯರಾಗಿ, ನಿರಂತರವಾಗಿ ಒಂದು ಗಂಭೀರ ಸಮಸ್ಯೆ ಎದುರಿಸಲು ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಯಶಸ್ವಿಯಾಗಿ ನಡೆಯುತ್ತಿವೆ’ ಎಂದು ನಟಿಯರು ಹೇಳಿದ್ದಾರೆ.
#ನಟರಲ್ಲ ವಸ್ತುಗಳಲ್ಲ pic.twitter.com/eiQOD7K5TH
— ಡಾ.ಶಿವರಾಜ್ಕುಮಾರ್ (@NimmaShivanna) ಮಾರ್ಚ್ 5, 2026
ಇದನ್ನೂ ಓದಿ: ಅಸಭ್ಯವಾಗಿ ನಟಿಯರ ಫೋಟೋ, ವಿಡಿಯೋ ತೆಗೆದಿದ್ದಕ್ಕೆ ಕನ್ನಡ ಚಿತ್ರರಂಗ ಗರಂ
‘ಇಂತಹ ವರ್ತನೆ, ಕೆಲವರಿಂದ ನಡೆಯುತ್ತಿರುವಾದರೂ ಅದು ಅಸಭ್ಯ, ಅವಮಾನಕಾರಿ ಮತ್ತು ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ. ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ. ನಾವು ಇಲ್ಲಿ ನಮ್ಮ ಸಿನಿಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯ ಕೋನಗಳಿಂದ ನಮ್ಮ ಗೌರವಕ್ಕೆ ಸ್ಪಷ್ಟ ಧಕ್ಕೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ, ಸಹಿಸುವುದಿಲ್ಲ’ ಎಂದು ಪೋಸ್ಟ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.