Anchor Niranjan Deshapande: ನಿರೂಪಕ ನಿರಂಜನ್ ದೇಶಪಾಂಡೆ ಅವರು ಈಗಾಗಲೇ ಬೆಟ್ಟ ಗುಡ್ಡ ರೆಸಾರ್ಟ್ ನಡೆಸುತ್ತಿದ್ದಾರೆ. ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು, ನಿರೂಪಣೆ ಜೊತೆಗೆ ಉದ್ಯಮಿಯಾಗಲು ರೆಡಿ ಆಗಿದ್ದಾರೆ.

ನಿರಂಜನ್ ದೇಶಪಾಂಡೆ ಅವರು ವರ್ಷದಲ್ಲಿ ಮೂರು-ನಾಲ್ಕು ರಿಯಾಲಿಟಿ ಶೋಗಳ ನಿರೂಪಣೆ ಮಾಡೋದುಂಟು. ಇದರ ಜೊತೆಗೆ ಬೇರೆ ಆದಾಯದ ಮೂಲವನ್ನು ಇಟ್ಟುಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಬೆಟ್ಟ ಗುಡ್ಡ ರೆಸಾರ್ಟ್ ನಡೆಸುತ್ತಿದ್ದಾರೆ. ಈ ರೆಸಾರ್ಟ್ ಶುರು ಮಾಡಿ ಒಂದಿಷ್ಟು ವರ್ಷಗಳು ಕಳೆದಿವೆ.

ಈಗ ಬೆಂಗಳೂರಿನಲ್ಲಿಯೇ ಅವರು ಒಂದು ಮದುವೆ ಮನೆ ಮಾಡಿದ್ದಾರೆ. ಹೌದು, ND Wedding Venue ಆರಂಭಿಸಿದ್ದಾರೆ. ಇಲ್ಲಿ ಮದುವೆಯಿಂದ ಬರ್ತಡೇ ಪಾರ್ಟಿಯವರೆಗೆ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಕೂಡ ಮಾಡಬಹುದಂತೆ.

ರಿಸ್ಕ್ ತಗೊಂಡು ನಾನು ಈ ಉದ್ಯಮಕ್ಕೆ ಕಾಲಿಟ್ಟಿದ್ದೇನೆ, ನಾನು ಉದ್ಯಮಿ ಆಗಬೇಕು ಎಂದು ನಿರಂಜನ್ ದೇಶಪಾಂಡೆ ಅವರು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

Source link
ಜೀವನದಲ್ಲಿ ಏನಾದ್ರೂ ಮಾಡ್ಬೇಕು; ರಿಸ್ಕ್ ತಗೊಂಡು, ಹೊಸ ಹೆಜ್ಜೆ ಇಟ್ಟ ನಿರೂಪಕ ನಿರಂಜ್ ದೇಶಪಾಂಡೆ