Headlines

ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು? ವಿವರಿಸಿದ ಪತ್ನಿ

ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು? ವಿವರಿಸಿದ ಪತ್ನಿ


‘ಪಾತ್ರಧಾರಿ’ ಸಿನಿಮಾದ ಶೂಟಿಂಗ್ ವೇಳೆ ನಿರ್ದೇಶಕ ಸಂಗೀತ್ ಸಾಗರ್ (ಸಂಗೀತ್ ಸಾಗರ್) ಅವರು ನಿಧನರಾದರು. ಹೃದಯಾಘಾತದಿಂದ (ಹೃದಯಾಘಾತ) ಅವರು ಮೃತರಾಗಿದ್ದಾರೆ. ಘಟನೆ ಬಗ್ಗೆ ಅವರ ಪತ್ನಿ ಸ್ಮಿತಾ ಸಾಗರ್ ಪ್ರತಿಕ್ರಿಯೆ. ‘ನಮ್ಮದು ಮೈಸೂರು. ನಾವು ಮದುವೆ ಆಗಿ 24 ವರ್ಷ ಆಯಿತು. ನಮ್ಮ ಮನೆಯವರು ಸಕಲೇಶಪುರ. ಸಂಗೀತ್ ಸಾಗರ್ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿದ್ದರು. ಆಮೇಲೆ ಸಿನಿಮಾ ನಿರ್ದೇಶನ ಶುರು ಮಾಡಿದೆ. ಈಗ ಅವರು ‘ಪಾತ್ರಧಾರಿ’ ಸಿನಿಮಾಗೆ ಸಂಗೀತ ನೀಡಿ, ನಿರ್ದೇಶನ ಮಾಡುವಂತೆ. ಶೃಂಗೇರಿ ಸುತ್ತಮುತ್ತ ಶೂಟಿಂಗ್ ಅಂತ ಹೇಳಿದ್ದರು. ಆದರೆ ಖಚಿತ ಜಾಗ ನನಗೆ ಗೊತ್ತಿರಲಿಲ್ಲ. ನಿನ್ನೆ ಸಾಗರ್ ಅವರಿಗೆ ತುಂಬಾ ಸುಸ್ತಾಗಿದೆ, ಬಾಯಲ್ಲಿ ರಕ್ತ ಬಂದಿದೆ, ಬೆವೆತು ಹೋಗಿದ್ದಾರೆ, ಕೈ ಕಾಲು ನಡುಗುತ್ತಿದೆ ಅಂತ ನನಗೆ ಕರೆ ಬಂತು. ಪಕ್ಕದ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದರು. ಅವರಿಗೆ ಹಾರ್ಟ್ ಸಮಸ್ಯೆ, ಬಿಪಿ, ಶುಗರ್ ಇದೆ ಅಂತ ವೈದ್ಯರಿಗೆ ಹೇಳಿದ್ದೆ. ಇನ್ನೂ ನಮಗೆ ಪಾರ್ಥಿವ ಶರೀರ ಕೊಟ್ಟಿಲ್ಲ’ ಎಂದು ಸಂಗೀತ್ ಸಾಗರ್ ಪತ್ನಿ ಸ್ಮಿತಾ ಸಾಗರ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *