ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದು ಕನ್ನಡದ ನಿರ್ದೇಶಕನ ಸಾವು

ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದು ಕನ್ನಡದ ನಿರ್ದೇಶಕನ ಸಾವು


ಸಾವು ಯಾವ ಕ್ಷಣದಲ್ಲಿ ಹೇಗೆ ಬರುತ್ತದೆ ಎಂದು ನೋಡೋದು ತುಂಬಾನೇ ಕಷ್ಟ. ಈಗಾಗಲೇ ನಿಧನರಾದ ಅನೇಕ ಕಲಾವಿದರು ನಟಿಸಿದ್ದಾರೆ. ಈಗ ಕನ್ನಡದ ನಿರ್ದೇಶಕನೋರ್ವ ಸಿನಿಮಾದ ಚಿತ್ರೀಕರಣ ವೇಳೆಯೇ ಕುಸಿದು ಬಿದ್ದಿದ್ದಾರೆ. ‘ಪಾತ್ರಧಾರಿ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿರುವ ಸಂಗೀತ್ ಸಾಗರ್ ಮೃತ ದುರ್ಧೈವಿ. ಅವರ ಸಾವಿನಿಂದ ಇಡೀ ಕುಟುಂಬಕ್ಕೆ ಶಾಕ್ ಆಗಿದೆ. ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಆಗಿದೆ.

ಸಂಗೀತ್ ಸಾಗರ್ ಶಿವಮೊಗ್ಗ ಕೊಪ್ಪದಲ್ಲಿ ‘ಪಾತ್ರಧಾರಿ’ ಸಿನಿಮಾ ಶೂಟಿಂಗ್ ಮಾಡಿದೆ. ಇಡೀ ತಂಡ ಅಲ್ಲಿ ಬೀಡು ಬಿಟ್ಟಿತ್ತು. ಈ ವೇಳೆ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಸದ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾಗರ್ ಮೃತದೇಹವನ್ನು ಇಡಲಾಗಿದೆ.

ಇದನ್ನೂ ಓದಿ: ಅಜಾತಶತ್ರು ಎಸ್ ಪಿ ಬಾಲಸುಬ್ರಹ್ಮಣ್ಯಂ ಪ್ರತಿಮೆಗೆ ವಿರೋಧ: ಕಾರಣವೇನು?

ಈ ಮೊದಲು ‘ಸ್ನೇಹಿತ’ ಹೆಸರು 2021ರಲ್ಲು ರಿಲೀಸ್ ಆಯಿತು. ‘ಓ ಪ್ರೀತಿಯಾ’ ಹೆಸರಿನ ಚಿತ್ರವನ್ನು ಅವರು ನಿರ್ದೇಶಿಸಿದ್ದರು. ಕೆಲವು ಸಿನಿಮಾಗಳಿಗೆ ಸಂಗೀತ ಸಂಯೋಜಕನಾಗಿ ಕೆಲಸ ಮಾಡಿದ್ದಾರೆ.

ಸಾಗರ್ ಸಾವಿನ ವಿಷಯ ತಿಳಿಯದಂತೆ ಸಾಗರ್ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ. ಸಾಗರ್ ಪತ್ನಿ ಸುಶ್ಮಿತಾ, ಮಗಳು ವಂಧ್ಯಾ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. ಇನ್ನು, ಆಸ್ಪತ್ರೆಯ ಬಿಲ್ ಪಾವತಿಯಾಗಿಲ್ಲ. ಸಿನಿಮಾ ತಂಡದವರು ಬಿಲ್ ನೀಡುತ್ತಾರೆ ಎಂದು ಕುಟುಂಬಸ್ಥರು ಕಾಯುತ್ತಿದ್ದಾರೆ. ಸಿನಿಮಾದ ನಿರ್ಮಾಪಕರು ಹಾಗೂ ಚಿತ್ರತಂಡ ಆಸ್ಪತ್ರೆಗೆ ಇನ್ನಷ್ಟೇ ಭೇಟಿ ನೀಡುವ ಸಾಧ್ಯತೆ ಇದೆ. ಬಿಲ್ ಪಾವತಿ ಬಳಿಕ ಮೃತದೇಹ ಕೊಂಡೊಯ್ಯವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *