
1999 ರಿಂದ ಚಲನಚಿತ್ರೋದ್ಯಮದಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿರುವ ನಟಿ ತ್ರಿಶಾ, ಆಸ್ತಿಗಳ ವಿಷಯದಲ್ಲಿಯೂ ಸಹ ಸಖತ್ ಸ್ಮಾರ್ಟ್. ಸದ್ಯಕ್ಕೆ ತ್ರಿಷಾ ಅವರ ಒಟ್ಟು ಆಸ್ತಿ ಸುಮಾರು ರೂ. 130 ಕೋಟಿ ಎನ್ನಲಾಗಿದೆ. ಸಿನಿಮಾಗಳು ಮಾತ್ರವಲ್ಲ, ಸ್ಮಾರ್ಟ್ ಹೂಡಿಕೆಗಳು, ಸ್ಮಾರ್ಟ್ ಪ್ಲಾನ್‌ಗಳು ಅವರನ್ನು ಇಷ್ಟು ಶ್ರೀಮಂತರನ್ನಾಗಿ ಮಾಡಿವೆ.
ತ್ರಿಷಾಗೆ ಆದಾಯ ಎಲ್ಲಿಂದ ಬರುತ್ತದೆ? ತ್ರಿಶಾ ಅವರ ಪ್ರಮುಖ ಆದಾಯದ ಮೂಲ ಸಿನಿಮಾಗಳು. ವಿಶೇಷವಾಗಿ ಬ್ಲಾಕ್‌ಬಸ್ಟರ್ “ಪೊನ್ನಿಯಿನ್ ಸೆಲ್ವನ್” ನಂತರ, ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಸುದ್ದಿ ಮೂಲಗಳ ಪ್ರಕಾರ, ತ್ರಿಶಾ ಪ್ರಸ್ತುತ ಪ್ರತಿ ಚಿತ್ರಕ್ಕೆ ಸುಮಾರು 5 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ. ಚಲನಚಿತ್ರಗಳ ಜೊತೆಗೆ, ಬ್ರಾಂಡ್ ಜಾಹೀರಾತುಗಳು ಕೂಡ ಅವರ ಆದಾಯಕ್ಕೆ ಸಾಕಷ್ಟು ಕೊಡುಗೆ ನೀಡುತ್ತವೆ.