ಓದಿನಲ್ಲಿ ಹಿಂದೆ ಬಿದ್ರೂ, ಬದುಕಲ್ಲಿ ಇವ್ರೇ ಗೆಲ್ಲೋದು; ಸೋಲನ್ನು ಮೆಟ್ಟಿ ನಿಲ್ಲೋರ ಜನ್ಮ ದಿನಾಂಕ

ಓದಿನಲ್ಲಿ ಹಿಂದೆ ಬಿದ್ರೂ, ಬದುಕಲ್ಲಿ ಇವ್ರೇ ಗೆಲ್ಲೋದು; ಸೋಲನ್ನು ಮೆಟ್ಟಿ ನಿಲ್ಲೋರ ಜನ್ಮ ದಿನಾಂಕ

ಓದಿನಲ್ಲಿ ಹಿಂದೆ ಬಿದ್ರೂ, ಬದುಕಲ್ಲಿ ಇವ್ರೇ ಗೆಲ್ಲೋದು; ಸೋಲನ್ನು ಮೆಟ್ಟಿ ನಿಲ್ಲೋರ ಜನ್ಮ ದಿನಾಂಕ
ಓದದೇ ಇದ್ರೆ ಜೀವನದಲ್ಲಿ ಏನೂ ಸಾಧಿಸೋಕೆ ಆಗಲ್ಲ ಅಂತಾ ಪೋಷಕರು ಬೈತಿರ್ತಾರೆ. ಆದ್ರೆ, ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ದಿನಾಂಕಗಳಲ್ಲಿ ಹುಟ್ಟಿದವರು ಓದಿನಲ್ಲಿ ಹಿಂದೆ ಬಿದ್ದರೂ, ಜೀವನದಲ್ಲಿ ಮಾತ್ರ ಹಿಂದೆ ಬೀಳಲ್ಲ. ಬದುಕಿನ ಪರೀಕ್ಷೆಯಲ್ಲಿ ಗೆದ್ದು ಬೀಗುತ್ತಾರೆ. ಆ ದಿನಾಂಕಗಳು ಯಾವುವು ಗೊತ್ತಾ?
ಯಾವುದೇ ತಿಂಗಳ 8, 17, 26ನೇ ತಾರೀಖಿನಂದು ಹುಟ್ಟಿದವರು ಸಂಖ್ಯೆ 8ರ ಗುಂಪಿಗೆ ಸೇರುತ್ತಾರೆ. ಇವರ ಮೇಲೆ ಶನಿ ಗ್ರಹದ ಪ್ರಭಾವ ಹೆಚ್ಚಾಗಿರುತ್ತೆ. ಇವರು ಬಾಲ್ಯದಲ್ಲಿ ಓದಿನಲ್ಲಿ ಸ್ವಲ್ಪ ಹಿಂದೆ ಬೀಳಬಹುದು.

ನಿಧಾನವಾಗಿ ಕಲಿಯುವ (Slow Learners) ಸ್ವಭಾವ ಇವರದ್ದು. ಆದರೆ, ಇವರಿಗೆ ತಾಳ್ಮೆ, ಪರಿಶ್ರಮ ಹೆಚ್ಚು. 30 ವರ್ಷ ದಾಟಿದ ಮೇಲೆ ಅದೃಷ್ಟ ಇವರ ಕೈ ಹಿಡಿಯುತ್ತದೆ. ಸಮಾಜದಲ್ಲಿ ದೊಡ್ಡ ಸ್ಥಾನಮಾನ ಗಳಿಸುತ್ತಾರೆ.

ಯಾವುದೇ ತಿಂಗಳ 4, 13, 22, 31ನೇ ತಾರೀಖಿನಂದು ಹುಟ್ಟಿದವರು ಸಂಖ್ಯೆ 4ರ ಗುಂಪಿಗೆ ಸೇರುತ್ತಾರೆ. ಇವರ ಮೇಲೆ ರಾಹುವಿನ ಪ್ರಭಾವ ಇರುತ್ತದೆ. ಇವರು ಕೂಡ ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚು.

ಪುಸ್ತಕದ ಜ್ಞಾನಕ್ಕಿಂತ ಹೊರಗಿನ ಪ್ರಪಂಚದ ಬಗ್ಗೆ ಇವರಿಗೆ ಆಸಕ್ತಿ ಜಾಸ್ತಿ. ಆದರೆ, ಪ್ರಾಯೋಗಿಕ ಜ್ಞಾನದಲ್ಲಿ ಇವರು ಪಂಟ್ರು. ವ್ಯಾಪಾರ ಅಥವಾ ಹೊಸ ಆವಿಷ್ಕಾರಗಳ ಕ್ಷೇತ್ರದಲ್ಲಿ ಇವರು ದೊಡ್ಡ ಯಶಸ್ಸು ಕಾಣುತ್ತಾರೆ.

ಯಾವುದೇ ತಿಂಗಳ 7, 16, 25ನೇ ತಾರೀಖಿನಂದು ಹುಟ್ಟಿದವರು ಸಂಖ್ಯೆ 7ರ ಗುಂಪಿಗೆ ಸೇರುತ್ತಾರೆ. ಇವರ ಮೇಲೆ ಕೇತುವಿನ ಪ್ರಭಾವ ಹೆಚ್ಚಾಗಿರುತ್ತೆ. ಕ್ಲಾಸ್​ರೂಂ ಪಾಠಗಳು ಇವರಿಗೆ ಬೇಗ ಬೋರ್ ಹೊಡೆಸಬಹುದು. ಆದರೆ, ಮನುಷ್ಯರನ್ನು ಅಳೆಯುವಲ್ಲಿ ಇವರು ನಿಪುಣರು. ಸಂಶೋಧನೆ, ಮನೋವಿಜ್ಞಾನ ಅಥವಾ ಸೃಜನಶೀಲ ವೃತ್ತಿಗಳಲ್ಲಿ ಇವರು ಉನ್ನತ ಸ್ಥಾನಕ್ಕೇರುತ್ತಾರೆ.

ಇದನ್ನೂ ಓದಿ: ಎರಡು ದಿನದ ನಂತರ ಶನಿ ಅಮಾವಾಸ್ಯೆ, ಈ 6 ರಾಶಿ ಜೀವನದಲ್ಲಿ ದೊಡ್ಡ ಬದಲಾವಣೆ, ಕಷ್ಟ-ನಷ್ಟ

ಪ್ರಾಯೋಗಿಕ ಜ್ಞಾನ: ಪುಸ್ತಕಗಳಲ್ಲಿ ಇಲ್ಲದ ಜ್ಞಾನವನ್ನು ಇವರು ಅನುಭವದಿಂದ ಕಲಿಯುತ್ತಾರೆ.

ಸೋಲನ್ನು ಮೆಟ್ಟಿ ನಿಲ್ಲುವ ಶಕ್ತಿ: ಓದಿನಲ್ಲಿ ಹಿಂದುಳಿದಾಗ ಎದುರಾದ ಟೀಕೆಗಳೇ ಇವರನ್ನು ಬಲಶಾಲಿಯನ್ನಾಗಿ ಮಾಡುತ್ತವೆ. ನಿಧಾನಗತಿಯ ಯಶಸ್ಸು (Late Bloomers): ಇವರ ಯಶಸ್ಸು ನಿಧಾನವಾಗಿ ಶುರುವಾದರೂ, ಅದು ದೀರ್ಘಕಾಲ ಸ್ಥಿರವಾಗಿರುತ್ತದೆ.

ಇದನ್ನೂ ಓದಿ: ಹಲವು ವರ್ಷದ ನಂತರ ಅಪರೂಪಕ್ಕೊಮ್ಮೆ ಬರುವ ತ್ರಿಪುಷ್ಕರ ಯೋಗ, ಈ 5 ರಾಶಿಗೆ ಚಿನ್ನದಂತ ಅದೃಷ್ಟ

Source link

Leave a Reply

Your email address will not be published. Required fields are marked *