Kannada Celebrity Lovers: 2025ರಲ್ಲಿ ಅನೇಕ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟರು, ಪಾಲಕರಾಗಿ ಬಡ್ತಿ ಪಡೆದರು. ಈಗ ಕನ್ನಡ ಕಿರುತೆರೆಯಲ್ಲಿ ಕೆಲ ಜೋಡಿಗಳು ಮದುವೆ ಆಗಲಿದೆಯಾ ಎಂದು ಕಾದು ನೋಡಬೇಕಿದೆ. ಹಾಗಾದರೆ ಯಾರದು?

ಕಮಲಿ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸಿದ್ದ ನಿರಂಜನ್ ಬಿ ಎಸ್ ಹಾಗೂ ಅಮೂಲ್ಯಾ ಗೌಡ ಅವರು ಸೀರಿಯಲ್ ಆರಂಭ ಆದಾಗಿನಿಂದ ಇಲ್ಲಿಯವರೆಗೆ ಸ್ನೇಹದಿಂದ ಇದ್ದಾರೆ. ಇವರಿಬ್ಬರು ಲವ್‌ನಲ್ಲಿದ್ದಾರೆ ಎಂಬ ಪ್ರಶ್ನೆ ಬಂದಿತ್ತು. ಆಗ ಅಮೂಲ್ಯಾ ಅವರು, “ನಿರಂಜನ್ ಒಳ್ಳೆಯ ಹುಡುಗ, ಮದುವೆ ಆದರೆ ತಪ್ಪೇನು?” ಎಂದು ಪ್ರಶ್ನೆ ಮಾಡಿದ್ದರು. ಇತ್ತೀಚೆಗೆ ಅಮೂಲ್ಯಾ ಜನ್ಮದಿನಕ್ಕೆ ನಿರಂಜನ್ ಅವರು, ಹ್ಯಾಪಿ ಬರ್ತಡೇ ಮುದ್ದು” ಎಂದು ವಿಶ್ ಮಾಡಿದ್ದಾರೆ. ಹೀಗಾಗಿ ಇವರಿಬ್ಬರು ಈ ವರ್ಷ ಮದುವೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಐಶ್ವರ್ಯಾ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ ಅವರು ಲವ್‌ನಲ್ಲಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಸ್ನೇಹಕ್ಕೆ ಅಧಿಕೃತವಾಗಿ ಪ್ರೀತಿ, ಮದುವೆಯ ಮುದ್ರೆ ಒತ್ತಲಿದ್ದಾರಾ ಎಂದು ಕಾದು ನೋಡಬೇಕಿದೆ.

ದಿವ್ಯಾ ಉರುಡುಗ-ಕೆಪಿ ಅರವಿಂದ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ಶೋನಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಇವರ ಸ್ನೇಹ ಶುರುವಾಗಿದೆ. ಇವರಿಬ್ಬರು ಮದುವೆ ಆಗ್ತೀವಿ ಎಂದು ಹೇಳುತ್ತಿದ್ದಾರೆ ವಿನಃ ಇನ್ನೂ ಡೇಟ್ ಅನೌನ್ಸ್ ಆಗಿಲ್ಲ.

ಜಶ್ವಂತ್ ಬೋಪಣ್ಣ ಜೊತೆ ಬ್ರೇಕಪ್ ಮಾಡಿಕೊಂಡಿರುವ ಬಿಗ್ ಬಾಸ್ ಸ್ಪರ್ಧಿ ನಂದಿನಿ ಅವರು ಸಿದ್ದಾರ್ಥ್ ಸಂತಾನಂ ಎನ್ನುವವರ ಜೊತೆ ಲವ್‌ನಲ್ಲಿದ್ದಾರೆ. ಈ ವರ್ಷ ಅವರು ಮದುವೆ ಆಗಲಿದ್ದಾರಾ ಎಂದು ಕಾದು ನೋಡಬೇಕಿದೆ.

ನೀನಾದೆ ನಾ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸಿದ್ದ ದಿಲೀಪ್ ಶೆಟ್ಟಿ, ರಮಿಕಾ ಶಿವು ಅವರು ಲವ್‌ನಲ್ಲಿದ್ದಾರೆ ಎನ್ನಲಾಗಿದೆ. ಆದರೆ ಇನ್ನೂ ಪ್ರೀತಿ ಬಗ್ಗೆ ಹೇಳಿಕೊಂಡಿಲ್ಲ. ಈ ಜೋಡಿ ಒಟ್ಟಿಗೆ ಹೋಟೆಲ್ ಬ್ಯುಸಿನೆಸ್ ಆರಂಭಿಸಿದೆ. ಈ ವರ್ಷವಾದರೂ ಇವರು ಮದುವೆಯಾಗುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.

ಕಾರ್ತಿಕ್ ಮಹೇಶ್, ನಮ್ರತಾ ಗೌಡ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದರು. ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂದು ಗುಸು ಗುಸು ಶುರುವಾಗಿದೆ. ಇವರಿಬ್ಬರು ಮದುವೆ ಆಗಲಿದ್ದಾರಾ ಎಂದು ಕಾದು ನೋಡಬೇಕಿದೆ.

ಮಹಾನದಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ತೇಜಸ್ವಿನಿ ಶೇಖರ್ ಅವರು ನಟ ವಿರಾಟ್ ಜೊತೆ ಮದುವೆ ಆಗುತ್ತಿದ್ದಾರೆ. ಈಗಾಗಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಶುರು ಆಗಿವೆಯಂತೆ. ಕೆಲ ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಲಿತ್ತು.

Source link
Kannada Celebrity Lovers: ಪ್ರೀತಿಯಲ್ಲಿ ಬಿದ್ದಿರುವ ಕನ್ನಡ ಕಿರುತೆರೆಯ ಜೋಡಿಗಳೂ 2026ರಲ್ಲಿ ಮದುವೆ ಆಗ್ತಾರಾ?