Kannada Celebrities Love Story: ಕನ್ನಡ ಚಿತ್ರರಂಗದಲ್ಲಿ ರಿಯಲ್ ಲವ್ವರ್ಸ್ ಇದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು, ಟ್ರಿಪ್ ಫೋಟೋ ನೋಡಿದಾಗ ಲವ್‌ನಲ್ಲಿರುವ ಬಗ್ಗೆ ಸುಳಿವು ಸಿಕ್ಕಿದ್ದಿದೆ. ಆದರೆ ಅವರಿನ್ನು ಸಾರ್ವಜನಿಕವಾಗಿ ಲವ್ ಮಾಡ್ತಿದೀವಿ ಎಂದು ಹೇಳಿಲ್ಲ.

ದಿವ್ಯಾ ಉರುಡುಗ ಹಾಗೂ ಕೆಪಿ ಅರವಿಂದ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಆತ್ಮೀಯತೆಯಿಂದ ಇದ್ದರು. ಅಲ್ಲಿಯೇ ಅವರ ಮಧ್ಯೆ ಲವ್ ವಿಚಾರ ಬಂದಿತ್ತು. ಹೊರಗಡೆ ಹೋದಬಳಿಕ ಒಂದಷ್ಟು ವಿಷಯಗಳನ್ನು ಹೇಳಿಕೊಂಡು ಆಮೇಲೆ ನಿರ್ಧಾರಕ್ಕೆ ಬರುತ್ತೇವೆ ಎಂದು ಕೆಪಿ ಅರವಿಂದ್ ಆಗಲೇ ಹೇಳಿದ್ದರು.

ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿದು ಈಗ 12ನೇ ಸೀಸನ್ ಶುರುವಾಗುತ್ತಿದೆ. ಈ ಜೋಡಿ ಎಲ್ಲ ಕಡೆ ಓಡಾಡಿಕೊಂಡು ಇರುತ್ತಿದ್ದಾರೆಯೇ ವಿನಃ ನಾವು ಲವ್‌ನಲ್ಲಿದ್ದೇವೆ ಎಂದು ಹೇಳಿಲ್ಲ. ಆದರೆ ಆದಷ್ಟು ಬೇಗ ಮದುವೆ ಬೇಗ ಅಪ್‌ಡೇಟ್ಸ್ ಕೊಡ್ತೀವಿ ಎನ್ನುತ್ತಲೇ ಬಂದಿದೆ.

ನೀನಾದೆ ನಾ ಧಾರಾವಾಹಿಯಲ್ಲಿ ದಿಲೀಪ್ ಶೆಟ್ಟಿ, ಖುಷಿ ಶಿವು ನಟಿಸಿದ್ದರು. ಈ ಸೀರಿಯಲ್ ಎರಡು ಅಧ್ಯಾಯಗಳಾಗಿ ಪ್ರಸಾರ ಆಗಿತ್ತು. ಈ ಸೀರಿಯಲ್‌ನಲ್ಲಿ ನಟಿಸುವಾಗಲೇ ಈ ಜೋಡಿ ಲವ್‌ನಲ್ಲಿ ಬಿದ್ದಿತ್ತು.

ದಿಲೀಪ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಹೊಸ ಮನೆ ಖರೀದಿ ಮಾಡಿ, ಗೃಹ ಪ್ರವೇಶ ಮಾಡುವಾಗ ಈ ಜೋಡಿ ಒಂದೇ ಕಲರ್‌ನ ಡ್ರೆಸ್ ಧರಿಸಿದ್ದರು. ಒಟ್ಟಿಗೆ ಗೋವಾ ಟ್ರಿಪ್, ಮಂತ್ರಾಲಯ ಪ್ರವಾಸ ಕೂಡ ಮಾಡಿದ್ದರು. ಸಾಕಷ್ಟು ವೇದಿಕೆಗಳಲ್ಲಿ ಈ ಜೋಡಿ ಪ್ರೀತಿಯಲ್ಲಿದೆ ಎಂದು ಕಾಲೆಳೆದರೂ ಕೂಡ ಎಲ್ಲಿಯೂ ತಾವು ಲವ್ ಮಾಡುತ್ತಿರೋದಾಗಿ ಹೇಳಿಕೊಂಡಿಲ್ಲ.

ಕರ್ಣ ಧಾರಾವಾಹಿ ನಿಧಿ ಖ್ಯಾತಿಯ ಭವ್ಯಾ ಗೌಡ ಅವರು ಐದು ವರ್ಷಗಳಿಂದ ನನಗೆ ಒಬ್ಬರ ಮೇಲೆ ಕ್ರಶ್ ಇದೆ, ಆದಷ್ಟು ಬೇಗ ರಿವೀಲ್ ಮಾಡ್ತೀನಿ ಎಂದು Asianet Suvarna News ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕಮಲಿ ಧಾರಾವಾಹಿಯಲ್ಲಿ ನಟಿಸಿದ್ದ ನಿರಂಜನ್ ಹಾಗೂ ಅಮೂಲ್ಯ ಅವರು ಲವ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ. ಯಾವಾಗಲೂ ಲವ್ ಪ್ರಶ್ನೆ ಬಂದಾಗ, ನಾವು ಸ್ನೇಹಿತರು ಎಂದು ಹೇಳಿದ್ದಿದೆ. ಅಂದಹಾಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕೂಡ ಲವ್ ಬಗ್ಗೆ ಪ್ರಶ್ನೆ ಎದ್ದಿತ್ತು.

ಅಮೂಲ್ಯ ಅವರು “ನಿರಂಜನ್ ತುಂಬ ಒಳ್ಳೆಯ ಹುಡುಗ, ನನ್ನ ಬೆಸ್ಟ್ ಫ್ರೆಂಡ್, ಮುಂದೆ ನಾನು, ಅವನು ಮದುವೆ ಆದರೆ ತಪ್ಪೇನಿಲ್ಲ, ನೋಡೋಣ” ಎಂದು ಹೇಳಿದ್ದರು. ಈ ಮೂಲಕ ಪ್ರೀತಿಯಲ್ಲಿರುವ ವಿಚಾರವನ್ನು ಅವರು ಹೇಳಿದ್ದರು.

ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜನಿ ಅವರು ಬಾಡಿ ಬಿಲ್ಡರ್ ಜೊತೆ ಫನ್ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಇವರು ಕೂಡ ನಾವು ಸ್ನೇಹಿತರು ಎಂದು ಹೇಳಿಕೊಂಡಿದೆ. ಈ ಜೋಡಿ ಲವ್ ರಿವೀಲ್ ಮಾಡಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ.

Source link
ದಿವ್ಯಾ ಉರುಡುಗ-ಕೆಪಿ ಅರವಿಂದ್ ಥರ ಇನ್ನೂ ಲವ್ ಸ್ಟೋರಿ ಘೋಷಿಸದ ಕನ್ನಡ ಕಿರುತೆರೆಯ ರಿಯಲ್ ಜೋಡಿಗಳಿವು