ಕಿರುತೆರೆ ನಟಿ ಕಾವ್ಯಾ ಗೌಡ ಮತ್ತು ವಾರಗಿತ್ತಿ ಕುಟುಂಬದ ನಡುವಿನ ಕಲಹದ ಬಗ್ಗೆ ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆದಿದೆ ಮತ್ತು ಮಗುವಿಗೆ ಅವಮಾನಿಸಲಾಗಿದೆ ಎಂದು ಆರೋಪಿಸಿರುವ ಅವರು, ಘಟನೆಯ ಸಿಸಿಟಿವಿ ದೃಶ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರು: ಕಿರುತೆರೆ ನಟಿ ಕಾವ್ಯಾ ಗೌಡ ಹಾಗೂ ವಾರಗಿತ್ತಿ ಕುಟುಂಬದ ನಡುವೆ ಉಂಟಾಗಿರುವ ಗಂಭೀರ ಕುಟುಂಬ ಕಲಹ ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ತಮ್ಮ ವಿರುದ್ಧ ಹೊರಿಸಿರುವ ಆರೋಪಗಳು ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡುವ ಸಲುವಾಗಿ ನಟಿ ಕಾವ್ಯಗೌಡ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನೂ ಕೋರ್ಟ್‌ಗೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಕಾವ್ಯಾ ಗೌಡ , “ನಾನು 26ನೇ ತಾರೀಖು ನಡೆದ ಘಟನೆಯ ಬಗ್ಗೆ ವಿಡಿಯೋವನ್ನು ಈಗ ಹಂಚಿಕೊಂಡಿದ್ದೇನೆ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳು ಮತ್ತು ಅದರಲ್ಲಿ ಉಂಟಾದ ಗೊಂದಲಗಳಿಗೆ ಸ್ಪಷ್ಟನೆ ನೀಡುವುದು ನನ್ನ ಉದ್ದೇಶ. ಘಟನೆ ನಡೆದ ತಕ್ಷಣವೇ ವಿಡಿಯೋ ಬಿಡುಗಡೆ ಮಾಡಿದ್ದರೆ, ಆಗ ‘ಅಯ್ಯೋ ಪಾಪ ಕಾವ್ಯ’ ಎಂದು ಎಲ್ಲರೂ ಸಹಾನುಭೂತಿ ತೋರಿಸುತ್ತಿದ್ದರು. ಆದರೆ ನನ್ನ ವಕೀಲರು ಕಾನೂನು ಪ್ರಕ್ರಿಯೆಯ ಕಾರಣದಿಂದಾಗಿ ವಿಡಿಯೋ ಬಿಡುಗಡೆ ಮಾಡದಂತೆ ಸಲಹೆ ನೀಡಿದ್ದರು ಎಂದು ಹೇಳಿದರು.

ನಾನು ಹೈಕೋರ್ಟ್‌ನಿಂದ ಸ್ಟೇ ಕೂಡ ಪಡೆದಿದ್ದೆ. ಆದರೆ ಈಗ ಸತ್ಯ ಯಾರ ಪರ ಇದೆ ಎಂಬುದು ಜನರಿಗೆ ಗೊತ್ತಾಗಬೇಕೆಂಬ ಕಾರಣಕ್ಕೆ ವಿಡಿಯೋ ಬಿಡುಗಡೆ ಮಾಡಿದ್ದೇನೆ. ಸಂಪೂರ್ಣ ಸಿಸಿಟಿವಿ ದೃಶ್ಯಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಅಗತ್ಯವಿರುವಷ್ಟು ಭಾಗವನ್ನಷ್ಟೇ ಪೋಸ್ಟ್ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ತಮ್ಮ ಮನೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಬಗ್ಗೆ ಉಂಟಾಗಿರುವ ಪ್ರಶ್ನೆಗಳಿಗೆ ಉತ್ತರಿಸಿದ ಕಾವ್ಯಾ ಗೌಡ, “ನನ್ನ ಬೆಡ್‌ರೂಮಿನಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂಬ ವಿಚಾರದ ಬಗ್ಗೆ ತಪ್ಪು ಅರ್ಥೈಸಲಾಗಿದೆ. ನನ್ನ ಮಗು ಮನೆಯೊಳಗೆ ಓಡಾಡುತ್ತಿರುತ್ತದೆ. ಅದರ ಸುರಕ್ಷತೆಗಾಗಿ ಮಾತ್ರ ಸಿಸಿಟಿವಿ ಅಳವಡಿಸಲಾಗಿದೆ” ಎಂದು ಹೇಳಿದರು.

ಘಟನೆಯ ವಿವರಗಳನ್ನು ಹಂಚಿಕೊಂಡ ಕಾವ್ಯಗೌಡ, “ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಉದ್ವಿಗ್ನವಾಯಿತು. ನನ್ನ ಮಗುವಿಗೆ ‘ಕಳ್ಳಿ, ಕಳ್ಳಿ’ ಎಂದು ಅವಮಾನಿಸಲಾಗಿದೆ. ಈ ವೇಳೆ ರವಿಕುಮಾರ್ ಅವರು ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ‘ಬೆಡ್‌ರೂಮಿನ ಬಾಗಿಲು ತೆಗಿಯೇ’ ಎಂದು ಪ್ರೇಮಾ ಅವರ ತಂದೆ ರವಿಕುಮಾರ್ ಹೇಳಿದ್ದಾರೆ. ಎರಡು ಬಾರಿ ನನ್ನ ಮೇಲೆ ಹಲ್ಲೆ ನಡೆದರೂ ನಾನು ಮೌನವಾಗಿದ್ದೆ. ಆದರೆ ಸಹನೆ ಮೀರಿದ ಕಾರಣ ಪೊಲೀಸ್ ಠಾಣೆಮೆಟ್ಟಿಲೇರಿದ್ದೇನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯಾ ಗೌಡ ಪರ ವಕೀಲ ಸಿದ್ಧಾರ್ಥ್ ಸುಮನ್ ಮಾತನಾಡಿ, “ಈ ಪ್ರಕರಣವು ಈಗ ನ್ಯಾಯಾಲಯದ ವಿಚಾರಣೆಯಲ್ಲಿದೆ. ಕೋರ್ಟ್‌ನಲ್ಲಿ ಕೇಸ್ ಇರುವುದರಿಂದ ಸಿಸಿಟಿವಿ ವಿಡಿಯೋಗಳ ವಿಷಯವಾಗಿ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.

ನಟಿ ಕಾವ್ಯಾ ಗೌಡ ಮತ್ತೊಮ್ಮೆ ಸ್ಪಷ್ಟಪಡಿಸಿ, “ನನ್ನನ್ನು ಪ್ರೀತಿಸುವ ಅಭಿಮಾನಿಗಳು ಹಾಗೂ ಸಾರ್ವಜನಿಕರು ಸತ್ಯಕ್ಕೆ ಸಾಕ್ಷ್ಯಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಅವರ ಮನವಿಯ ಹಿನ್ನೆಲೆಯಲ್ಲಿ ನಾನು ವಿಡಿಯೋವನ್ನು ಬಿಡುಗಡೆ ಮಾಡಿದ್ದೇನೆ” ಎಂದರು. ಒಟ್ಟಾರೆ, ಕಿರುತೆರೆ ನಟಿ ಕಾವ್ಯಗೌಡ ಹಾಗೂ ವಾರಗಿತ್ತಿ ಕುಟುಂಬದ ನಡುವಿನ ಈ ವಿವಾದ ಇದೀಗ ಕಾನೂನು ಹಾದಿ ಹಿಡಿದಿದ್ದು, ಮುಂದಿನ ತೀರ್ಪು ನ್ಯಾಯಾಲಯದಿಂದಲೇ ಹೊರಬರಬೇಕಿದೆ.

Source link
ಕಾವ್ಯಾ ಗೌಡ ಕುಟುಂಬ ಕಲಹ: ವಿಡಿಯೋ ರಿಲೀಸ್ ಬಗ್ಗೆ ಸ್ಪಷ್ಟನೆ, ಬೆಡ್ ರೂಂನಲ್ಲಿಯೂ ಸಿಸಿಟಿವಿ ಹಾಕಿಸಿರುವ ನಟಿ