Negative effects of counting food ವಾಸ್ತು ಪ್ರಕಾರ, ಮನೆಯಲ್ಲಿ ಅಡುಗೆ ಮಾಡುವವರ ಮನಸ್ಥಿತಿ ಹಾಗೂ ಆಹಾರವನ್ನು ತೃಪ್ತಿಯಾಗುವವರೆಗೆ ಬಡಿಸುವ ಸಂಪ್ರದಾಯವು ಕುಟುಂಬದ ಮತ್ತು ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ.

ವಾಸ್ತು ಪ್ರಕಾರ ಮನೆಯಲ್ಲಿ ಮಾಡುವ ಪ್ರತಿಯೊಂದು ಕೆಲಸವೂ ಸರಿಯಾಗಿರಬೇಕು. ವಿಶೇಷವಾಗಿ ಚಪಾತಿ ಮಾಡುವಾಗ ಎಣಿಕೆ ಮಾಡಿ ಮಾಡುವುದು, ಬಡಿಸುವುದನ್ನು ಮಾಡಬಾರದು. ಹೀಗೆ ಮಾಡಿದರೆ ಏನಾಗುತ್ತೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ

ಭಾರತೀಯ ಆಹಾರದಲ್ಲಿ ರೊಟ್ಟಿ, ಚಪಾತಿ, ಪರಾಟಗಳು ಭಾಗವಾಗಿವೆ. ತೂಕ ಇಳಿಸಲು ಅನೇಕರು ಬಗೆ ಬಗೆಯ ರೊಟ್ಟಿ ತಿನ್ನಲು ಇಷ್ಟಪಡುತ್ತಾರೆ. ಇಂದು ಕೆಲವರು ಮನೆಯಲ್ಲಿ ರೊಟ್ಟಿ ಮಾಡುವಾಗ ಎಣಿಕೆ ಮಾಡಿ ಮಾಡುತ್ತಾರೆ. ವಾಸ್ತು ಪ್ರಕಾರ ಇದು ತಪ್ಪು ಎಂದು ಹೇಳಲಾಗುತ್ತದೆ.

ವಾಸ್ತು ಪ್ರಕಾರ, ಅಡುಗೆ ಮಾಡುವವರ ಮನಸ್ಸು ಕೂಡ ಮುಖ್ಯವಾಗಿರುತ್ತದೆ. ಅವಸರ, ಒತ್ತಡದಿಂದ ಮಾಡಿದ ಆಹಾರವು ಕುಟುಂಬದಲ್ಲಿ ಅಸಮಾಧಾನ, ಜಗಳಗಳಿಗೆ ಕಾರಣವಾಗಬಹುದು. ಒಂದು ವೇಳೆ ಹೆಚ್ಚುವರಿಯಾಗಿ ಉಳಿದ ಚಪಾತಿ ಅಥವಾ ರೊಟ್ಟಿಯನ್ನು ಪ್ರಾಣಿಗಳಿಗೆ ನೀಡಬೇಕು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.

ಹಳೆಯ ಸಂಪ್ರದಾಯಗಳ ಪ್ರಕಾರ, ರೊಟ್ಟಿ, ಚಪಾತಿಗಳನ್ನು ಎಣಿಸುವುದು ಒಳ್ಳೆಯದಲ್ಲ. ಅತಿಥಿಗಳು ತೃಪ್ತಿಯಾಗುವವರೆಗೆ ಬಡಿಸುವುದೇ ನಮ್ಮ ಸಂಪ್ರದಾಯವಾಗಿದೆ. ಆಹಾರದಲ್ಲಿ ಮಿತಿ ಹೇರಿದರೆ, ಅದು ಜೀವನದ ಮೇಲೆ ಪರಿಣಾಮ ಬೀರುತ್ತದೆ.

ರೋಟಿಗಳನ್ನು ಎಣಿಸುವುದು ಕೇವಲ ಅಡುಗೆಮನೆಯ ಅಭ್ಯಾಸವಲ್ಲ, ಅದು ನಮ್ಮ ಆಲೋಚನಾ ವಿಧಾನವನ್ನು ತೋರಿಸುತ್ತದೆ. ಆಹಾರದಲ್ಲಿ ಲೆಕ್ಕಾಚಾರದ ಬದಲು ತೃಪ್ತಿ, ಸಂತೋಷ ಮತ್ತು ಆತಿಥ್ಯದ ಭಾವನೆ ಇರಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಅದೇ ರೀತಿ ತಟ್ಟೆಗೆ ಬಡಿಸುವಾಗ ಒಂದೇ ಬಾರಿಗೆ ಮೂರು ಚಪಾತಿ/ರೊಟ್ಟಿಯನ್ನು ಬಡಿಸಬಾರದು. ಪಿಂಡ ಪ್ರದಾನ ಮಾಡುವಾಗಲೂ ಮೂರು ಪಿಂಡಗಳನ್ನು ಇರಿಸಲಾಗುತ್ತದೆ. ಈ ಕಾರಣದಿಂದ ತಟ್ಟೆಗೆ ಒಂದೇ ಬಾರಿ ಮೂರು ಚಪಾತಿ/ರೊಟ್ಟಿ/ದೋಸೆ/ಇಡ್ಲಿ ಸೇರಿದಂತೆ ಯಾವುದೇ ಆಹಾರ ಬಡಿಸೋದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.

Source link
Vastu Tips: ಚಪಾತಿ ತಯಾರಿಸುವಾಗ & ಬಡಿಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ