Savitha Lokesh Yadav Video: ಆರು ಮೂಟೆ ರಾಗಿಯನ್ನು ಆರು ತಿಂಗಳಿಗೆ ಖಾಲಿ ಮಾಡಿದೆ. 12 ತಿಂಗಳೊಳಗಡೆ ರಾಗಿ 12 ಚೀಲ ಖಾಲಿ ಮಾಡ್ತೀನಿ, ನಿಮ್ಮ ಮನೆಯಲ್ಲಿ ರಾಗಿ ಇದ್ದರೆ ನಾನೇ ಖರೀದಿ ಮಾಡ್ತೀನಿ, ಯಾರಿಗೂ ಕೊಡಬೇಡಿ ಎಂದು ಸವಿತಾ ಲೋಕೇಶ್ ಯಾದವ್ ಎನ್ನುವವರು ವಿಡಿಯೋ ಹಂಚಿಕೊಂಡಿದ್ದಾರೆ.

ಐದರಿಂದ ಆರು ಮುದ್ದೆ ಆಗುವಷ್ಟು ಸೈಜ್‌ನ ಮುದ್ದೆಯನ್ನು ಅವರು ಒಂದು ಹೊತ್ತಿಗೆ ತಿನ್ನುತ್ತಾರಂತೆ. ಇದನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾನೆ. ಇದನ್ನು ನೋಡಿ ಅನೇಕರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.

ಮುದ್ದೆ ಮಾಡೋದು ಫಸ್ಟ್ ಕಲಿಯಿರಿ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು, ಈ ಮಹಾತಾಯಿಗೆ ದೃಷ್ಟಿ ಬಿದ್ದು, ಊಟ ತಿಂಡಿ ತಿನ್ನದಿರೋ ಹಾಗೆ ಆಗಲಿ, ಬುದ್ಧಿ ಕಲಿಯೋದಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಇವರ ಸೋಶಿಯಲ್ ಮೀಡಿಯಾ ಪೋಸ್ಟ್ ತುಂಬೆಲ್ಲ ನೆಗೆಟಿವ್ ಕಾಮೆಂಟ್ಸ್‌ಗಳೇ ಇವೆ. ಸಕ್ರೇಬೈಲು ಬಿಡಾರದಲ್ಲಿ ಆನೆಗೆ ಕೊಡುವ ಮುದ್ದೆಯನ್ನು ತಿಂತೀರಾ, ವಿಡಿಯೋದಲ್ಲಿ ಮಾತ್ರ ಹೀಗೆ ತೋರಿಸೋದಲ್ಲ, ನಿಜವಾಗಿಯೂ ತಿಂದು ತೋರಿಸು ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್, ವ್ಯೂಸ್‌ಗೋಸ್ಕರ ಕೆಲವರು ಏನು ಬೇಕಿದ್ರೂ ಮಾಡುತ್ತಾರೆ. ಈಗ ಸವಿತಾ ಲೋಕೇಶ್ ಯಾದವ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಊಟ ಮಾಡುವ ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ.

ಒಂದು ತಿಂಗಳಿಗೆ ಆಗುವಷ್ಟು ಊಟವನ್ನು ಅವರು ಒಂದು ಹೊತ್ತಿಗೆ ಊಟ ಮಾಡ್ತಾರೆ ಎಂದು ಅನೇಕರು ನೆಗೆಟಿವ್ ಮಾತನಾಡುತ್ತಾರೆ. ಇದನ್ನೇ ಅವರು ಬಂಡವಾಳ ಮಾಡಿಕೊಂಡು, ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದಾರೆ. ಇದರಿಂದಲೇ ಪ್ರಮೋಶನ್ಸ್ ಕೂಡ ಮಾಡುತ್ತಾರೆ.

Source link
ಇದು ಮುದ್ದೆ ಅಲ್ಲ, ಆನೆ ಲದ್ದಿ; ಈ ಮಹಿಳೆ ತಿನ್ನೋದು ನೋಡಿ, ದೃಷ್ಟಿ ಬಿದ್ದು, ಉಣ್ಣಬಾರದು; ಹಿಡಿ ಶಾಪ ಹಾಕಿದ ಜನರು