22 ವರ್ಷದ ಕನ್ನಡಿಗ ಆದರ್ಶ್ ಹಿರೇಮಠ ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್

22 ವರ್ಷದ ಕನ್ನಡಿಗ ಆದರ್ಶ್ ಹಿರೇಮಠ ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್


ಕ್ಯಾಲಿಫೋರ್ನಿಯಾ, ಡಿಸೆಂಬರ್ 2: ಅಮೆರಿಕದ ಎಐ ಸರ್ವಿಸ್ ಸ್ಟಾರ್ಟಪ್ ಆಗಿರುವ ಮರ್ಕರ್ನ ಮೂವರು ಸಂಸ್ಥಾಪಕರು ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಸ್ವನಿರ್ಮಿತ ಶತಕೋಟ್ಯಾಧಿಪತಿಗಳೆನಿಸಿದ್ದಾರೆ (ಸ್ವಯಂ ನಿರ್ಮಿತ ಕೋಟ್ಯಾಧಿಪತಿಗಳು). ಶಾಲಾ ಕಾಲೇಜು ದಿನಗಳ ಗೆಳೆಯರು, ಸಮಾನ ವಯಸ್ಕರು, ಸಮಾನ ಮನಸ್ಕರೂ ಆಗಿರುವ ಆದರ್ಶ ಹಿರೇಮಠ (ಆದರ್ಶ ಹಿರೇಮಠ), ಮಿಧ (ಸೂರ್ಯ ಮಿಧಾ) ಮತ್ತು ಬ್ರೆಂಡನ್ ಫೂಡಿ (ಬ್ರೆಂಡನ್ ಫುಡಿ) ಅವರು ವಿಶ್ವದ ಅತೀ ಕಿರಿಯ ಸೆಲ್ಫ್ ಮೇಡ್ ಬಿಲಿಯನೇರ್ ಎಂಬ ದಾಖಲೆಗೆ ಬಾಜನರಾಗಿದ್ದಾರೆ. 22 ವರ್ಷದ ವಯಸ್ಸಿನಲ್ಲಿ ಈ ಮೂವರು ಶತಕೋಟ್ಯಾಧಿಪತಿಗಳಾಗಿದ್ದಾರೆ. ಈ ಮೂವರಲ್ಲಿ ಆದರ್ಶ್ ಹಿರೇಮಠ್ ಕರ್ನಾಟಕ ಮೂಲದ ಕುಟುಂಬದವರು. ಸೂರ್ಯ ಮಿಧ ಕೂಡ ಭಾರತ ಮೂಲದ ಕುಟುಂಬದವರು. ಫೂಡಿ ಸ್ಥಳೀಯ ಅಮೆರಿಕನ್.

ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಅವರು 2008 ರಲ್ಲಿ 23 ನೇ ವಯಸ್ಸಿನಲ್ಲಿ ಬಿಲಿಯನೇರ್ ಎನಿಸಿದ್ದರು. ಈವರೆಗೆ ದಾಖಲೆ ಇತ್ತು. ಈಗ ಆದರ್ಶ್ ಹಿರೇಮಠ್ ಹಾಗೂ ಅವರ ಸ್ನೇಹಿತರು ದಾಖಲೆ ಮುರಿದಿದ್ದಾರೆ.

ಇದನ್ನೂ ಓದಿ: ಗಿಫ್ಟ್ ಡೀಡ್ ಮಾಡಿದ ಆಸ್ತಿಯನ್ನು ಹಿಂಪಡೆಯಲು ಸಾಧ್ಯವಾ? ಕೋರ್ಟ್ ನೀಡಿದ ಮಹತ್ವದ ತೀರ್ಪಿದು

ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ಬಹಳ ಪ್ರತಿಷ್ಠಿತ ಬೇ ಏರಿಯಾದಲ್ಲಿ ಬೆಳೆದು ಬಂದವರು ಈ ಮೂವರು ಗೆಳೆಯರು. ಶಾಲೆಯಲ್ಲಿ ಓದುವಾಗ ನಡೆದ ಡಿಬೇಟ್ ಕಾರ್ಯಕ್ರಮದಲ್ಲಿ ಈ ಮೂವರ ಸಮಾಗಮವಾಗಿತ್ತು. ಅಲ್ಲಿಂದ ಮುಂದೆ ಇವರ ಬೆಸುಗೆ ಗಟ್ಟಿಯಾಗುತ್ತಾ ಹೋದರು.

22 ನೇ ವಯಸ್ಸಿನಲ್ಲಿ 3 ಕಿರಿಯ ಸ್ವಯಂ ನಿರ್ಮಿತ ಕೋಟ್ಯಾಧಿಪತಿಗಳಲ್ಲಿ ಕನ್ನಡಿಗ ಆದರ್ಶ ಹಿರೇಮಠ್

ಮೆರ್ಕರ್ ಸ್ಟಾರ್ಟಪ್ನ ಮೂವರು ಸಂಸ್ಥಾಪಕರು

ಉದಯೋನ್ಮುಖ ಪ್ರತಿಭೆಗಳನ್ನು ಉತ್ತೇಜಿಸಲು ನೀಡಲಾಗುವ ಥಿಯೆಲ್ ಫೆಲೋಶಿಪ್‌ಗೆ ಈ ಮೂವರು ಸ್ನೇಹಿತರನ್ನು ಆಯ್ಕೆ ಮಾಡಲಾಗಿದೆ. ಆ ಫೆಲೋಶಿಪ್ ಸಿಕ್ಕಬಳಿಕ ಆದರ್ಶ ಹಿರೇಮಠ್ ಹಾಗೂ ಅವರ ಇಬ್ಬರು ಸ್ನೇಹಿತರು ಕಾಲೇಜು ಓದಿ ತಿಲಾಂಜಲಿ ಹಾಡಿ, ಫೆಲೋಶಿಪ್‌ನಿಂದ ಸಿಕ್ಕ ಗ್ರ್ಯಾಂಟ್ ಬಳಸಿ ಸ್ಟಾರ್ಟಪ್ ಆರಂಭಿಸಿದರು.

ಇದನ್ನೂ ಓದಿ: ಹಣದ ಹಿಂದೆ ಬೀಳದಿರಿ; ನೀವೀ ಕೆಲಸ ಮಾಡಿದರೆ ಕಾಂಚಾಣ ತಾನಾಗೇ ಬರುತ್ತೆ: ಇಲಾನ್ ಮಸ್ಕ್ ಮಸ್ತ್ ಟಿಪ್ಸ್

2023ರಲ್ಲಿ ಮರ್ಕರ್ ಸ್ಥಾಪನೆ

ಮೂವರು ಸ್ನೇಹಿತರು ಅಮೆರಿಕನ್ ಕಂಪನಿಗಳಿಗೆ ಭಾರತದಿಂದ ಫ್ರೀನ್ಸ್ ಕೋಡರ್ಗಳನ್ನು ರೆಫರ್ ಮಾಡುವ ಪ್ಲಾಟ್ಫಾರ್ಮ್ ಸೃಷ್ಟಿಸುತ್ತಾರೆ. ಭಾರತದಲ್ಲಿರುವ ಉದ್ಯೋಗಿಗಳು ಹಾಗೂ ಅಮೆರಿಕನ್ ಕಂಪನಿಗಳ ನಡುವೆ ಕೊಂಡಿಯಾಗಿ ಎಐ ಚಾಲಿತ ಅಪ್ಲಿಕೇಶನ್ ಆಗುತ್ತದೆ. ಬಳಿಕ ಅವರ ಕಾರ್ಯಕ್ಷೇತ್ರ ವಿಸ್ತರಣೆಯಾಗುತ್ತಾ ಹೋಗುತ್ತದೆ. ಡಾಟಾ ಲೇಬಲಿಂಗ್ ಸಿಸ್ಟಂಗಳನ್ನು ಪ್ರಾರಂಭಿಸಲು ತೊಡಗಿದೆ. ಜೊತೆಗೆ, ದೊಡ್ಡದೊಡ್ಡ ಎಐ ಲ್ಯಾಬ್‌ಗಳಿಗೆ ತರಬೇತಿ ನೀಡಲು ಮಾನವ ಸಂಪನ್ಮೂಲವನ್ನು ಒದಗಿಸುವ ಸೇವೆಯನ್ನು ಮರ್ಕರ್ ಕಂಪನಿ ನೀಡುತ್ತದೆ.

22 ನೇ ವಯಸ್ಸಿನಲ್ಲಿ 3 ಕಿರಿಯ ಸ್ವಯಂ ನಿರ್ಮಿತ ಕೋಟ್ಯಾಧಿಪತಿಗಳಲ್ಲಿ ಕನ್ನಡಿಗ ಆದರ್ಶ ಹಿರೇಮಠ್

ಮೆರ್ಕರ್ ಸ್ಟಾರ್ಟಪ್ನ ಮೂವರು ಸಂಸ್ಥಾಪಕರು

ಆದರ್ಶ್ ಹಿರೇಮಠ್ ಅವರು ಈ ಸ್ಟಾರ್ಟಪ್ ನಲ್ಲಿ ಸಿಟಿಯೋ ಆಗಿದ್ದಾರೆ. ಬ್ರೆಂಡನ್ ಫುಡ್ ಸಿಇಒ ಆಗಿದ್ದಾರೆ, ಸೂರ್ಯ ಮೇಧಾ ಅವರು ಬೋರ್ಡ್ ಚೇರ್ಮನ್ ಆಗಿ ಕೆಲಸ ಮಾಡುತ್ತಿದ್ದಾರೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *