ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು

ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು


ಬೆಂಗಳೂರು, (ಫೆಬ್ರವರಿ 27): ವಿಮಾನದಲ್ಲಿ ಬೆಂಗಳೂರಿನಿಂದ ನೇಪಾಳದ (ನೇಪಾಳ) ಕಠ್ಮಂಡು (ಕಠ್ಮಂಡು) ಹೊರಟಿದ್ದ ಕನ್ನಡಿಗರು (ಕೋಲಾರ್) ಪರದಾಡಿರುವ ವಿಮಾನ ಘಟನೆ ನಡೆದಿದೆ. ಕಠ್ಮಣದಲ್ಲಿ ವಿಮಾನ ಲ್ಯಾಂಡಿಂಗ್‌ಗೆ ಅನುಮತಿ ಸಿಗದ ಕಾರಣ ಎರಡು ದಿನ ವಿಮಾನದಲ್ಲೇ ಉಳಿದಿದೆ. ವಿಮಾನವು ಸಹ ಎಲ್ಲೂ ಲ್ಯಾಡ್ ಆಗದೇ ಆಕಾಶದಲ್ಲಿ ರೌಂಡ ಹಾಕಿದೆ.ಇದರಿಂದ ಪ್ರವಾಸಕ್ಕೆಂದು ತೆರಳಿದ್ದ ಪ್ರಯಾಣಿಕರು ಎರಡು ದಿನಗಳಿಂದ ಪ್ಲೈಟ್ ನಲ್ಲೇ ಸಿಲುಕಿ ಪರದಾಡಿದ್ದಾರೆ. ಇನ್ನು ವಿಮಾನದಲ್ಲಿ ಸರಿಯಾದ ಊಟಕ್ಕೆ ನೀರು ಕೊಡದೆ ತೊಂದರೆ ಕೊಡ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನದಲ್ಲಿ ನಿನ್ನೆ(ಫೆಬ್ರವರಿ 26) ಬೆಳಗ್ಗೆ ಕಠ್ಮಂಡುಗೆ ಪ್ರಯಾಣ ಬೆಳೆಸಿದ್ದರು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಕಠ್ಮಂಡುನಲ್ಲಿ ವಿಮಾನ ಲ್ಯಾಂಡಿಂಗ್‌ಗೆ ಅನುಮತಿ ಸಿಗದ ಕಾರಣ ವಿಮಾನ, ದಿನ ಪೂರ್ತಿ ಸುತ್ತಾಡಿ ರಾತ್ರಿ ಬೆಂಗಳೂರಿಗೆ ಬಂದಿದೆ. ನಂತರ ಇಂದು (ಫೆಬ್ರವರಿ 27) ಬೆಳಗ್ಗೆ ಮತ್ತೆ ಬೆಳಗ್ಗೆ ಅದೇ ಪ್ಲಾಟ್ ನಲ್ಲಿ 170 ಜನ ಪ್ರಯಾಣಿಕರನ್ನು ಕರೆದೊಯ್ದಿದೆ.



Source link

Leave a Reply

Your email address will not be published. Required fields are marked *