‘ಒಟಿಟಿ’ಗೆ ಬಂದ ‘ಕಾಂತಾರ: ಚಾಪ್ಟರ್ 1’; ಸಿನಿಮಾದ ಭಾಷಾವಾರು ಕಲೆಕ್ಷನ್ ವಿವರ ಇಲ್ಲಿದೆ

‘ಒಟಿಟಿ’ಗೆ ಬಂದ ‘ಕಾಂತಾರ: ಚಾಪ್ಟರ್ 1’; ಸಿನಿಮಾದ ಭಾಷಾವಾರು ಕಲೆಕ್ಷನ್ ವಿವರ ಇಲ್ಲಿದೆ


‘ಕಾಂತಾರ: ಅಧ್ಯಾಯ 1’ (ಕಾಂತಾರ: ಅಧ್ಯಾಯ 1) ಸಿನಿಮಾ ಥಿಯೇಟರ್ ನಲ್ಲಿ ಅಬ್ಬರಿಸಿದ ಬಳಿಕ ಈಗ ಒಟಿಟಿಗೆ ಕಾಲಿಟ್ಟಿದೆ. ಇಂದಿನಿಂದ (ಅಕ್ಟೋಬರ್ 31) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ಪ್ರಸಾರವಾಗುತ್ತಿದೆ. ಈ ಚಿತ್ರ ಕನ್ನಡದಲ್ಲಿದೆ, ಪರಭಾಷೆಯಲ್ಲೂ ಮೆಚ್ಚುಗೆ ಪಡೆಯಿತು. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟು ಎಂಬ ಬಗ್ಗೆ, ಈ ಸಿನಿಮಾದ ಹಿಂದಿ ವರ್ಷ ಒಟಿಟಿಗೆ ಬರೋದು ಯಾವಾಗ ಎಂಬ ಬಗ್ಗೆ ಇಲ್ಲಿದೆ ವಿವರ.

‘ಕಾಂತಾರ: ಅಧ್ಯಾಯ 1’ ಸಿನಿಮಾ ಅಕ್ಟೋಬರ್ 2 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ. ಈಗ ಚಿತ್ರ ಒಟಿಟಿಯಲ್ಲಿ ಪ್ರಸಾರ ಆರಂಭವಾಗಿದೆ. ಕೇವಲ 30 ದಿನಕ್ಕೆ ಸಿನಿಮಾ ಒಟಿಟಿಗೆ ಬಂದಿದೆ ಅನ್ನೋದು ವಿಶೇಷ. ಇಂದಿನಿಂದ (ಅಕ್ಟೋಬರ್ 31) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಕನ್ನಡಕ್ಕಿಂತ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ. ಈ ಸಿನಿಮಾ ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲೂ ಹಿಟ್ ಆಗಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಭಾರತದ ಒಟ್ಟಾರೆ ಕಲೆಕ್ಷನ್ 714 ಕೋಟಿ ರೂಪಾಯಿ. ಈ ಚಿತ್ರ ಕನ್ನಡದಲ್ಲಿ 239 ಕೋಟಿ ರೂಪಾಯಿ ಗಳಿಸಿದೆ. ಉತ್ತರ ಭಾರತದಲ್ಲಿ ಈ ಸಿನಿಮಾ ಕಲೆಕ್ಷನ್ ಮಾಡಿದ್ದು 243 ಕೋಟಿ ರೂಪಾಯಿ. ತಮಿಳುನಾಡಿನಲ್ಲಿ 70 ಕೋಟಿ ರೂಪಾಯಿ, ಕೇರಳದಲ್ಲಿ 55 ಕೋಟಿ ರೂಪಾಯಿ ಹಾಗೂ ಆಂಧ್ರ ಹಾಗೂ ತೆಲಂಗಾಣದಿಂದ 105 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇದನ್ನೂ ಓದಿ

ಇದನ್ನೂ ಓದಿ: ಒಟಿಟಿ ರಿಲೀಸ್ ಪ್ರಕಟಿಸಿದ ಬಳಿಕವೂ ಕೋಟಿ ಕೋಟಿ ಬಾಚಿದ ‘ಕಾಂತಾರ: ಅಧ್ಯಾಯ 1’

ಹಿಂದಿ ಒಟಿಟಿ ರಿಲೀಸ್ ವಿಳಂಬ

ಸದ್ಯ ‘ಕಾಂತಾರ: ಅಧ್ಯಾಯ 1’ ಚಿತ್ರ ಕನ್ನಡ, ತಮಿಳು, ಮಲಯಾಳಂ ಹಾಗೂ ತಮಿಳು ವರ್ಷನ್ ಮಾತ್ರ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾದ ಹಿಂದಿ ವರ್ಷ ಇನ್ನೂ ಬಿಡುಗಡೆ ಕಂಡಿಲ್ಲ. ಇದನ್ನು ನೋಡಲು ಇನ್ನೂ ಒಂದು ತಿಂಗಳು ಕಾಯಬೇಕು ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *