ದೈವ ಅವಮಾನಿಸಿದ ರಣವೀರ್ ಸಿಂಗ್​ಗೆ ಕೌಂಟರ್ ಕೊಟ್ಟ ಅಮೇಜಾನ್ ಪ್ರೈಮ್ ವಿಡಿಯೋ

ದೈವ ಅವಮಾನಿಸಿದ ರಣವೀರ್ ಸಿಂಗ್​ಗೆ ಕೌಂಟರ್ ಕೊಟ್ಟ ಅಮೇಜಾನ್ ಪ್ರೈಮ್ ವಿಡಿಯೋ


ನಟ ರಣವೀರ್ ಸಿಂಗ್ (ರಣವೀರ್ ಸಿಂಗ್) ಅವರು ಇತ್ತೀಚೆಗೆ ವಿವಾದ ಒಂದನ್ನು ಮಾಡಿಕೊಂಡಿದ್ದರು. ದೈವವನ್ನು ಅವರು ದೆವ್ವ ಎಂದು ಕರೆದರು. ಅಷ್ಟೇ ಅಲ್ಲ, ದೈವವನ್ನು ಅನುಕರಿಸಲು ಹೋಗಿ ಹೀಯಾಳಿಸಿದಂತೆ ಕಾಣಿಸಿದೆ. ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಗೋವಾ ಅಂತಾರಾಷ್ಟ್ರೀಯ ಸಿನಿಮಾೋತ್ಸವದಲ್ಲಿ ಈ ಘಟನೆ ನಡೆದಿದೆ. ಅಲ್ಲಿಯೇ ಕುಳಿತಿದ್ದ ರಿಷಬ್ ಶೆಟ್ಟಿಗೂ ಸಾಕಷ್ಟು ಮುಜುಗರ ತಂದಿತ್ತು. ಈಗ ಅಮೇಜಾನ್ ಪ್ರೈಮ್ ವಿಡಿಯೋ ಈ ಬಗ್ಗೆ ಪೋಸ್ಟ್ ಮಾಡಿದೆ. ಈ ಮೂಲಕ ರಣವೀರ್ ಸಿಂಗ್ ಗೆ ಕೌಂಟರ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಗೋವಾ ಅಂತಾರಾಷ್ಟ್ರೀಯ ಸಿನಿಮಾೋತ್ಸವದ ಸಮಾರೋಪ ಸಮಾರಂಭ ನಡೆಯುತ್ತಿತ್ತು. ರಣವೀರ್ ಸಿಂಗ್ ಅವರು ತಮ್ಮ ‘ಧುರಂದರ್’ ಸಿನಿಮಾ ಪ್ರಚಾರ ಮಾಡಲು ಅಲ್ಲಿಗೆ ಬಂದಿದ್ದರು. ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರವನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡರು.

ಇದನ್ನೂ ಓದಿ: ದೈವವನ್ನು ದೆವ್ವ ಎಂದ ಬಾಲಿವುಡ್ ಸ್ಟಾರ್: ರಿಷಬ್ ಮುಂದೆಯೇ ಅವಮಾನ

‘ರಿಷಬ್ ಅವರೇ ನಿಮ್ಮದು ಅದ್ಭುತ ನಟನೆ. ಮಹಿಳಾ ದೆವ್ವ ನಿಮ್ಮ ದೇಹದೊಳಗೆ ಹೋದಾಗ ನಿಮ್ಮ ನಟನೆ ಅದ್ಭುತವಾಗಿತ್ತು’ ಎಂದು ರಣವೀರ್ ಸಿಂಗ್ ಹೇಳಿದ್ದಾರೆ. ದೈವಕ್ಕೂ ದೆವ್ವಕ್ಕೂ ವ್ಯತ್ಯಾಸ ಗೊತ್ತಿಲ್ಲದೆ ಮಾತನಾಡಿದ್ದು ಮೊದಲನೆಯ ತಪ್ಪು ಆ ಬಳಿಕ ಅವರು ದೈವವನ್ನು ಅನುಕರಿಸಲು ಹೋಗಿದ್ದು ಮತ್ತೊಂದು ತಪ್ಪು. ಈಗ ಅಮೇಜಾನ್ ಪ್ರೈಮ್ ವಿಡಿಯೋ ರಣವೀರ್ ಗೆ ಕೌಂಟರ್ ಕೊಟ್ಟಿದೆ.

ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ‘ಕಾಂತಾರ: ಅಧ್ಯಾಯ 1’ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾದ ಹಿಂದಿ ವರ್ಷನ್ ಕ್ಲಿಪ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅದು ಯಾವುದೋ ಒಂದು ಎಂದಾದರೆ ಅಷ್ಟಾಗಿ ಚರ್ಚೆ ಆಗ ದೃಶ್ಯ. ಇಲ್ಲಿ ಪ್ರೈಮ್ ವಿಡಿಯೋ ಶೇರ್ ಮಾಡಿಕೊಂಡಿರೋದು ರಣವೀರ್ ಸಿಂಗ್ ದೈವವನ್ನು ದೆವ್ವ ಎಂದು ವಿವರಿಸಿದ ದೃಶ್ಯವೇ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ರಣವೀರ್‌ಗೆ ಕೌಂಟರ್ ಕೊಡಲು ಪ್ರೈಮ್ ವಿಡಿಯೋ ಈ ರೀತಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.





Source link

Leave a Reply

Your email address will not be published. Required fields are marked *