ಚಿಕ್ಕಮಗಳೂರು, ನವೆಂಬರ್ 06: ಜಮೀನು ಸರ್ವೆ ವೇಳೆ ಕೈಯಲ್ಲಿ ಬೆಂಕಿ ಹಿಡಿದು ಕಾಂತಾರ ಸಿನಿಮಾದಲ್ಲಿ ಬರುವ ದೈವದ ರೀತಿಯಲ್ಲೇ ವರ್ತಿಸಿ ವ್ಯಕ್ತಿಯೋರ್ವ ಹೈಡ್ರಾಮಾ ನಡೆಸುತ್ತಿರುವ ಪ್ರಸಂಗ ಚಿಕ್ಕಮಗಳೂರು ಕೊಪ್ಪ ತಾಲೂಕು ಚಿಕ್ಕನಗುಂಡಿ ಜಿಲ್ಲೆಯಲ್ಲಿ ನಡೆದಿದೆ. ಜಮೀನು ಸರ್ವೆ ಮಾಡುವ ಸ್ಥಳಕ್ಕೆ ದೈವ ಮೈಮೇಲೆ ಬಂದಿದೆ ಎಂದು ಹೈಡ್ರಾಮಾ ಮಾಡಿ ಬಂದ ವ್ಯಕ್ತಿ ಸುರೇಶ್, ಓಡಿಬಂದು ನಿಂತಿದ್ದ ಮಹಿಳೆಯ ಮೇಲೆ ಹಲ್ಲೆ. ಜಮೀನು ಸಮೀಕ್ಷೆಗೆ ಬಂದಿದ್ದ ಅಧಿಕಾರಿಗಳು, ಪೊಲೀಸರಿಗೆ ಶಾಕ್ ಆಗಿದ್ದಾರೆ. ಸುರೇಶ್ ಅಣ್ಣ ತಮ್ಮರ ನಡುವೆ ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆ ನಡೆದಿದ್ದು,ಸರ್ವೆ ನಡೆಸುವಂತೆ ಕೊಪ್ಪ ಜೆಎಂಎಫ್ ಸಿ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಜಮೀನು ಸರ್ವೆ ನಡೆಸುತ್ತಿದ್ದ ವೇಳೆ ಬೆಂಕಿ ಹಿಡಿದು ಬಂದ ಸುರೇಶ್, ತನ್ನ ತಮ್ಮನ ಹೆಂಡತಿ ರಮ್ಯಾ ಮೇಲೆ ಹಲ್ಲೆ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.