Headlines

ಕಪಿಲ್ ಶರ್ಮಾ ರೆಸ್ಟೊರೆಂಟ್​ ಮೇಲೆ ಮತ್ತೆ ಗುಂಡಿನ ದಾಳಿ: ವಿಡಿಯೋ

ಕಪಿಲ್ ಶರ್ಮಾ ರೆಸ್ಟೊರೆಂಟ್​ ಮೇಲೆ ಮತ್ತೆ ಗುಂಡಿನ ದಾಳಿ: ವಿಡಿಯೋ


ಕಪಿಲ್ ಶರ್ಮಾ (ಕಪಿಲ್ ಶರ್ಮಾ) ಭಾರತದ ಬಲು ಜನಪ್ರಿಯ ಸೆಲೆಬ್ರಿಟಿ. ಭಾರತದ ಅತ್ಯಂತ ಶ್ರೀಮಂತ ಕಾಮಿಡಿಯನ್. ಟಿವಿ ಲೋಕದ ತಾರೆ. ಇದೆಲ್ಲದರ ಜೊತೆಗೆ ಅವರ ಉದ್ಯಮಿಯೂ ಹೌದು. ರಿಯಲ್ ಎಸ್ಟೇಟ್ ಹೂಡಿಕೆ ಮತ್ತು ಹೋಟೆಲ್ ಬ್ಯೂಸಿನೆಸ್‌ಗಳಲ್ಲಿಯೂ ಸಹ ಅವರು ತೊಡಗಿಸಿಕೊಂಡಿದ್ದಾರೆ. ಕಪಿಲ್ ಶರ್ಮಾ ಅವರು ಪಂಜಾಬಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆನಡಾದಲ್ಲಿ ತಮ್ಮ ರೆಸ್ಟೊರೆಂಟ್ ತೆರೆದಿದ್ದರು. ಆದರೆ ಇತ್ತೀಚೆಗೆ ಭೂಗತ ಪಾತಕಿಗಳು ರೆಸ್ಟೊರೆಂಟ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅದೂ ಬರೋಬ್ಬರಿ ಮೂರನೇ ಬಾರಿ ರೆಸ್ಟೊರೆಂಟ್ ಗುಂಡಿನ ದಾಳಿಗೆ ಈಡಾಗಿದೆ.

ಕೆನಡಾದ ಸರ್ರೆಯ ನ್ಯೂ ಟೌನ್ ಏರಿಯಾದಲ್ಲಿ ಕಪಿಲ್ ಶರ್ಮಾ ಅವರ ಮಾಲಿಕತ್ವದ ರೆಸ್ಟೊರೆಂಟ್ ಒಂದು ಕಾರ್ಯವನ್ನು ನಿರ್ವಹಿಸುತ್ತಿದೆ. ಗುರುವಾರ ರಾತ್ರಿ ಈ ರೆಸ್ಟೊರೆಂಟ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಲ್ಲಿನ ಕಾಲಮಾನ 3:45ರ ಸುಮಾರಿಗೆ ಕೆಲ ಅಗಂತುಕರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಯಾರಿಗೂ ಹಾನಿ ಆಗಿಲ್ಲ ಆದರೆ ರೆಸ್ಟೊರೆಂಟ್‌ನ ಗಾಜಿಗೆ ಹಾನಿಯಾಗಿದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ಗೆ ಸೇರಿದ ಕುಲ್ವೀರ್ ಸಿಧು ಎಂಬಾತ ಈ ಕೃತ್ಯ ಎಸಗಿದ್ದಾನೆ. ಗುಂಡಿನ ದಾಳಿ ಮಾಡಿದ ವ್ಯಕ್ತಿ ಅದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ಕಾರಿನಲ್ಲಿ ಬಂದ ವ್ಯಕ್ತಿ ಕಾರಿನ ಕಿಟಕಿಯಿಂದ ಕೈ ಹೊರಗೆ ಚಾಚಿ ಹಲವಾರು ಬಾರಿ ರೆಸ್ಟೊರಂಟ್ ಗುಂಡು ಹಾರಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ವ್ಯಕ್ತಿ ಗುಂಡು ಹಾರಿಸುತ್ತಿದ್ದಂತೆ ರೆಸ್ಟೊರೆಂಟ್ ಕಿಟಕಿ, ಬಾಗಿಲಿನ ಗಾಜುಗಳೆಲ್ಲ ಪುಡಿಯಾಗಿ ಕೆಳಗೆ ಉರುಳಿವೆ. ಈ ಘಟನೆ ನಡೆದ ಸಂದರ್ಭದಲ್ಲಿ ರೆಸ್ಟೊರೆಂಟ್ ಸಿಬ್ಬಂದಿ ಒಳಗೆ ಇದ್ದರೂ ಯಾರಿಗೂ ಯಾವುದೇ ರೀತಿಯ ಹಾನಿ ಆಗಿಲ್ಲ. ಘಟನೆ ಕುರಿತಾಗಿ ಕಪಿಲ್ ಶರ್ಮಾ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸ್ಥಳೀಯ ಘಟನೆ ಕುರಿತು ದೂರು ದಾಖಲಿಸಲಾಗಿದೆ.

ಇದನ್ನೂ ಓದಿ:ಮತ್ತೆ ನಿಲ್ಲಲಿದೆ ಕಪಿಲ್ ಶರ್ಮಾ ಶೋ? ಸೆಟ್ನಲ್ಲಿ ದೊಡ್ಡ ಜಗಳ

ಕಪಿಲ್ ಶರ್ಮಾ ಅವರ ಕೆಫೆ ಮೇಲೆ ದಾಳಿ ನಡೆಸುತ್ತಿರುವುದು ಇದು ಮೂರನೇ ಬಾರಿ. ಇದೇ ವರ್ಷ ಜುಲೈ 9 ರಂದು ದಾಳಿ ನಡೆಸಲಾಯಿತು. ಅದಾದ ಬಳಿಕ ಆಗಸ್ಟ್ 7 ರಂದು ದಾಳಿ ಮಾಡಲಾಯ್ತು. ಈಗ ಅಕ್ಟೋಬರ್ 16 ರಂದು ದಾಳಿ ಮಾಡಲಾಗಿದೆ. ಗೋಲ್ಡಿ ಬ್ರಾರ್, ಲಾರೆನ್ಸ್ ಬಿಷ್ಣೋಯಿ ಮುಂತಾದ ಭೂಗತ ಪಾತಕಿಗಳ ಗ್ಯಾಂಗ್‌ಗಳು ಕೆನಡಾ ಎಂದು ತಮ್ಮ ನೆಲೆಯನ್ನು ಮಾಡಿಕೊಂಡಿದ್ದು ತಾವು ಕೇಳಿದಷ್ಟು ಹಣ ಕೊಡದ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಈ ರೀತಿಯ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಈ ಭೂಗತ ಪಾತಕಿಗಳು ಕೆನಡಾದ ಇತರ ಕೆಲವು ಪಂಜಾಬಿನ ಉದ್ಯಮಿಗಳು, ಜನಪ್ರಿಯ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:11 am, ಶುಕ್ರ, 17 ಅಕ್ಟೋಬರ್ 25





Source link

Leave a Reply

Your email address will not be published. Required fields are marked *