ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?

ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?

ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?

ಕರೀನಾ ಕಪೂರ್ ಪ್ರೀತಿಸಿ ಮದುವೆಯಾದ ಸೈಫ್ ಅಲಿ ಖಾನ್  ಲಕ್ಷಾಂತರ ಹಿಂದೂಗಳನ್ನು ಕೊಂದ ಐತಿಹಾಸಿಕ ವ್ಯಕ್ತಿ ತೈಮೂರ್ ಹೆಸರನ್ನು ತಮ್ಮ ಮಗನಿಗೆ ಇಟ್ಟು ವಿವಾದ ಸೃಷ್ಟಿಸಿದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ಹೆಸರಿನ ಹಿಂದಿನ ಕಾರಣದ ಬಗ್ಗೆ ಕರೀನಾ ನೀಡಿದ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಗಂಡ-ಹೆಂಡತಿ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ ಕರೀನಾರನ್ನು ಮದುವೆ ಆಗುವುದಕ್ಕೂ ಮೊದಲು ನಟ ಸೈಫ್ ಅಲಿ ಖಾನ್ ಅಮೃತಾ ಸಿಂಗ್ (Amrita Singh)ಅವರನ್ನು ಮದುವೆಯಾಗಿದ್ದರು. ಸೈಫ್-ಅಮೃತಾ ಜೋಡಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳೂ ಸಹ ಇದ್ದಾರೆ. 1991ರಲ್ಲಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದ ಸೈಫ್ ಅಲಿ ಖಾನ್ 2004ರಲ್ಲಿ ಅವರಿಗೆ ಡಿವೋರ್ಸ್ ನೀಡಿದ್ದಾರೆ. ಅಷ್ಟರಲ್ಲಾಗಲೇ ಸೈಫ್ ಕರೀನಾ ಮೇಲೆ ಕಣ್ಣು ಹಾಕಿ ಆಗಿತ್ತು.

ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಜೋಡಿಯ ಲವ್ ಕಹಾನಿ ಭಾರೀ ವಿಚಿತ್ರ ಹಾಗೂ ವಿಭಿನ್ನವಾಗಿದೆ. ಅಮೃತಾ ಸಿಂಗ್ ಜತೆ ಮದುವೆ ಮಾಡಿಕೊಂಡ ವೇಳೆ ತಮ್ಮಿಬ್ಬರ ಮದುವೆಗೆ ಬಂದಿದ್ದ ಕರೀನಾರನ್ನು ಸೈಫ್ ‘ಮಗಳೇ, ಮಗಳೇ..’ ಎಂದೇ ಕರೆದಿದ್ದರಂತೆ. ಆದರೆ, ಯಾವಾಗ ಆಕೆಯ ಜೊತೆ ಶೂಟಿಂಗ್‌ನಲ್ಲಿ ಸಹನಟರಾಗಿ ಸೈಫ್ ನಟಿಸಲು ಶುರು ಮಾಡಿದರೋ, ಆಗ ಕರೀನಾ ಮೇಲೆ ಅವರಿಗೆ ಲವ್ ಶುರುವಾಗಿದೆ. ಲವ್ ಅದೆಷ್ಟು ಸ್ಟ್ರಾಂಗ್ ಆಗಿ ಮುಂದುವರೆಯಿತು ಎಂದರೆ, ಕೊನೆಗೆ ಪತ್ನಿ ಅಮೃತಾಗೆ ಡಿವೋರ್ಸ್ ಕೊಟ್ಟುಬಿಟ್ಟರು ಸೈಫ್ ಅಲಿಖಾನ್.

ಮೊದಲೇ ಇಬ್ಬರು ಮಕ್ಕಳ ಅಪ್ಪನಾಗಿದ್ದ ಸೈಫ್​ ಅಲಿ, ಕರೀನಾಳಿಂದ ಮತ್ತೆ ಎರಡು ಮಕ್ಕಳನ್ನು ಪಡೆದಿದ್ದಾರೆ. ಒಬ್ಬ ಮಗನಿಗೆ ತೈಮೂರು ಇನ್ನೊಬ್ಬ ಮಗನಿಗೆ ಜಹಾಂಗೀರ್​ ಎನ್ನುವ ಹೆಸರು ಇಡಲಾಗಿದೆ. ಅಷ್ಟಕ್ಕೂ ಭಾರತದ ಇತಿಹಾಸ ತೆಗೆದು ನೋಡಿದರೆ, ತೈಮೂರ ಎಂಬ ರಾಜ, ಕಾಫೀರ್​ ಎನ್ನುವ ಕಾರಣಕ್ಕೆ ಐದು ಲಕ್ಷಕ್ಕೂ ಅಧಿಕ ಹಿಂದೂಗಳ ಹ*ತ್ಯೆ ಮಾಡಿರುವುದು ತಿಳಿಯುತ್ತದೆ.

14 ನೇ ಶತಮಾನದ ಕೊನೆಯಲ್ಲಿ (ಕ್ರಿ.ಶ. 1398–1399) ಭಾರತದ ಮೇಲೆ ಅವನ ಆಕ್ರಮಣವು ಭಾರತೀಯ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿದೆ. ಪಶ್ಚಿಮದಲ್ಲಿ ಏಷ್ಯಾ ಮೈನರ್ ವರೆಗೆ ಪರ್ಷಿಯಾ ಮತ್ತು ಮೆಸೊಪಟ್ಯಾಮಿಯಾವನ್ನು ವಶಪಡಿಸಿಕೊಂಡ ನಂತರ ಮತ್ತು ದಕ್ಷಿಣದಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ, ತೈಮೂರ್ ತನ್ನ ಗಮನವನ್ನು ಭಾರತದ ಕಡೆಗೆ ತಿರುಗಿಸಿದನು.

14 ನೇ ಶತಮಾನದ ಅಂತ್ಯದ ವೇಳೆಗೆ, ಶತಮಾನಗಳಿಂದ ಉತ್ತರ ಭಾರತದ ದೊಡ್ಡ ಭಾಗಗಳನ್ನು ಆಳುತ್ತಿದ್ದ ದೆಹಲಿ ಸುಲ್ತಾನರು ಆಂತರಿಕ ಸಂಘರ್ಷಗಳು ಮತ್ತು ದುರ್ಬಲ ನಾಯಕತ್ವವನ್ನು ಎದುರಿಸುತ್ತಿದ್ದರು. ಈ ಪ್ರಕ್ಷುಬ್ಧತೆಯ ಲಾಭವನ್ನು ಪಡೆದುಕೊಂಡು, ಟ್ಯಾಮರ್ಲೇನ್ ಎಂದೂ ಕರೆಯಲ್ಪಡುವ ತೈಮೂರ್ ತನ್ನ ಸ್ವಂತ ಸಾಮ್ರಾಜ್ಯವನ್ನು ವಿಸ್ತರಿಸಲು ಹಲವಾರು ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದನು.

ಆ ಸಮಯದಲ್ಲಿ ಹಿಂದೂಗಳ ನರಮೇಧವೇ ನಡೆದು ಹೋಗಿತ್ತು. ಅದೆಷ್ಟೋ ಹಿಂದೂ ಮಹಿಳೆಯರ ಮೇಲೆ ಅತ್ಯಾ*ಚಾರ ಮಾಡಲಾಗಿತ್ತು. ಅವರನ್ನು ಸಿಗಿದು ಅವರ ತಲೆ ಬುರುಡೆಗಳನ್ನು ಇಟ್ಟಿದ್ದ ಇದೇ ತೈಮೂರ್​. ತನ್ನ ತಂಟೆಗೆ ಯಾರೂ ಬರಬಾರದು ಎಂದು ತೋರಿಸುವುದಕ್ಕಾಗಿ ಹೀಗೆ ಮಾಡಿದ್ದ ಎನ್ನಲಾಗಿದೆ. ಇದೇ ತೈಮೂರ ಕರೀನಾ ಕಪೂರ್​ ಖಾನ್​ ಅವರಿಗೆ ಆದರ್ಶವಾಗಿದ್ದಕ್ಕೆ ಸಾಕಷ್ಟು ಟ್ರೋಲ್​ ಕೂಡ ಆಗಿತ್ತು.

ನನಗೆ ಇತಿಹಾಸ ಚೆನ್ನಾಗಿ ಗೊತ್ತಿದೆ. ತೈಮೂರನ ಸಾಹಸ, ಆತನ ಬಲಾಢ್ಯ ದೇಹ, ಅವನ ವಿಕ್ರಮವನ್ನು ನೋಡಿ ನನ್ನ ಮಗನೂ ಹಾಗೆಯೇ ಆಗಬೇಕು ಎಂದು ಆ ಹೆಸರನ್ನು ಇಡಲಾಗಿದೆ ಎಂದಿದ್ದಾರೆ ಕರೀನಾ. ಈ ಹಿಂದೆ, ಸೈಫ್‌ಗೆ ತೈಮೂರ್ ಎಂಬ ಹೆಸರಿನ ಒಬ್ಬ ಗೆಳೆಯನಿದ್ದ, ಅವನೊಂದಿಗೆ ಅವನು ಬೆಳೆದನು. ಸೈಫ್ ಅವನನ್ನೂ ಮತ್ತು ಅವನ ಹೆಸರನ್ನೂ ಇಷ್ಟಪಡುತ್ತಿದ್ದರು. ಅದಕ್ಕಾಗಿಯೇ ಸೈಫ್, ‘ನನಗೆ ಮಗನಿದ್ದರೆ, ನಾನು ಅವನಿಗೆ ತೈಮೂರ್ ಎಂದು ಹೆಸರಿಡುತ್ತೇನೆ’ ಎಂದು ಹೇಳುತ್ತಿದ್ದರು. ಅದಕ್ಕಾಗಿ ಇಟ್ಟರು ಎಂದಿದ್ದರು. ಈಗ ಉಲ್ಟಾ ಹೊಡೆದು ತೈಮೂರ ಸುಲ್ತಾನನ ಪರಾಕ್ರಮಕ್ಕೆ ಇಟ್ಟಿರುವುದಾಗಿ ಹೇಳಿದ್ದಾರೆ. history.of.bharat ನಲ್ಲಿ ಈಕೆಯ ಸಂದರ್ಶನವನ್ನು ತೋರಿಸಲಾಗಿದೆ.

Source link

Leave a Reply

Your email address will not be published. Required fields are marked *