ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ತೆಗೆಯುವಂತೆ ಕಿರುಕುಳ; ದೈಹಿಕ ಶಿಕ್ಷಕ ಅಮಾನತು

ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ತೆಗೆಯುವಂತೆ ಕಿರುಕುಳ; ದೈಹಿಕ ಶಿಕ್ಷಕ ಅಮಾನತು


ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ತೆಗೆಯುವಂತೆ ಕಿರುಕುಳ

ಉಡುಪಿ, ನವೆಂಬರ್ 19: ಕಾರ್ಕಳದ ಮೊರಾರ್ಜಿ ದೇಸಾಯಿ ಇಂಗ್ಲಿಷ್ (ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ) ಮಾಧ್ಯಮ ವಸತಿ ಶಾಲೆಯ ದೈಹಿಕ ಶಿಕ್ಷಕರೊಬ್ಬರು ಜನಿವಾರ ತೆಗೆಯುವಂತೆ ಹೇಳದೆ ಬಸ್ಕಿ ಹೊಡೆಸಿರುವ ಘಟನೆ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಕ ಮತ್ತು ಪೋಷಕರ ನಡುವಿನ ವಿವಾದದ ವೀಡಿಯೊ ವೈರಲ್ ಆಗಿದ್ದು, ಶಿಕ್ಷಕನನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ.

ಮಕ್ಕಳಿಂದ 200 ಬಸ್ಕಿ ಹೊಡೆಸಿದ್ದ ಶಿಕ್ಷಕ

ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ಮತ್ತು ಕೈಗೆ ಕಟ್ಟುವ ದಾರಗಳ ಬಗ್ಗೆ ಪ್ರಶ್ನಿಸಿದ್ದ ಅತಿಥಿ ಶಿಕ್ಷಕ ಮದರಶಾ ಎಸ್ ಮಕಂದರ್, ಮಕ್ಕಳಿಂದ 200 ಬಸ್ಸಿ ಹೊಡೆಸಿದ್ದರು. ಆತನ ಈ ವರ್ತನೆಯಿಂದ ನೊಂದ ಮಕ್ಕಳು ಶಾಲೆಯ ಪ್ರಾಂಶುಪಾಲರಿಗೆ ಈ ಬಗ್ಗೆ ದೂರು ನೀಡಿದ್ದರು. ನಂತರ ಈ ಯನ್ನರಿತ ಪಾಲಕರು ಮತ್ತು ಗ್ರಾಮಸ್ಥರು ಶಾಲೆಯ ಮುಂದೆ ಜಮಾಯಿಸಿ ತಕ್ಷಣ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಇದನ್ನೂ ಓದಿ ಕರ್ನಾಟಕ ಸಿಇಟಿ ಪರೀಕ್ಷೆ ಮತ್ತು ಜನಿವಾರ ವಿವಾದ: ಈವರೆಗೆ ನಡೆದಿದ್ದೇನು? ಇಲ್ಲಿದೆ ವಿವರ

ಶಿಕ್ಷಕರ ದುರ್ವರ್ತನೆಯ ಕುರಿತು ಪ್ರಶ್ನೆ ಮಾಡಿದ ಪಾಲಕರು ಮತ್ತು ಶಿಕ್ಷಕರ ನಡುವಿನ ಈ ಗಲಾಟೆಯ ವೀಡಿಯೋ ವೈರಲ್ ಆಗಿದೆ. ಮಾತುಕತೆ ವೇಳೆ ಶಿಕ್ಷಕ ತಾನು ಮಾಡಿದ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಆಡಳಿತ ಮಂಡಳಿ ಶಿಕ್ಷಕ ಮದರಶಾನನ್ನು ಕೆಲಸದಿಂದ ಕಿತ್ತು ಹಾಕಿದೆ.

ಶಿಕ್ಷಕರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ

ಈ ಘಟನೆಯು ಸಮುದಾಯದ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಚಿಂತಕಿ ರಮಿತಾ ಸೂರ್ಯವಂಶಿ, ಹಿಂದೂ ಧಾರ್ಮಿಕ ಭಾವನೆಗಳಿಗೆ ಶಿಕ್ಷಕ ಧಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ. ಜನಿವಾರದ ಧಾರ್ಮಿಕ ಮಹತ್ವ ಮತ್ತು ಮಾನಸಿಕ, ದೈಹಿಕ ಯೋಗಕ್ಷೇಮದ ಅದರ ಪಾತ್ರದ ಬಗ್ಗೆ ವಿವರಿಸಿದ ಅವರು, ಚಿಕ್ಕ ಮಕ್ಕಳ ಮೇಲಿನ ಕಿರುಕುಳಕಾರ ಸ್ವೀಕಾರವಲ್ಲ. ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂರ್ಯವಂಶಿ ಬಯಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 12:28 pm, ಬುಧವಾರ, 19 ನವೆಂಬರ್ 25



Source link

Leave a Reply

Your email address will not be published. Required fields are marked *