Karna Serial Episode Update: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ತೇಜಸ್ ಮದುವೆಗೆ ಸಕಲ ತಯಾರಿಯೂ ನಡೆದಿತ್ತು. ಆದರೆ ಕೊನೆ ಗಳಿಗೆಯಲ್ಲಿ ತೇಜಸ್ ಮದುವೆ ಆಗೋದಿಲ್ಲ ಎಂದು ಹೇಳಿದ್ದಾನೆ. ಇದಕ್ಕೆ ಕಾರಣ ರಮೇಶ್. ಹಾಗಾದರೆ ಏನಾಯ್ತು?

ನಿತ್ಯಾ ಹಾಗೂ ತೇಜಸ್ ಮದುವೆ ದಿನ ರಮೇಶ್ ಕುತಂತ್ರ ಮಾಡಿ ತೇಜಸ್‌ನನ್ನು ಕಿಡ್ನ್ಯಾಪ್ ಮಾಡಿಸಿದ್ದನು. ಇದರ ಫಲವಾಗಿ ಈ ಮದುವೆ ನಿಂತಿತು. ನಿತ್ಯಾ ಜೀವನ ಹಾಳಾಗಬಾರದು ಎಂದು ಕರ್ಣನ ಜೊತೆ ಮದುವೆ ಆಗಬೇಕು ಎಂದು ಮನೆಯವರು ಹೇಳಿದರು.

ನಿತ್ಯಾ, ತೇಜಸ್‌ನನ್ನು ಪ್ರೀತಿಸಿದ್ದಳು, ಅವಳ ಹೊಟ್ಟೆಯಲ್ಲಿ ಮಗು ಇರೋ ವಿಚಾರ ಕೂಡ ಕರ್ಣನಿಗೆ ಗೊತ್ತಾಯ್ತು. ಇನ್ನೊಂದು ಕಡೆ ನಿಧಿ-ಕರ್ಣ ಪ್ರೀತಿ ಮಾಡುತ್ತಿದ್ದರು. ಹೀಗಾಗಿ ನಾಲ್ವರ ಜೀವನ ಸರಿ ಇರಬೇಜಕು ಎಂದು ಯೋಚಿಸಿ ನಿತ್ಯಾ, ಕರ್ಣ ಮದುವೆ ನಾಟಕ ಮಾಡಿದರು.

ಎಲ್ಲರಿಗೂ ನಿಧಿ-ಕರ್ಣ ಮದುವೆ ಆಗಿ ಎಂದು ಅಂದುಕೊಂಡಿದ್ದರು. ಆಮೇಲೆ ಕಿಡ್ನ್ಯಾಪ್ ಆಗಿದ್ದ ತೇಜಸ್‌ನನ್ನು ರಿಲೀಸ್ ಮಾಡಲಾಯ್ತು. ತೇಜಸ್ ಸಿಕ್ಕ ಬಳಿಕ ನಿತ್ಯಾ ಜೊತೆ ಮದುವೆ ಆಗಲು ಎಲ್ಲವೂ ರೆಡಿ ಆಯ್ತು.

ಅಂದಹಾಗೆ ಕರ್ಣನನ್ನು ನಿತ್ಯಾ ಹೊಗಳೋದು ತೇಜಸ್‌ಗೆ ಇಷ್ಟವೇ ಆಗುತ್ತಿರಲಿಲ್ಲ. ಯಾವಾಗಲೂ ನಿತ್ಯಾ ಅವನನ್ನು ಹೊಗಳೋದನ್ನು ತೇಜಸ್ ಸಹಿಸುತ್ತಲೇ ಇರಲಿಲ್ಲ. ತೇಜಸ್ ಕಿಡ್ನ್ಯಾಪ್ ಆಗಿ ಬಂದ ಬಳಿಕ ನಿತ್ಯಾ ಯಾವಾಗಲೂ ಕರ್ಣನ ಬಗ್ಗೆಯೇ ಮಾತನಾಡುತ್ತಿದ್ದಳು.

ನಿತ್ಯಾ ಹಾಗೂ ತೇಜಸ್ ಮದುವೆ ತಯಾರಿ ನಡೆದಿದೆ. ಇನ್ನೇನು ತೇಜಸ್ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ತೇಜಸ್ ಮದುವೆ ಬೇಡ ಎಂದಿದ್ದಾನೆ. ಮೊಬೈಲ್‌ನಲ್ಲಿ ಅವನು ಒಂದು ವಿಡಿಯೋ ಕೂಡ ತೋರಿಸಿ, ಇದಕ್ಕೆ ನಾನು ಮದುವೆ ಆಗೋದಿಲ್ಲ ಎಂದಿದ್ದಾನೆ.

ಹಾಗಾದರೆ ಆ ವಿಡಿಯೋದಲ್ಲಿ ಏನಿದೆ? ಹೌದು, ನಿತ್ಯಾ, ಕರ್ಣ ಕ್ಲೋಸ್ ಆಗಿರುವ ವಿಡಿಯೋವನ್ನು ರಮೇಶ್ ಕ್ರಿಯೇಟ್ ಮಾಡಿರಬಹುದು, ಎಡಿಟ್ ಮಾಡಿ ಫೋಟೋ ಸೃಷ್ಟಿ ಮಾಡಿರಬಹುದು. ಒಟ್ಟಿನಲ್ಲಿ ಇದನ್ನೆಲ್ಲ ನೋಡಿ ನಿತ್ಯಾ ಹೊಟ್ಟೆಯಲ್ಲಿರುವ ಮಗುಗೆ ಕರ್ಣನೇ ತಂದೆ ಎಂದು ತೇಜಸ್ ಹೇಳಿ, ಹೊರಟರೂ ಆಶ್ಚರ್ಯವಿಲ್ಲ.

ಒಟ್ಟಿನಲ್ಲಿ ತೇಜಸ್ ಜೊತೆ ನಿತ್ಯಾ ಮದುವೆ ಮುರಿದಿದೆ. ನಿತ್ಯಾ ಗರ್ಭಿಣಿ ಎನ್ನೋ ಸತ್ಯ ಮನೆಯವರಿಗೆ ಗೊತ್ತಾಗಿದೆ, ಈ ಮಗುವಿಗೆ ಕರ್ಣನೇ ತಂದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಅಲ್ಲಿಗೆ ನಿಧಿ-ಕರ್ಣ ಮತ್ತೆ ಒಂದಾಗೋದು ಕಷ್ಟ ಇದೆ.

Source link
Karna Serial: ರಮೇಶ್ ಹೂಡಿದ ಬ್ರಹ್ಮಾಸ್ತ್ರದಿಂದಲೇ ತೇಜಸ್, ನಿತ್ಯಾ ಮದುವೆ ಮುರಿದೋಯ್ತು: ಅಂಥದ್ದೇನು ಮಾಡಿದ?