Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ನಿಧಿ ಹಾಗೂ ಕರ್ಣ ಪ್ರೀತಿ ವಿಷಯ ಮಾತ್ರ ದಿನದಿಂದ ದಿನಕ್ಕೆ ಇಕ್ಕಟ್ಟಿಗೆ ಸಿಲುಕುತ್ತಿದೆ. ಆದಷ್ಟು ಬೇಗ ತೇಜಸ್, ನಿತ್ಯಾ ಒಂದಾದರೆ ನಮ್ಮ ದಾರಿ ಸುಲಭ ಆಗುತ್ತದೆ ಎಂದು ಇವರು ಭಾವಿಸಿದ್ದರು. ಆದರೆ ಆ ರೀತಿ ಆಗ್ತಿಲ್ಲ.

ತೇಜಸ್ ಈಗಾಗಲೇ ನಿತ್ಯಾಗೆ ಬಾಯಿಗೆ ಬಂದ ಹಾಗೆ ಮಾತನಾಡಿ, ಅವಳ ಕ್ಯಾರೆಕ್ಟರ್ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಕರ್ಣ, ನಿತ್ಯಾಳನ್ನು ಅವನು ತಪ್ಪು ತಿಳಿದುಕೊಂಡಿದ್ದಾನೆ. ತೇಜಸ್ ಒಂದಲ್ಲ ಒಂದು ದಿನ ಸರಿ ಹೋಗ್ತಾನೆ, ನಮ್ಮ ಸಂಬಂಧ ಸರಿ ಹೋಗುತ್ತದೆ ಎಂದು ನಿತ್ಯಾಗೆ ಕೂಡ ಭರವಸೆ ಇಲ್ಲದಂತಾಗಿದೆ.

ಕರ್ಣನ ಒಳ್ಳೆಯ ಗುಣವನ್ನು ನಿತ್ಯಾ ಸದಾಕಾಲ ಪ್ರಶಂಸಿಸುತ್ತಾಳೆ. ಈಗಲೂ ಕೂಡ ಅವಳು, ಕರ್ಣನ ಬಳಿ, “ನನ್ನ ಪರವಾಗಿ ಮಾತನಾಡಿದ್ದಕ್ಕೆ ಥ್ಯಾಂಕ್ಯು. ಎಂದಿಗೂ ಯಾರನ್ನು ಬಿಟ್ಟುಕೊಡೋದಿಲ್ಲ. ಮನೆಯೊಳಗಡೆ, ಹೊರಗಡೆ ನನ್ನ ಬಗ್ಗೆ ಮಾತನಾಡಿದ್ರಿ” ಎಂದು ಹೇಳಿದ್ದಳು. ಆಗ ಕರ್ಣ ಇದು ನನ್ನ ಕರ್ತವ್ಯ ಎಂದಿದ್ದಾನೆ.

ಇನ್ನು ನಿಧಿಗೂ ಕೂಡ ಅಕ್ಕನನ್ನು ಕಂಡ್ರೆ ಭಾರೀ ಇಷ್ಟ. ಈಗ ಅವಳು ಗರ್ಭಿಣಿ ಅಕ್ಕನ ಆರೈಕೆ ಮಾಡೋದರಲ್ಲಿ ಮುಂದಾಗಿದ್ದಾಳೆ. ಅಕ್ಕನ ಬಳಿ ಬಂದು “ಕಾಲು ನೋಯುತ್ತಿದೆಯಾ? ಸುಸ್ತಾಗಿದ್ದೀಯಾ, ನಾನು ಕಾಲು ಒತ್ತುತ್ತೀನಿ” ಎಂದು ಮುಂದೆ ಬಂದಿದ್ದಾಳೆ.

ಆಗ ನಿತ್ಯಾ, “ನೀನು ಯಾವಾಗಲೂ ನನ್ನ ಬಗ್ಗೆ ಯೋಚನೆ ಮಾಡಿದ್ರೆ ನಿನ್ನ ಜೀವನದ ಕಥೆ ಏನಾಗುತ್ತದೆ? ನೀನು ನನ್ನ ಬಗ್ಗೆ ಆಲೋಚನೆ ಮಾಡೋದು ಬಿಟ್ಟು, ನಿನ್ನ ಬಗ್ಗೆ ಆಲೋಚನೆ ಮಾಡಬೇಕು” ಎಂದು ನಿಧಿಗೆ ಹೇಳಿದ್ದಾಳೆ.

ನಿಧಿ ಪ್ರೀತಿಸುವ ಹುಡುಗ ಯಾರು ಎಂದು ಅವಳು ಹೇಳಿಲ್ಲ ಅಂದ್ರೆ ಬಹುಶಃ ನಿತ್ಯಾ ಅವಳಿಗೆ ಬೇರೆ ಹುಡುಗನನ್ನು ಹುಡುಕಿ ಮದುವೆ ಮಾಡಬಹುದಾ ಎಂಬ ಪ್ರಶ್ನೆ ಬಂದಿದೆ. ಈ ರೀತಿ ಕೂಡ ಆಗುವ ಸಾಧ್ಯತೆ ಇದೆ.

ಕರ್ಣನ ಒಳ್ಳೆಯತನವನ್ನು ನೋಡಿ ನಿತ್ಯಾಗೆ ಅವನ ಮೇಲೆ ಲವ್ ಆಗಬಹುದು. ಪ್ರೀತಿ ಎರಡು ಬಾರಿ ಕೂಡ ಹುಟ್ಟಬಹುದು, ಈ ವಿಷಯ ನಿಧಿಗೆ ಗೊತ್ತಾಗಿ, ತನ್ನ ಪ್ರೀತಿಯನ್ನು ಬಿಟ್ಟುಕೊಡಬಹುದಾ ಎಂಬ ಪ್ರಶ್ನೆ ಎದ್ದಿದೆ.

ಧಾರಾವಾಹಿಯಲ್ಲಿ ಏನೇ ಆಗಲಿ ಸದ್ಯ ನಿಧಿ-ಕರ್ಣ ಒಂದಾಗೋದಿಲ್ಲ, ಇವರಿಬ್ಬರು ಮದುವೆ ಆಗೋದು ಕೂಡ ಡೌಟ್ ಇದೆ. ಒಟ್ಟಿನಲ್ಲಿ ಕರ್ಣನಿಗೆ ನಿತ್ಯಾ-ನಿಧಿ ಇಬ್ಬರೂ ಗಂಟು ಬೀಳೋದು ಗ್ಯಾರಂಟಿ.

Source link
Karna Serial: ಅಕ್ಕನಿಗೆ ಮಾತು ಕೊಟ್ಟ ನಿಧಿ; ಕರ್ಣನನ್ನು ಬಿಟ್ಕೊಟ್ಟು ಬೇರೆ ಹುಡುಗನನ್ನು ಮದುವೆ ಆಗ್ತಾಳಾ?