Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ತೇಜಸ್, ನಿತ್ಯಾಗೆ ಮದುವೆ ಆದರೆ ಎಲ್ಲವೂ ಸರಿ ಹೋಗುತ್ತದೆ. ನನ್ನ-ನಿಧಿ ಜೀವನ ಸೆಟಲ್ ಆಗುತ್ತದೆ ಎಂದು ಕರ್ಣ ಅಂದುಕೊಂಡಿದ್ದಾನೆ. ಈಗ ಇನ್ನೊಂದು ಸಮಸ್ಯೆ ಆಗುವ ಥರ ಕಾಣ್ತಿದೆ. ಹಾಗಾದರೆ ಮುಂದೆ ಏನಾಗುವುದು?

ಹೌದು, ತೇಜಸ್ ಮನೆಗೆ ಬಂದಾಗಿದೆ, ತನ್ನನ್ನು ಯಾರು ಕಿಡ್ನ್ಯಾಪ್ ಮಾಡಿದ್ದಾರೆ ಎನ್ನೋದು ಅವನಿಗೆ ಗೊತ್ತೇ ಆಗಿಲ್ಲ. ಇನ್ನೊಂದು ಕಡೆ ಈ ಕಿಡ್ನ್ಯಾಪ್‌ನಲ್ಲಿ ಅವನ ತಂದೆ-ತಾಯಿ ಕೂಡ ಶಾಮೀಲಾಗಿದ್ದರು. ಈಗ ತೇಜಸ್ ತಂದೆ-ತಾಯಿ ಏನು ಹೇಳಿದರು? ಅವನ ಮನೆಯಲ್ಲಿ ಏನಾಯ್ತು ಎಂದು ತೋರಿಸಿಯೇ ಇಲ್ಲ.

ಅಂದಹಾಗೆ ಅಜ್ಜಿಯಂದಿರಿಗೆ ನಿತ್ಯಾ ಆದಷ್ಟು ಬೇಗ ಮಗುವನ್ನು ಮಾಡಿಕೊಳ್ಳಬೇಕು ಎಂಬ ಆಸೆ. ಇದನ್ನೇ ಅವರು ನಿತ್ಯಾಗೆ ಹೇಳುತ್ತಿದ್ದಾರೆ. ನಿತ್ಯಾ-ಕರ್ಣ ಮದುವೆಯಾಗಿದೆ ಎಂದು ಅಜ್ಜಿಯಂದಿರು ಅಂದುಕೊಂಡಿದ್ದಾರೆ. ಮತ್ತೆ ನಿತ್ಯಾ ಬದುಕಿಗೆ ತೇಜಸ್ ಬರೋದು ಶಾಂತಿಗೂ ಕೂಡ ಇಷ್ಟ ಇಲ್ಲ.

ನಿತ್ಯಾ, ನಿಧಿ, ಕರ್ಣ ಮೂವರು ಮನೆಯಿಂದ ಹೊರಗಡೆ ಹೊರಟಿರೋದು ಸಂಜಯ್, ರಮೇಶ್, ನಯನತಾರಾಗೆ ಗೊತ್ತಾಗಿದೆ. ಇವರು ಮನೆಯಿಂದ ಹೊರಟು, ಏನ್ ಮಾಡೋಕೆ ಹೊರಟಿದ್ದಾರೆ ಎಂಬ ಯೋಚನೆ ಶುರುವಾಗಿದೆ, ಆದರೆ ಏನು ಮಾಡ್ತಾರೆ ಎಂಬ ತಲೆಬಿಸಿ ಶುರುವಾಗಿದೆ. ಆದರೆ ರಮೇಶ್ ಯೋಜನೆ ಬೇರೆ ಇದೆ.

ಕರ್ಣನ ಲೈಫ್‌ನಲ್ಲಿ ನಿತ್ಯಾ ಇರೋದು ಡೌಟ್ ಎಂದು ಸಂಜಯ್‌ಗೆ ಡೌಟ್ ಬಂದಿದೆ. ಇನ್ನೊಂದು ಕಡೆ ಸಂಜಯ್ ಮಾತು ಕೇಳಿ ರಮೇಶ್ ಕೂಡ ನಕ್ಕಿದ್ದಾನೆ. ರಮೇಶ್ ಇನ್ನೇನೋ ಪ್ಲ್ಯಾನ್ ಮಾಡಿದಂತಿದೆ. ಅಲ್ಲಿಗೆ ಕರ್ಣ ಹೇಳಿದಂತೆ ಎಲ್ಲವೂ ನಡೆಯೋದಿಲ್ಲ ಎಂದಾಯ್ತು.

ಕರ್ಣ ಹಾಗೂ ನಿಧಿ ಬದುಕಿಗೆ ಸಾಕಷ್ಟು ಕಷ್ಟ ಕೊಟ್ಟಿದ್ದು, ನೋವು ಕೊಡಲಾಗಿದೆ. ರಮೇಶ್ ಈಗ ಅವರಿಗೆ ಇನ್ನೊಂದು ಕಷ್ಟವನ್ನು ನೀಡಲು ರೆಡಿಯಾಗಿದ್ದಾನೆ. ಅವನು ಇನ್ನೊಂದು ಪ್ಲ್ಯಾನ್ ಮಾಡಿದ್ದಾನೆ. ಹಾಗಾದರೆ ಮುಂದೆ ಏನಾಗುವುದು?

ಕರ್ಣ ಪಾತ್ರಧಾರಿಯಾಗಿ ಕಿರಣ್ ರಾಜ್, ನಿಧಿಯಾಗಿ ಭವ್ಯಾ ಗೌಡ, ನಿತ್ಯಾಳಾಗಿ ನಮ್ರತಾ ಗೌಡ ಅವರು ನಟಿಸುತ್ತಿದ್ದಾರೆ.

Source link
Karna Serial: ಕರ್ಣನ ಖುಷಿಗೆ ಕೊಳ್ಳಿ ಇಡೋಕೆ ಸಜ್ಜಾದ ರಮೇಶ್; ಬರೀ ಇದೇ ಆಯ್ತಲ್ರೋ…!