Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​

Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​

Karna Serial: ಕರ್ಣನ ಮ್ಯಾಜಿಕ್!​ ಹೆಂಡ್ತಿಗೆ ಕಾಲಿಗೆ ಬಿದ್ದ ರಮೇಶ್​- ಹೆಂಗೆ ನಮ್​ ಹೀರೋ ಎಂದ ಫ್ಯಾನ್ಸ್​
ಕರ್ಣ ಸೀರಿಯಲ್ ರೋಚಕ ಹಂತ ತಲುಪಿದ್ದು, ರಮೇಶನ ದುಷ್ಟತನವನ್ನು ಅರಿತ ಕರ್ಣ ಪ್ರತೀಕಾರಕ್ಕೆ ಇಳಿದಿದ್ದಾನೆ. ಪೂಜೆಯ ನೆಪದಲ್ಲಿ ರಮೇಶ್‌ಗೆ ಉಪವಾಸ ಮಾಡಿಸಿ, ಹಸಿವಿನಿಂದ ತಲೆತಿರುಗಿ ಪತ್ನಿಯ ಕಾಲಿಗೆ ಬೀಳುವಂತೆ ಮಾಡುವ ಮೂಲಕ ತನ್ನ ಆಟವನ್ನು ಶುರುಮಾಡಿದ್ದಾನೆ.
ಕರ್ಣ ಸೀರಿಯಲ್​ ಇದೀಗ ರೋಚಕ ಹಂತ ತಲುಪಿದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಕರ್ಣನ ಒಳ್ಳೆಯತನ ಅತಿಯಾಗಿ ಅದು ಅವನಿಗೇ ಮುಳುವಾಗಿತ್ತು. ಸಮಯ ಬಂದಾಗ ಒಳ್ಳೆಯದ್ದನ್ನು ಮಾಡುವುದಕ್ಕಾಗಿಯಾದರೂ ಸ್ವಲ್ಪ ಕೆಟ್ಟವರೂ ಆಗುವ ಅಗತ್ಯ ಇದೆ ಎಂದು ಕರ್ಣ ಸೀರಿಯಲ್​ ತೋರಿಸುತ್ತಿದೆ.

ರಮೇಶನ ದುರ್ಗಣ ಕರ್ಣನಿಗೆ ತಿಳಿಯುತ್ತಲೇ ಅವನು ಆಟ ಶುರುವಿಟ್ಟುಕೊಂಡಿದ್ದಾರೆ. ನಿಧಿ, ನಿತ್ಯಾ ಮತ್ತು ತನ್ನ ಬಾಳಿನಲ್ಲಿ ಮಾತ್ರವಲ್ಲದೇ ಅಮ್ಮನಿಗೂ ನೀಡ್ತಿರೋ ದೌರ್ಜನ್ಯದ ಬಗ್ಗೆ ಆತನಿಗೆ ತಿಳಿಯುತ್ತಲೇ ತಕ್ಕಶಾಸ್ತಿ ಮಾಡಲು ಶುರು ಮಾಡಿದ್ದಾನೆ.

ಇದೀಗ ಪೂಜೆಯ ನೆಪದಲ್ಲಿ ಪೂಜೆಗೆ ಕುಳಿತುಕೊಳ್ಳುವವರು ಉಪವಾಸ ಇರಬೇಕು ಎಂದಿದ್ದಾನೆ. ಮನೆಯವರ ಒಳ್ಳೆಯತನಕ್ಕಾಗಿ ತಾನು ಒಳ್ಳೆಯವನಂತೆ ಪೋಸ್​​ ಕೊಡುವುದು ರಮೇಶ್​ಗೆ ಅನಿವಾರ್ಯವಾಗಿದೆ.

ಉಪವಾಸ ಇರುವುದು ಎಂದರೆ ಸುಮ್ನೇನಾ? ರಮೇಶ್​ಗೆ ಬಾಯಾರಿಕೆ ಆಗಿದೆ. ಆದರೆ ಕರ್ಣ ಅವನ ಎದುರೇ ಎಲ್ಲರಿಗೂ ಜ್ಯೂಸ್​ ತಂದುಕೊಟ್ಟಿದ್ದಾನೆ. ಹೇಳಲು ಆಗದೇ, ಬಿಡಲೂ ಆಗದ ಸ್ಥಿತಿ ರಮೇಶ್​ದ್ದು.

ಆರತಿ ಮಾಡುವ ಸಮಯದಲ್ಲಿ ಹಸಿವೆಯಿಂದ ತಲೆತಿರುಗಿ ಬಿದ್ದ ರಮೇಶ್​, ಸೀದಾ ಪತ್ನಿಯ ಕಾಲ ಕೆಳಗೆ ಬಿದ್ದಿದ್ದಾನೆ. ಇಬ್ಬರೂ ಸೇರಿ ಆರತಿ ಮಾಡುತ್ತಿದ್ದರಿಂದ ಇದನ್ನು ಮೊದಲೇ ಊಹಿಸಿ ಕರ್ಣ ಪ್ಲ್ಯಾನ್​ ಮಾಡಿದ್ದ.

ಅವನು ಪತ್ನಿಯ ಕಾಲ ಕೆಳಗೆ ಬಿದ್ದದ್ದರಿಂದ ಕರ್ಣ, ಮನಸ್ಸಿನಲ್ಲಿಯೇ ತಕ್ಕ ಶಾಸ್ತಿಯಾಯ್ತು ಎಂದಿದ್ದಾನೆ. ಪತ್ನಿ ಸೇರಿದಂತೆ ಎಲ್ಲರೂ ಗಾಬರಿಯಾಗಿದ್ದಾರೆ. ಆಕೆ ಪತಿಯನ್ನು ಎತ್ತಲು ಹೋಗಿದ್ದಾಳೆ. ಅಲ್ಲಿಗೆ ಕರ್ಣ ಹೆಜ್ಜೆಹೆಜ್ಜೆಗೂ ಪ್ರತಿಕಾರ ತೆಗೆದುಕೊಳ್ಳುತ್ತಿದ್ದಾರೆ.

Source link

Leave a Reply

Your email address will not be published. Required fields are marked *