Karna ಸೀರಿಯಲ್​ಗೆ ಎರಡೆರಡು ಬಾರಿ ಅದೃಷ್ಟ ತಂದ TRP King ಕಿರಣ್​ ರಾಜ್​ ರೋಚಕ ಸ್ಟೋರಿ

Karna ಸೀರಿಯಲ್​ಗೆ ಎರಡೆರಡು ಬಾರಿ ಅದೃಷ್ಟ ತಂದ TRP King ಕಿರಣ್​ ರಾಜ್​ ರೋಚಕ ಸ್ಟೋರಿ

Karna ಸೀರಿಯಲ್​ಗೆ ಎರಡೆರಡು ಬಾರಿ ಅದೃಷ್ಟ ತಂದ TRP King ಕಿರಣ್​ ರಾಜ್​ ರೋಚಕ ಸ್ಟೋರಿ
‘ಕರ್ಣ’ ಧಾರಾವಾಹಿಯ ಮೂಲಕ ‘ಟಿಆರ್‌ಪಿ ಕಿಂಗ್’ ಎನಿಸಿಕೊಂಡಿರುವ ನಟ ಕಿರಣ್ ರಾಜ್ ಅವರ ಬಗ್ಗೆ ಈ ಲೇಖನ ವಿವರಿಸುತ್ತದೆ. ಅವರ ಯಶಸ್ವಿ ನಟನಾ ಪಯಣ, ‘ಕರ್ಣ 2.0’ ನಲ್ಲಿನ ಅಭಿನಯ ಮತ್ತು ನಿಜ ಜೀವನದಲ್ಲಿ ಅವರು ಮಾಡುತ್ತಿರುವ ಸಮಾಜ ಸೇವೆಯ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಕಿರಣ್​ ರಾಜ್​ ಎಂದರೆ ಬಹಳಷ್ಟು ಮಂದಿಗೆ ತಿಳಿಯದೇ ಹೋಗಬಹುದು. ಆದರೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್​ (Karna Serial) ಕರ್ಣ ಎಂದರೆ ಸಾಕು, ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವನಾಗಿರುವ ನಾಯಕ ಕಣ್ಮುಂದೆ ಬರುತ್ತಾರೆ. ಈ ಹ್ಯಾಂಡ್​ಸಮ್​ ಯುವಕನೇ ಕಿರಣ್​ ರಾಜ್​ (Kiran Raj). TRP King ಎಂದೇ ಫೇಮಸ್​ ಆಗಿದ್ದಾರೆ ಕಿರಣ್​ ರಾಜ್​.

ಸದ್ಯ ಕರ್ಣ 2.0 ನಡೆಯುತ್ತಿದೆ. ಮೊದಲ ಹಂತದಲ್ಲಿ, ಮಾಮೂಲು ಎಲ್ಲಾ ಸೀರಿಯಲ್​ಗಳ ನಾಯಕನಂತೆ, ಕರ್ಣ ಕೂಡ ದಡ್ಡನಂತೆ ಬಿಂಬಿಸಲಾಗಿತ್ತು. ಎಲ್ಲರನ್ನೂ ಒಳ್ಳೆಯವ ಅಂದುಕೊಂಡಿದ್ದ. ಪುಣ್ಯಕ್ಕೆ, ಸಂಪೂರ್ಣವಾಗಿ ಅಲ್ಲದಿದ್ದೂ, ಅರ್ಧದಷ್ಟಾದರೂ ಬುದ್ಧಿವಂತ ಆಗಿದ್ದಾನೆ ಕರ್ಣ. ಉಳಿದವರ ಕುತಂತ್ರ ತಿಳಿಯದಿದ್ದರೂ ರಮೇಶ್​ನ ಕುತಂತ್ರ ತಿಳಿದುಕೊಂಡಿದ್ದಾನೆ.

ರಮೇಶ್​ಗೆ ತಿರುಗೇಟು ನೀಡುವ ಮೂಲಕ ಕರ್ಣ 2.0ಗೆ ನಾಂದಿ ಹಾಡಲಾಗಿದೆ. ಮೊದಲ ಭಾಗ ಹಾಗೂ ಎರಡನೇ ಭಾಗ, ಎರಡರಲ್ಲಿಯೂ ಟಿಆರ್​ಪಿಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಕರ್ಣ ಸೀರಿಯಲ್​ನಿಂದಾಗ ಕಿರಣ್​ ರಾಜ್​ ಮತ್ತೊಮ್ಮೆ ಟಿಆರ್​ಪಿ ಕಿಂಗ್​ ಎಂದು ಫೇಮಸ್​ ಆಗುತ್ತಿದ್ದಾರೆ.

ಕರ್ಣನ ಪಾತ್ರದ ತೀವ್ರತೆ ಮತ್ತು ಭಾವನಾತ್ಮಕ ಸಂಯಮದ ಸಮತೋಲನಕ್ಕಾಗಿ ಕಿರಣ್ ರಾಜ್ ಅವರ ಚಿತ್ರಣವು ವ್ಯಾಪಕವಾಗಿ ಮೆಚ್ಚುಗೆ ಪಡೆಯುತ್ತಿದೆ. ಅವರ ನಟನೆ, ಅಭಿವ್ಯಕ್ತಿಶೀಲ ಕಣ್ಣುಗಳು ಮತ್ತು ಸಂಭಾಷಣೆ, ಕರ್ಣನ ಆಂತರಿಕ ಸಂಘರ್ಷ ಎಲ್ಲವುಗಳಲ್ಲಿಯೂ ನಟ ಮೋಡಿ ಮಾಡಿದ್ದಾರೆ.

ಅಷ್ಟಕ್ಕೂ ಕಿರಣ್​ ರಾಜ್​ ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್​ ರಾಜ್​ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್‌-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.

ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್​ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್‌ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.

Source link

Leave a Reply

Your email address will not be published. Required fields are marked *