Headlines

KARNA ಸೀರಿಯಲ್​ನಲ್ಲಿ ಕರ್ಣ ಮದ್ವೆಯಾಗೋದು ನಿಧಿಯನ್ನೋ, ನಿತ್ಯಳನ್ನೊ? ಹಿಂಟ್​ ಕೊಟ್ಟೇ ಬಿಟ್ಟ ನಟ!

KARNA ಸೀರಿಯಲ್​ನಲ್ಲಿ ಕರ್ಣ ಮದ್ವೆಯಾಗೋದು ನಿಧಿಯನ್ನೋ, ನಿತ್ಯಳನ್ನೊ? ಹಿಂಟ್​ ಕೊಟ್ಟೇ ಬಿಟ್ಟ ನಟ!

KARNA ಸೀರಿಯಲ್​ನಲ್ಲಿ ಕರ್ಣ ಮದ್ವೆಯಾಗೋದು ನಿಧಿಯನ್ನೋ, ನಿತ್ಯಳನ್ನೊ? ಹಿಂಟ್​ ಕೊಟ್ಟೇ ಬಿಟ್ಟ ನಟ!

ಕರ್ಣ ಮತ್ತು ನಿಧಿ ಒಂದಾಗಲಿ ಎಂದು ಕೆಲವರು, ಆತ ನಿತ್ಯಾ ಜೊತೆ ಮದ್ವೆಯಾಗಲಿ ಎಂದು ಮತ್ತೆ ಕೆಲವರು ಅಂದುಕೊಳ್ತಿದ್ದಾರೆ. ಹಾಗಿದ್ರೆ ಕರ್ಣ ರಿಯಲ್ಲಾಗಿ ಮದ್ವೆಯಾಗೋದು ಯಾರನ್ನು? ನಟ ಹೇಳಿದ್ದೇನು ಕೇಳಿ…

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್​ ಸಕತ್​ ಇಂಟರೆಸ್ಟಿಂಗ್​ ಆಗಿದ್ದು, ಇದು ವೀಕ್ಷಕರ ಮನಸ್ಸನ್ನು ಗೆದ್ದಿದೆ. ನಿಧಿ, ನಿತ್ಯಾ ಮತ್ತು ಕರ್ಣನ ಸುತ್ತ ಸುತ್ತುವ ಕಥೆ ಇದು. ಇದೀಗ ಸೀರಿಯಲ್​​ ರೋಚಕ ತಿರುವಿನಲ್ಲಿ ಬಂದು ನಿಂತಿದೆ. ಕರ್ಣ ನಿಧಿಯನ್ನು ಮದ್ವೆಯಾಗಬೇಕು ಎನ್ನುವುದು ಕೆಲವರ ಮಾತಾದರೆ, ಕರ್ಣ ಮತ್ತು ನಿತ್ಯಳ ಕೆಮೆಸ್ಟ್ರಿ ಚೆನ್ನಾಗಿದೆ ಎನ್ನುವುದು ಮತ್ತೆ ಕೆಲವರ ಮಾತು.

ಅಷ್ಟಕ್ಕೂ ಈ ಸೀರಿಯಲ್​ನಲ್ಲಿ ನಿಧಿಗೆ ಕರ್ಣನ ಮೇಲೆ ಲವ್​. ಯಾವಾಗಲೂ ಕರ್ಣ ಸರ್‌ ಎಂದು ಓಡುವ ಅವಳು, ಅವನನ್ನು ಮದುವೆ ಆಗೋ ಕನಸು ಕಾಣುತ್ತಿರುತ್ತಾಳೆ. ಇನ್ನೂ ಅವಳು ಕರ್ಣನ ಮುಂದೆ ಪ್ರೀತಿಯನ್ನು ಹೇಳಿಕೊಂಡಿಲ್ಲ. ಅದೇ ಇನ್ನೊಂದೆಡೆ ಕರ್ಣನನ್ನು ಕಂಡರೆ ನಿತ್ಯಾಗೆ ಇಷ್ಟವಿಲ್ಲ. ಆದರೆ ಸೀರಿಯಲ್​ ಯಾವ ರೀತಿ ಟ್ವಿಸ್ಟ್​ ಪಡೆದುಕೊಳ್ಳುತ್ತದೆ ಹೇಳಲು ಆಗದು.

ಈಗ ನಿತ್ಯಾಗೆ ಏನೇ ಸಮಸ್ಯೆ ಬಂದರೂ ಕೂಡ ಅದನ್ನು ಕರ್ಣ ಪರಿಹಾರ ಮಾಡ್ತಾನೆ. ಅವಳನ್ನು ಅಪಾಯದಿಂದ ಬಚಾವ್‌ ಮಾಡಿರೋ ಕರ್ಣ ಕೊನೆಗೆ ನಿತ್ಯಾಳನ್ನೇ ಮದುವೆ ಆಗ್ತಾನಾ? ಹೀಗೊಂದು ಸಂಶಯ ಶುರುವಾಗಿದೆ. ಆದ್ದರಿಂದ ಇವರಿಬ್ಬರಲ್ಲಿ ಕರ್ಣ ಕೊನೆಗೆ ಯಾರನ್ನು ಮದುವೆಯಾಗುತ್ತಾರೆ ಎನ್ನುವುದು ಸೀರಿಯಲ್​ ಕುತೂಹಲ.

ಅಷ್ಟಕ್ಕೂ ಇದಾಗಲೇ ತೇಜಸ್‌ ಹಾಗೂ ನಿತ್ಯಾ ನಿಶ್ಚಿತಾರ್ಥ ಆಗಿದೆ. ಮನೆಯಲ್ಲಿ ತಿಳಿಸದೆ ತೇಜಸ್‌ ಉಂಗುರ ಬದಲಾಯಿಸಿಕೊಂಡಿದ್ದ. ಇನ್ನೊಂದೆಡೆ ಇವನ ಪಾಲಕರು ಕೂಡ ನಿತ್ಯಾಗೆ ಬಾಯಿಗೆ ಬಂದಹಾಗೆ ಬೈದಿದ್ದರು. ನಿನಗೆ ಯೋಗ್ಯತೆ ಇಲ್ಲ, ಗತಿಗೆಟ್ಟವಳು, ನಮ್ಮ ಮನೆಗೆ ಬಂದು ಕುಟುಂಬ ಹಾಳೋ ಮಾಡೋದು ಬೇಡ ಅಂತೆಲ್ಲ ಬೈದಿದ್ದರು.

ಅಪ್ಪ-ಅಮ್ಮನನ್ನು ಕಳೆದುಕೊಂಡಿರೋ ನಿತ್ಯಾಗೆ ಅತ್ತೆ-ಮಾವನ ಪ್ರೀತಿ ಸಿಗಬೇಕು ಎನ್ನೋದಿತ್ತು. ಇನ್ನೊಂದು ಕಡೆ ತೇಜಸ್‌ ತಂದೆ-ತಾಯಿ ಇಷ್ಟೆಲ್ಲ ಹೀನಾಯವಾಗಿ ಮಾತನಾಡಿದಾಗ ನಾನು ಹೇಗೆ ಮದುವೆ ಆಗಲಿ ಅಂತ ನಿತ್ಯಾಗೆ ಸಂಶಯ ಶುರುವಾಗಿದೆ.

ಕರ್ಣ ಮದುವೆ ಆಗಬಾರದು ಅಂತ ಅವನ ತಂದೆ ಅಗ್ರಿಮೆಂಟ್‌ ಮಾಡಿಕೊಂಡಿದ್ದರು. ಈಗ ಅಜ್ಜಿ ಈ ಒಪ್ಪಂದವನ್ನು ಮುರಿದಿದ್ದಾರೆ. ಕರ್ಣ ಮದುವೆ ಆಗದಿದ್ರೆ ಸಾಯೋದಾಗಿ ಬೆದರಿಕೆ ಕೂಡ ಹಾಕಿದ್ದಳು. ಹೀಗಾಗಿ ಕರ್ಣ ಮದುವೆ ಆಗಲು ರೆಡಿ ಆಗಿದ್ದಾನೆ.

ಇದೀಗ ಬಾಸ್​​ ಟಿವಿಗೆ ಕೊಟ್ಟಿರುವ ಸಂದರ್ಶನದಲ್ಲಿ ಕರ್ಣ ಪಾತ್ರಧಾರಿ ಕಿರಣ್​ ರಾಜ್​ (Kiran Raj) ಅವರಿಗೆ ಇದೇ ಪ್ರಶ್ನೆ ಎದುರಾಗಿದೆ. ಅದಕ್ಕೆ ಕಿರಣ್​ ರಾಜ್​ ಜಾಣ್ಮೆಯಿಂದ ಯಾರನ್ನು ಬೇಕಾದ್ರೂ ಕರ್ಣ ಮದುವೆಯಾಗಲಿ ಬಿಡಿ, ನೀವು ಸೀರಿಯಲ್​ ನೋಡ್ತಾ ಇರಿ ಎಂದಿದ್ದಾರೆ.

ಜೊತೆಗೆ ನೀವು ಏನು ಅಂದುಕೊಂಡಿದ್ರೋ ಅದು ಖಂಡಿತಾ ಆಗಲ್ಲ. ನಿಮ್ಮ ಕಮೆಂಟ್ಸ್​ ನೋಡಿ ಸೀರಿಯಲ್​ ಬರೆಯುತ್ತಾರೆ ಎಂದುಕೊಂಡರೆ ಅದು ತಪ್ಪು. ಆದ್ದರಿಂದ ಏನು ಬೇಡ ಎಂದುಕೊಳ್ಳುತ್ತೀರೋ ಅದೇ ಆಗುವುದು ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಟ್ಟು ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
View this post on Instagram
A post shared by BOSS TV (@bosstvkannada)

Source link

Leave a Reply

Your email address will not be published. Required fields are marked *