’ಕರ್ಣ’ ಸೀರಿಯಲ್ನ ಮೇಕಿಂಗ್ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ನಾಯಕ ಕಿರಣ್ ರಾಜ್ ಯಾವುದೇ ಸಹಾಯವಿಲ್ಲದೆ ನಾಯಕಿ ಭವ್ಯಾ ಗೌಡ ಅವರನ್ನು ಸಲೀಸಾಗಿ ಎತ್ತಿಕೊಳ್ಳುತ್ತಾರೆ. ಈ ದೃಶ್ಯವು ಚಿತ್ರತಂಡವನ್ನೇ ಅಚ್ಚರಿಗೊಳಿಸಿದೆ.

ಸಾಮಾನ್ಯವಾಗಿ ಶೂಟಿಂಗ್ ಸಮಯದಲ್ಲಿ ನಾಯಕಿಯನ್ನು ನಾಯಕ ಎತ್ತುವ ಸೀನ್ ಇದ್ದಾಗ ಅದಕ್ಕಾಗಿಯೇ ಹಲವಾರು ರೀತಿಯ ಪ್ರಾಪರ್ಟಿಗಳನ್ನು ರೆಡಿ ಮಾಡಲಾಗುತ್ತದೆ. ಖುರ್ಚಿಯ ಮೇಲೆ ನಾಯಕಿಯನ್ನು ಮಲಗಿಸಿ ಇಡಲಾಗುತ್ತದೆ. ನಾಯಕ ಆಕೆಯನ್ನು ಎತ್ತಿಕೊಂಡಂತೆ ಹಿಡಿದುಕೊಂಡಿರುತ್ತಾನೆ. ಬಳಿಕ ಕೆಳಗೆ ಇರುವ ಗಾಲಿ ಖುರ್ಚಿಗಳನ್ನು ಎಳೆಯಲಾಗುತ್ತದೆ. ಅಂತಿಮವಾಗಿ ಎಡಿಟಿಂಗ್ನಲ್ಲಿ ಅದ್ಯಾವುದೂ ವಸ್ತುಗಳು ನಮಗೆ ಕಾಣಿಸುವುದಿಲ್ಲ. ನಾಯಕ ಸಲೀಸಾಗಿ ನಾಯಕಿಯನ್ನು ಎತ್ತುಕೊಂಡು ಹೋಗುವಂತೆ ಕಾಣಿಸುತ್ತದೆ. ಸಾಮಾನ್ಯವಾಗಿ ಇದು ಎಲ್ಲಾ ಸೀರಿಯಲ್, ಸಿನಿಮಾಗಳಲ್ಲಿಯೂ ಮಾಡುವುದು ಮಾಮೂಲು.

ಆದರೆ ಕರ್ಣ ಸೀರಿಯಲ್ (Karna Serial) ಶೂಟಿಂಗ್ನ ವಿಡಿಯೋ ಒಂದು ವೈರಲ್ ಆಗಿದೆ. bannihiremathofficial ಎನ್ನು ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಇದರಲ್ಲಿ ಮಾತ್ರ ನೋಡುಗರಿಗೆ ಅಚ್ಚರಿ ಆಗುವಂಥ ದೃಶ್ಯ ಕಾಣಬಹುದು.

ಅದೇನೆಂದರೆ, ಸೀರಿಯಲ್ನಲ್ಲಿ ಕರ್ಣ ಸರ್ಪ್ರೈಸ್ ಆಗಿ ನಿಧಿಯನ್ನು ಎತ್ತಿಕೊಳ್ಳುವ ದೃಶ್ಯ ಬರುತ್ತದೆ. ತಾನು ಟಾಪ್ ಬಂದಿರುವ ಕಾರಣ, ನನಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ನಿಧಿ ಕರ್ಣನಿಗೆ ಹೇಳಿದಾಗ, ಕರ್ಣ ಅತ್ತ ಕಡೆ ನೋಡುವಂತೆ ಹೇಳುತ್ತಾನೆ. ನಿಧಿ ಆ ಕಡೆ ನೋಡಿದಾಗ ಕರ್ಣ ಆಕೆಯನ್ನು ಎತ್ತಿಕೊಂಡು ಮುದ್ದಾಡುತ್ತಾನೆ.

ಇದರ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಕರ್ಣನ ರೋಲ್ ಮಾಡ್ತಿರೋ ನಟ ಕಿರಣ್ ರಾಜ್ (Kiran Raj) ನಿಧಿ ಪಾತ್ರಧಾರಿ ಭವ್ಯಾ ಗೌಡ (Bhavya Gowda) ಅವರನ್ನು ಯಾವುದೇ ಪ್ರಾಪರ್ಟಿ ಇಲ್ಲದೇ ಸಲೀಸಾಗಿ ಎತ್ತಿಕೊಳ್ಳುವುದನ್ನು ನೋಡಬಹುದು.

ಇದನ್ನು ನೋಡಿದ ಕ್ಯಾಮೆರಾಮನ್ಗಳು ಕೂಡ ಅಚ್ಚರಿ ಪಟ್ಟುಕೊಳ್ಳುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅಷ್ಟಕ್ಕೂ ನಾಯಕಿಯನ್ನು ಇಷ್ಟು ಈಸಿಯಾಗಿ ಅದೂ ಹಲವಾರು ಟೇಕ್ ಪಡೆದುಕೊಳ್ಳುವಾಗ ಸುಲಭದಲ್ಲಿ ಎತ್ತಿಕೊಳ್ಳುವುದು ಕಷ್ಟವೇ. ಆದರೆ ಆ ಸಾಹಸವನ್ನು ಕಿರಣ್ ರಾಜ್ ಮಾಡಿದ್ದಾರೆ.

ಇದಕ್ಕೆ ಕಮೆಂಟ್ಗಳ ಸುರಿಮಳೆಯೇ ಬರುತ್ತಿದೆ. ಹೀಗೆ ನೀವಿಬ್ಬರೂ ಮುದ್ದಾಡುತ್ತಲೇ ಇರಿ. ನಿಮ್ಮ ಜೋಡಿ ನೋಡಲು ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ಕಿರಣ್ ರಾಜ್ ಮತ್ತು ಭವ್ಯಾ ರಿಯಲ್ ಲೈಫ್ನಲ್ಲೂ ಅವಿವಾಹಿತರಾಗಿರುವ ಕಾರಣ, ಇನ್ನು ಅಭಿಮಾನಿಗಳು ಕೇಳಬೇಕೆ? ಜೋಡಿ ಮಾಡುವುದರದಲ್ಲಿ ಅವರದ್ದು ಎತ್ತಿದ ಕೈ.

Source link
ನಿಧಿಯನ್ನು ಈಸಿಯಾಗಿ ಎತ್ತಿ ಮುದ್ದಾಡಿದ ಕರ್ಣ: ದಂಗಾದ ಶೂಟಿಂಗ್ ಟೀಮ್- ವಿಡಿಯೋ ವೈರಲ್