Headlines

Karna Serial: ಛೇ ಇದೇನಾಗ್ತಿದೆ ಇಲ್ಲಿ? ಕರ್ಣನ ಹೊಗಳಿ ಹೊಗಳಿ, ತನ್ನ ಹಳ್ಳ ತಾನೇ ತೋಡಿಕೊಳ್ತಾಳಾ ನಿಧಿ?

Karna Serial: ಛೇ ಇದೇನಾಗ್ತಿದೆ ಇಲ್ಲಿ? ಕರ್ಣನ ಹೊಗಳಿ ಹೊಗಳಿ, ತನ್ನ ಹಳ್ಳ ತಾನೇ ತೋಡಿಕೊಳ್ತಾಳಾ ನಿಧಿ?

Karna Serial: ಛೇ ಇದೇನಾಗ್ತಿದೆ ಇಲ್ಲಿ? ಕರ್ಣನ ಹೊಗಳಿ ಹೊಗಳಿ, ತನ್ನ ಹಳ್ಳ ತಾನೇ ತೋಡಿಕೊಳ್ತಾಳಾ ನಿಧಿ?
ಕರ್ಣ ಸೀರಿಯಲ್‌ನಲ್ಲಿ, ಕರ್ಣನ ಒಳ್ಳೆಯತನಕ್ಕೆ ನಿತ್ಯಾ ಮಾರುಹೋಗುತ್ತಿದ್ದಾಳೆ. ಅತ್ತ, ತಾನೂ ಕರ್ಣನನ್ನು ಪ್ರೀತಿಸುತ್ತಿದ್ದರೂ, ಅಕ್ಕನ ಖುಷಿಗಾಗಿ ನಿಧಿ ತ್ಯಾಗ ಮಾಡುತ್ತಿದ್ದಾಳೆ. ಅಕ್ಕನ ಮುಂದೆ ಕರ್ಣನನ್ನು ಹೊಗಳುವ ಮೂಲಕ ನಿಧಿ ತನ್ನ ಪ್ರೀತಿಯನ್ನು ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ.
ಕರ್ಣ ಸೀರಿಯಲ್​​ (Karna Serial)ನಲ್ಲಿ ಸದ್ಯ ಕರ್ಣ ಈಗ ಎರಡು ಅವತಾರ ಎತ್ತಿದ್ದಾರೆ. ಒಂದೆಡೆ ನಿತ್ಯಾ ಮತ್ತು ನಿಧಿಯನ್ನು ಕೇರ್​ ಮಾಡುತ್ತಿದ್ದರೆ, ಇನ್ನೊಂದೆಡೆ ವಿಲನ್​ ರಮೇಶ್​ಗೆ ಉಲ್ಟಾ ಹೊಡೆಯುತ್ತಿದ್ದಾನೆ.

ಇದಾಗಲೇ ನಿತ್ಯಾ ಕರ್ಣನ ಆಸ್ಪತ್ರೆಯ ಬೋರ್ಡ್​ ಆಫ್​ ಡೈರೆಕ್ಟರ್​ ಆಗಿ ನೇಮಕಗೊಂಡಿದ್ದಾಳೆ. ಎಲ್ಲರನ್ನೂ ಎದುರು ಹಾಕಿಕೊಂಡು ನಿತ್ಯಾಳ ಕ್ಷೇಮಕ್ಕಾಗಿ, ಆಕೆಯ ಖುಷಿಗಾಗಿ ಈ ಹುದ್ದೆಯನ್ನು ಕರ್ಣ ನೀಡಿದ್ದಾನೆ.

ಇದಾಗಲೇ ಕರ್ಣನ ಒಳ್ಳೆಯತನದ ಬಗ್ಗೆ ನಿತ್ಯಾ ಮಾರು ಹೋಗಿದ್ದಾಳೆ. ಆತನಿಂದ ದೂರವಾಗಿ ತೇಜಸ್​ ಬಳಿಗೆ ಹೋಗುವ ಕನಸು ಕಾಣ್ತಿದ್ದ ಅವಳಿಗೆ ಸದ್ಯದ ಮಟ್ಟಿಗೆ ಅದು ಮರೀಚಿಕೆ ಆಗಿದೆ. ಆದರೆ ಕರ್ಣನ ಮೇಲೆ ಒಲವು ಹೆಚ್ಚುತ್ತಿದೆ.

ನಿತ್ಯಾಳಿಗೆ ನಿಧಿ ಕರ್ಣನನ್ನು ಲವ್​ ಮಾಡ್ತಿರೋ ವಿಷ್ಯ ಗೊತ್ತಿಲ್ಲ. ಆದರೆ, ಅಕ್ಕ ಖುಷಿಯಾಗಿ ಇರಲೆಂದು ನಿಧಿ ಕೂಡ ಈ ವಿಷಯವನ್ನು ಬಾಯಿ ಬಿಟ್ಟಿಲ್ಲ. ನಿತ್ಯಾಳಿಗಾಗಿ ಕರ್ಣ ಮಾಡುತ್ತಿರೋ ತ್ಯಾಗವನ್ನು ನೋಡಿ ನಿಧಿ ಕೂಡ ಖುಷಿ ಪಟ್ಟುಕೊಳ್ಳುತ್ತಿದ್ದಾಳೆ.

ಇದೀಗ ಕರ್ಣ ತನಗಾಗಿ ಮಾಡ್ತಿರೋ ಸಹಾಯಕ್ಕೆ ನಿತ್ಯಾ ಫುಲ್​ ಫಿದಾ ಆಗಿದ್ದಾಳೆ. ಅದಕ್ಕೆ ಇಂಬುಕೊಡಲು ಎಂಬಂತೆ, ನಿಧಿ ಅಕ್ಕನ ಎದುರೇ ಕರ್ಣನನ್ನು ಹಾಡಿ ಹಾಡಿ ಹೊಗಳುತ್ತಿದ್ದಾಳೆ. ಇಷ್ಟೊಂದು ಕರ್ಣನನ್ನು ಹೊಗಳಿದರೆ, ಖಂಡಿತವಾಗಿಯೂ ನಿತ್ಯಾಳ ಮನದಲ್ಲಿ ಕರ್ಣನ ಮೇಲೆ ಪ್ರೀತಿ ಮೂಡದೇ ಇರಲಾರದು.

ಅದಕ್ಕಾಗಿ, ನಿಧಿ ತನ್ನ ಹಳ್ಳವನ್ನು ತಾನೇ ತೋಡಿಕೊಳ್ತಾ ಇದ್ದಾಳಾ ಎಂದು ಸೀರಿಯಲ್​ ಪ್ರೇಮಿಗಳಿಗೆ ಆತಂಕ ಉಂಟಾಗಿದೆ. ಇಷ್ಟೊಂದು ಹೊಗಳಿಬಿಟ್ಟರೆ ನಿತ್ಯಾಳಿಗೆ ಕರ್ಣನ ಮೇಲೆ ಗ್ಯಾರೆಂಟ್​ ಲವ್​ ಆಗತ್ತೆ. ಆಗ ನಿನ್ನ ಕಥೆ ಅಷ್ಟೇ ಎನ್ನುತ್ತಿದ್ದಾರೆ.

Source link

Leave a Reply

Your email address will not be published. Required fields are marked *