Headlines

Karna Serial ನಿಧಿಗೆ ಹುಟ್ಟುಹಬ್ಬದ ಸಂಭ್ರಮ: ನಟಿ ಭವ್ಯಾ ಗೌಡ ವಯಸ್ಸೆಷ್ಟು? ಕೈಹಿಡಿವ ಹುಡುಗ ಯಾರು?

Karna Serial ನಿಧಿಗೆ ಹುಟ್ಟುಹಬ್ಬದ ಸಂಭ್ರಮ: ನಟಿ ಭವ್ಯಾ ಗೌಡ ವಯಸ್ಸೆಷ್ಟು? ಕೈಹಿಡಿವ ಹುಡುಗ ಯಾರು?

Karna Serial ನಿಧಿಗೆ ಹುಟ್ಟುಹಬ್ಬದ ಸಂಭ್ರಮ: ನಟಿ ಭವ್ಯಾ ಗೌಡ ವಯಸ್ಸೆಷ್ಟು? ಕೈಹಿಡಿವ ಹುಡುಗ ಯಾರು?
ಕರ್ಣ ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಭವ್ಯಾ, ಕಳೆದ ಐದು ವರ್ಷಗಳಿಂದ ಒಬ್ಬರನ್ನೇ ಪ್ರೀತಿಸುತ್ತಿದ್ದು, ಅವರ ಆ ರಾಜಕುಮಾರ ಯಾರು ಎಂಬ ಗುಟ್ಟು ಇನ್ನೂ ನಿಗೂಢವಾಗಿದೆ.
ಕರ್ಣ ಸೀರಿಯಲ್​ (Karna Serial) ನಿಧಿ ಕಂಡರೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ. ಈ ಸೀರಿಯಲ್​ನಲ್ಲಿ ನಟಿಯ ಮುಗ್ಧತೆ ಕಂಡು ರೋಮಾಂಚನಗೊಳ್ಳುತ್ತಿರುವವರೇ ಹಲವರು. ಅದರಲ್ಲಿಯೂ ಅಕ್ಕನ ಖುಷಿಗಾಗಿ ತನ್ನ ಪ್ರೀತಿಯನ್ನು ಇನ್ನೂ ಬಹಿರಂಗಪಡಿಸದ ನಿಧಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಸೀರಿಯಲ್​ ಪ್ರೇಮಿಗಳು ಆದಷ್ಟು ಬೇಗ ಕರ್ಣ- ನಿಧಿ ಒಂದಾಗಲಿ ಎನ್ನುತ್ತಿದ್ದಾರೆ.

ಇಂದು ಅರ್ಥಾತ್​ ಫೆಬ್ರುವರಿ 26 ನಿಧಿ ಪಾತ್ರಧಾರಿ ಭವ್ಯಾ ಗೌಡ (Bhavya Gowda) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಜೀ ವಾಹಿನಿ ನಟಿಯ ಕುರಿತು ವಿಶೇಷ ಪ್ರೊಮೋ ಒಂದನ್ನು ಶೇರ್​ ಮಾಡಿಕೊಂಡಿದೆ. ಇದರಲ್ಲಿ ಭವ್ಯಾ ಅವರ ಕರ್ಣ ಸೀರಿಯಲ್​ ತುಣುಕುಗಳು ಹಾಗೂ ಕರ್ಣ ವಿಶೇಷ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಅವರಿಗೆ ತೋರಿರುವ ಪ್ರೀತಿಯ ಬಗ್ಗೆ ತಿಳಿಸಲಾಗಿದೆ.

ಅಂದಹಾಗೆ ಗೂಗಲ್​ ದಾಖಲೆಯ ಪ್ರಕಾರ, ನಟಿ ಭವ್ಯಾ ಗೌಡ ಅವರು ಹುಟ್ಟಿದ್ದು 26 ಫೆಬ್ರುವರಿ 1999. ಇದರ ಪ್ರಕಾರ ಅವರಿಗೆ ಇಂದು 32ನೇ ಹುಟ್ಟುಹಬ್ಬದ ಸಂಭ್ರಮ. ಕರ್ಣ ಮತ್ತು ನಿಧಿಯ ಕೆಮೆಸ್ಟ್ರಿಯನ್ನು ಜನ ಮೆಚ್ಚಿಕೊಂಡಿದ್ದು ರೀಲ್​ನಲ್ಲಾದರೆ ರಿಯಲ್​ ಲೈಫ್​ನಲ್ಲಿ ನಟಿಯ ಕೈಹಿಡಿಯುವ ಹುಡುಗ ಯಾರು ಎನ್ನುವುದು ಇನ್ನೂ ಗುಟ್ಟಾಗಿಯೇ ಉಳಿದಿದೆ.

ಅಷ್ಟಕ್ಕೂ ಭವ್ಯಾ ಅವರ ಲವ್​ಸ್ಟೋರಿ ಬಗ್ಗೆ ಇದಾಗಲೇ ರಿವೀಲ್​ ಆಗಿದೆ. ಅವರು ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್‌ ಇದ್ದಾರೆ ಎಂದು ಹಿಂದೊಮ್ಮೆ ಹೇಳಿದ್ದರು. ನಿಮಗೆ ಯಾರಾದರೂ ಕ್ರಶ್‌ ಇದ್ದಾರಾ ಎಂದು ಭವ್ಯಾ ಗೌಡ ಅವರಿಗೆ ಎಷಿಯಾನೆಟ್‌ ಸುವರ್ಣ ನ್ಯೂಸ್‌ ಪ್ರಶ್ನೆ ಮಾಡಿತ್ತು, ಆಗಲೇ ಅವರು ಹೌದು, ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್‌ ಇದ್ದಾರೆ ಎಂದು ಹೇಳಿದ್ದರು.

ಕೆಲ ದಿನಗಳ ಹಿಂದೆ ಫೋಟೋ ಒಂದನ್ನು ಶೇರ್​ ಮಾಡಿ ಅಭಿಮಾನಿಗಳ ತಲೆಗೆ ಹುಳು ಕೂಡ ಬಿಟ್ಟಿದ್ದಾರೆ ನಟಿ. ಕೆಲ ದಿನಗಳ ಹಿಂದೆ ಅವರು ಚಿಕ್ಕಮಗಳೂರಿಗೆ ಹೋಗಿದ್ದರು. ಅಲ್ಲಿ ಸಹೋದರನ ಮದುವೆ ಎಂದು ಕ್ಯಾಪ್ಶನ್‌ ನೀಡಿ, ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳ ಮಧ್ಯೆ ಒಂದು ಫೋಟೋಕ್ಕೆ ದೃಷ್ಟಿ ತಾಕದೆ ಇರುವಂತೆ ಮಾಡುವ ಇಮೋಜಿ ಹಾಕಿದ್ದರು, ಆಗಲೇ ಭವ್ಯಾ ಗೌಡ ಅವರ ಪ್ರಿಯಕರ ಇವರೇ ಇರಬಹುದಾ ಎಂಬ ಪ್ರಶ್ನೆ ಬಂದಿತ್ತು.

ಆದರೆ ಆ ಕನಸಿನ ಕುವರ ಯಾರು ಎನ್ನುವುದನ್ನು ನಟಿ ಇನ್ನೂ ಬಿಟ್ಟುಕೊಟ್ಟಿಲ್ಲ. ಚಿಕ್ಕಮಗಳೂರು ಮೂಲದ ಹುಡುಗನನ್ನು ಭವ್ಯಾ ಗೌಡ ಅವರು ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಮುಕ್ತವಾಗಿ ಕಾಮೆಂಟ್‌ ಕೂಡ ಮಾಡುತ್ತಿದ್ದಾರೆ, ಇನ್ನು ಭವ್ಯಾ ಗೌಡ ಅವರು ಹುಡುಗನ ಫೋಟೋ ಸಮೇತ ಅವರೇ ಅಧಿಕೃತವಾಗಿ ರಿವೀಲ್‌ ಮಾಡೋದು ಬಾಕಿ ಇದೆ.

Source link

Leave a Reply

Your email address will not be published. Required fields are marked *