‘ಕರ್ಣ’ ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಯೊಬ್ಬರು ರಕ್ತದಲ್ಲಿ ಭಾವಚಿತ್ರ ಬಿಡಿಸಿ ಉಡುಗೊರೆ ನೀಡಿದ್ದಾರೆ. ಈ ವಿಚಿತ್ರ ಪ್ರೀತಿಗೆ ಭಾವುಕರಾದ ನಟಿಯ ವೃತ್ತಿಜೀವನ ಹಾಗೂ ಅವರ ಐದು ವರ್ಷಗಳ ರಹಸ್ಯ ಕ್ರಶ್ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.
ಕರ್ಣ ಸೀರಿಯಲ್ (Karna Serial) ನಿಧಿ ಕಂಡರೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ. ಈ ಸೀರಿಯಲ್ನಲ್ಲಿ ನಟಿಯ ಮುಗ್ಧತೆ ಕಂಡು ರೋಮಾಂಚನಗೊಳ್ಳುತ್ತಿರುವವರೇ ಹಲವರು. ಅದರಲ್ಲಿಯೂ ಅಕ್ಕನ ಖುಷಿಗಾಗಿ ತನ್ನ ಪ್ರೀತಿಯನ್ನು ಇನ್ನೂ ಬಹಿರಂಗಪಡಿಸದ ನಿಧಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಸೀರಿಯಲ್ ಪ್ರೇಮಿಗಳು ಆದಷ್ಟು ಬೇಗ ಕರ್ಣ- ನಿಧಿ ಒಂದಾಗಲಿ ಎನ್ನುತ್ತಿದ್ದಾರೆ.

ಇದರ ನಡುವೆಯೇ ಕಳೆದ ಫೆಬ್ರುವರಿ 26ರಂದು ನಿಧಿ ಅರ್ಥಾತ್ ನಟಿ ಭವ್ಯಾ ಗೌಡ (Bhavya Gowda) ಅವರು 32ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅಂದು ಅಸಂಖ್ಯ ಅಭಿಮಾನಿಗಳು ನಟಿಗೆ ವಿಷ್ ಮಾಡಿದರು, ವಿವಿಧ ರೀತಿಯ ಉಡುಗೊರೆ ಕೊಟ್ಟರು. ಆದರೆ ಎಲ್ಲಕ್ಕಿಂತ ಹೆಚ್ಚಿನ ಗಮನ ಸೆಳೆದದ್ದು ಅಭಿಮಾನಿಯೊಬ್ಬ, ರಕ್ತದಿಂದ ಭವ್ಯಾ ಗೌಡ ಅವರ ಭಾವಚಿತ್ರ ಬಿಡಿಸಿ ತಂದುಕೊಟ್ಟಿರುವುದು!

ಈ ಅಭಿಮಾನಿ ಕೈಯಿಂದ ರಕ್ತ ತೆಗೆದು ಚಿತ್ರ ಬಿಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮದೇ ಭಾವಚಿತ್ರ ನೋಡಿ ಅಭಿಮಾನಿಯ ಪ್ರೀತಿಗೆ ನಟಿ ಭಾವುಕರಾಗಿದ್ದಾರೆ. ಇದರ ವಿಡಿಯೋ ಅನ್ನು nammakannadadm ಶೇರ್ ಮಾಡಿಕೊಂಡಿದೆ.

ಇನ್ನು ನಟಿ ಭವ್ಯಾ ಗೌಡ (Bhavya Gowda) ಕುರಿತು ಹೇಳುವುದಾದರೆ, ಅವರು ಇದೀಗ ಕರ್ಣ ಸೀರಿಯಲ್ ನಿಧಿ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಇದಕ್ಕೂ ಮುನ್ನ ಅವರು ‘ಗೀತಾ’ ಸೀರಿಯಲ್ನಲ್ಲಿ ನಟಿಸಿದ್ದರು. ‘ಬಿಗ್‌ಬಾಸ್ ಕನ್ನಡ ಸೀಸನ್ 11’ ನ ಸ್ಪರ್ಧಿಯಾಗಿ ಮನೆಮಾತಾಗಿದ್ದಾರೆ.

ನಟಿ ಭವ್ಯಾ, ಇದಾಗಲೇ ನಟಿ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಚಿತ್ರವಿದು. ಗಗನಸಖಿಯಾಗುವ ಹಂಬಲವಿದ್ದ ನಟಿ, ನಟನಾ ವೃತ್ತಿಗೆ ಕಾಲಿಟ್ಟು ಯಶಸ್ವಿ ನಟಿ ಎನ್ನಿಸಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಭವ್ಯಾ ಅವರ ಲವ್ಸ್ಟೋರಿ ಬಗ್ಗೆ ಇದಾಗಲೇ ರಿವೀಲ್ ಆಗಿದೆ. ಅವರು ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್ ಇದ್ದಾರೆ ಎಂದು ಹಿಂದೊಮ್ಮೆ ಹೇಳಿದ್ದರು. ನಿಮಗೆ ಯಾರಾದರೂ ಕ್ರಶ್ ಇದ್ದಾರಾ ಎಂದು ಭವ್ಯಾ ಗೌಡ ಅವರಿಗೆ ಎಷಿಯಾನೆಟ್ ಸುವರ್ಣ ನ್ಯೂಸ್ ಪ್ರಶ್ನೆ ಮಾಡಿತ್ತು, ಆಗಲೇ ಅವರು ಹೌದು, ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್ ಇದ್ದಾರೆ ಎಂದು ಹೇಳಿದ್ದರು. ಅವರು ಯಾರು ಎನ್ನುವುದು ಇನ್ನಷ್ಟೇ ರಿವೀಲ್ ಆಗಬೇಕಿದೆ.

Source link
ನಟಿ ಭವ್ಯಾ ಗೌಡಗೆ ರಕ್ತದ ಭಾವಚಿತ್ರ ಉಡುಗೊರೆ: Karna Serial ನಿಧಿ ಭಾವುಕ- ಅಬ್ಬಾ! ಇದೆಂಥ ಅಭಿಮಾನ