Karna Serial: ನಿತ್ಯಾ ಹುಚ್ಚಾಟಕ್ಕೆ ತೇಜಸ್​ ಇನ್ನು ಕನಸು ಮಾತ್ರ? ಕರ್ಣ-ನಿಧಿ ಒಂದಾಗೋದು ಡೌಟೆ!

Karna Serial: ನಿತ್ಯಾ ಹುಚ್ಚಾಟಕ್ಕೆ ತೇಜಸ್​ ಇನ್ನು ಕನಸು ಮಾತ್ರ? ಕರ್ಣ-ನಿಧಿ ಒಂದಾಗೋದು ಡೌಟೆ!

Karna Serial: ನಿತ್ಯಾ ಹುಚ್ಚಾಟಕ್ಕೆ ತೇಜಸ್​ ಇನ್ನು ಕನಸು ಮಾತ್ರ? ಕರ್ಣ-ನಿಧಿ ಒಂದಾಗೋದು ಡೌಟೆ!

ಕಿಡ್ನ್ಯಾಪ್ ಆದ ತೇಜಸ್ ಚಿಕ್ಕಮಗಳೂರಿನಲ್ಲಿರುವ ಸುಳಿವು ಸಿಕ್ಕ ಖುಷಿಯಲ್ಲಿ ಕರ್ಣ ಮತ್ತು ನಿತ್ಯಾ ಹೊರಡಲು ಸಿದ್ಧರಾಗುತ್ತಾರೆ. ಆದರೆ, ಈ  ಈ ವಿಷಯವನ್ನು ನಿತ್ಯಾ  ಖಳನಾಯಕ ರಮೇಶ್ ಮುಂದೆ ಬಾಯಿಬಿಟ್ಟಿದ್ದಾಳೆ. ಇನ್ನು ಏನಿದ್ರೂ ತೇಜಸ್​ ಸಿಗೋದು ಡೌಟೇ. ಮುಂದೇನು?

ಕರ್ಣದ ಲೈಫ್​ನಲ್ಲಿ ಅಪ್ಪ ರಮೇಶ್​ ಆಟವಾಡುತ್ತಿದ್ದಾನೆ. ನಿತ್ಯಾ ಮತ್ತು ತೇಜಸ್​ ಮದುವೆಯ ದಿನವೇ ತೇಜಸ್​ ಅನ್ನು ಕಿಡ್​ನ್ಯಾಪ್​ ಮಾಡಿಸಿದ್ದಾನೆ. ವಿಧಿಯ ಆಟಕ್ಕೆ ಕರ್ಣ ನಿತ್ಯಾಳನ್ನು ಮದುವೆಯಾಗುವ ಹಾಗೆ ಮಾಡಿದ್ದಾನೆ.

ಅಲ್ಲಿಗೆ ಅವನ ಪ್ಲ್ಯಾನ್​ ಸಕ್ಸಸ್​ ಆಗಿದೆ. ಇತ್ತ ಕರ್ಣ, ನಿಧಿ ಮತ್ತು ನಿತ್ಯಾ ಮೂವರ ಲೈಫ್​ನಲ್ಲಿಯೂ ಈಗ ಏರುಪೇರು. ಎಲ್ಲರೂ ಮನಸ್ಸಿನಲ್ಲಿಯೇ ಸಂಕಟ ಪಡುತ್ತಿದ್ದಾರೆ. ಇದನ್ನು ನೋಡಿ ರಮೇಶ್​ ಒಳಗೊಳಗೇ ಖುಷಿಪಡುತ್ತಿದ್ದಾನೆ.

ಇದರ ನಡುವೆಯೇ, ಈಗ ತೇಜಸ್​ ಎಲ್ಲಿದ್ದಾನೆ ಎನ್ನುವ ಸುಳಿವು ಸಿಕ್ಕಿದೆ. ಇದರಿಂದ ಕರ್ಣ ತುಂಬಾ ಖುಷಿಯಾಗಿದ್ದಾನೆ. ಇನ್ನು ಎಲ್ಲವೂ ಸರಿ ಹೋಗುತ್ತದೆ ಎನ್ನುವ ಭರವಸೆಯಲ್ಲಿಯೇ, ಈ ವಿಷಯವನ್ನು ನಿತ್ಯಾಗೆ ತಿಳಿಸಿದ್ದಾನೆ. ಇದನ್ನು ಕೇಳಿ ನಿತ್ಯಾ ಹಿರಿಹಿರಿ ಹಿಗ್ಗಿದ್ದಾಳೆ.

ಚಿಕ್ಕಮಗಳೂರಿಗೆ ಹೋಗುವ ಪ್ಲ್ಯಾನ್​ ಮಾಡುತ್ತಿರುವಾಗಲೇ ರಮೇಶ್​ ಎಂಟ್ರಿಯಾಗಿದೆ. ಎಲ್ಲಿಗೆ ಹೊರಟಿದ್ದೀರಿ ಎಂದು ಕೇಳಿದಾಗ, ಸುಮ್ಮನಿರದ ನಿತ್ಯಾ ಚಿಕ್ಕಮಗಳೂರು ಎಂದುಬಿಟ್ಟಿದ್ದಾಳೆ.

ಇದನ್ನು ಕೇಳಿ ರಮೇಶ್​ಗೆ ಶಾಕ್​ ಆಗಿದೆ. ಏಕೆ ಎಂದಾಗ ನಿತ್ಯಾ ಅಸಲಿ ವಿಷಯ ಹೇಳುವಷ್ಟರಲ್ಲಿಯೇ ಕರ್ಣ ಹನಿಮೂನ್​ಗೆ ಎಂದಿದ್ದಾನೆ. ಆದರೆ ಅವನು ರಮೇಶ. ಡೌಟ್​ ಬರದೇ ಇರತ್ತಾ?

ಇನ್ನು ಅವನಿಗೆ ಡೌಟ್​ ಬಂದಿದ್ದೇ ಹೌದಾದರೆ ತೇಜಸ್​ ಅನ್ನು ಅಲ್ಲಿಂದ ಬೇರೆ ಕಡೆ ಶಿಫ್ಟ್​ ಮಾಡುವುದು ಖಂಡಿತ. ಕೈಗೆ ಬಂದ ತುತ್ತನ್ನು ನಿತ್ಯಾ ಅರಿವಿಲ್ಲದೇ ತಾನೇ ಖುದ್ದಾಗಿ ಬಾಯಿಗೆ ಇಲ್ಲದಂತೆ ಮಾಡಿಕೊಂಡಿದ್ದಾಳೆ. ಇನ್ನು ಅವರಿಬ್ಬರೂ ಸಿಗೋದು ಡೌಟೇ ಬಿಡಿ!

ಸೀರಿಯಲ್​ ಪ್ರೊಮೋ ಇಲ್ಲಿದೆ ನೋಡಿ

Source link

Leave a Reply

Your email address will not be published. Required fields are marked *