Headlines

ಕಾಳಿಯಾಗಿ ಬದಲಾದ Karna Serial ನಿತ್ಯಾ! ಭಯಂಕರ ಗೆಟಪ್​ನಲ್ಲಿ ನಟಿ ನಮ್ರತಾ ಗೌಡ

ಕಾಳಿಯಾಗಿ ಬದಲಾದ Karna Serial ನಿತ್ಯಾ! ಭಯಂಕರ ಗೆಟಪ್​ನಲ್ಲಿ  ನಟಿ ನಮ್ರತಾ ಗೌಡ

ಕಾಳಿಯಾಗಿ ಬದಲಾದ Karna Serial ನಿತ್ಯಾ! ಭಯಂಕರ ಗೆಟಪ್​ನಲ್ಲಿ  ನಟಿ ನಮ್ರತಾ ಗೌಡ

ಬಿಗ್ ಬಾಸ್ ಖ್ಯಾತಿಯ ಹಾಗೂ ‘ಕರ್ಣ’ ಧಾರಾವಾಹಿ ನಟಿ ನಮ್ರತಾ ಗೌಡ ಇದೀಗ ತಮ್ಮ ಕಾಳಿ ಅವತಾರದ ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ರೌದ್ರಾವತಾರದ ರೂಪವು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದಿದ್ದ ನಟಿ ನಮ್ರತಾ ಗೌಡ, ಸದ್ಯ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್​ (Karna Serial ) ನಿತ್ಯಾ ಆಗಿ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಕರ್ಣನ ಮೇಲೆ ದ್ವೇಷ ಸಾಧಿಸುತ್ತಿದ್ದ ನಿತ್ಯಾಳಿಂದಾಗಿ ಅಸಲಿ ಜೀವನದಲ್ಲಿಯೂ ಸಾಕಷ್ಟು ಟ್ರೋಲ್​, ಕೆಟ್ಟ ಮಾತುಗಳನ್ನು ಕೇಳಿ ಬೇಸರ ಪಟ್ಟುಕೊಂಡಿದ್ದವರು ನಮ್ರತಾ ಗೌಡ. ಆ ಸಂದರ್ಭದಲ್ಲಿ ತುಂಬಾ ನೋವು ಆಗುತ್ತಿತ್ತು ಎಂದು ನಟಿ ಹೇಳಿಕೊಂಡಿದ್ದರೂ, ವೀಕ್ಷಕರು ಈ ಪರಿಯಲ್ಲಿ ದ್ವೇಷಿಸುತ್ತಾರೆ ಎಂದರೆ ಅವರು ಆ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸಿಕೊಡುತ್ತಿದ್ದಾರೆ ಎನ್ನುವುದು ಕೂಡ ಅರ್ಥವಾಗುತ್ತದೆ.

ಆದರೆ ಇದೀಗ, ನಿತ್ಯಾಳ ಮೇಲೆ ವೀಕ್ಷಕರಿಗೆ ಮರುಕ ಹುಟ್ಟಿದೆ. ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದಾರೆ. ಸೀರಿಯಲ್​ ಅನ್ನು ಕೇವಲ ಒಂದು ನಾಟಕ ಎಂದು ತೆಗೆದುಕೊಳ್ಳದೇ ಅದನ್ನು ತಮ್ಮ ಜೀವನದ ಭಾಗ ಎಂದು ತಿಳಿದುಕೊಳ್ಳುವ ಅದೆಷ್ಟೋ ವೀಕ್ಷಕರಿಂದಾಗಿ ನಟ-ನಟಿಯರು ಕೂಡ ಅದರಲ್ಲಿಯೂ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಳ್ಳುವವರು ಸಿಕ್ಕಾಪಟ್ಟೆ ಜನರಿಂದ ಬೈಸಿಕೊಳ್ಳುವುದೂ ನಡೆದೇ ಇದೆ.

ಅದೇನೇ ಇರಲಿ. ಸದ್ಯ ನಮ್ರತಾ ಮೇಲೆ ಅಭಿಮಾನಿಗಳು ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾರೆ. ಯಾವ ರೀತಿಯ ಪಾತ್ರಕ್ಕೂ ಸೈ ಎನ್ನುವಂತೆ ನಟಿಸುವ ನಮ್ರತಾ ಗೌಡ ಅವರು ಇದೀಗ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಕಾಳಿ ಅವತಾರದ ವಿಡಿಯೋ ಒಂದನ್ನು ಶೇರ್​ ಮಾಡಿದ್ದಾರೆ.

ಇದು ಯಾಕೆ, ಹೊಸ ಸೀರಿಯಲ್ಲಾ, ಹೊಸ ಸಿನಿಮಾನಾ ಅಥವಾ ಎರಡು ವರ್ಷಗಳ ಹಿಂದೆ ಕಾಳಿಯ ರೂಪದ ವಿಡಿಯೋ ಒಂದನ್ನು ಶೇರ್​ ಮಾಡಿದ್ದನ್ನೇ ಪುನಃ ಮಾಡಿದ್ದಾರಾ ಎನ್ನುವುದು ತಿಳಿದಿಲ್ಲ. ಒಟ್ಟಿನಲ್ಲಿ ನಿತ್ಯಾ ಆಗಿ ಫೇಮಸ್​ ಆಗ್ತಿರೋ ನಟಿ ನಮ್ರತಾ ಗೌಡ ಅವರು ಗುರುತೇ ಸಿಗದ ರೀತಿಯಲ್ಲಿ ಕಾಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಾಳಿ ಎಂದ ಮೇಲೆ ಅದರ ಗೆಟಪ್ಪೇ ಬೇರೆಯ ರೀತಿ ಇರುತ್ತದಲ್ಲ. ಅದರಂತೆಯೇ ಘರ್ಜಿಸುವ ನಟಿಯನ್ನು ಈ ವಿಡಿಯೋದಲ್ಲಿ ನೋಡಬಹುದು. Namratha Gowda as Kaali ಎಂದು ಬರೆಯಲಾಗಿದೆ. n her strength, I rise ಎನ್ನುವ ಶೀರ್ಷಿಕೆಯನ್ನು ನಟಿ ನೀಡಿದ್ದಾರೆ.

ಇನ್ನು ನಮ್ರತಾ ಗೌಡ ಕುರಿತು ಹೇಳುವುದಾದರೆ, ಬಾಲನಟಿಯಾಗಿ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟಿದ್ದ ನಮ್ರತಾಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು, ಸೀರಿಯಲ್​ಗಳು. ಅದರಲ್ಲಿಯೂ ನಾಗಿಣಿ ಸೀರಿಯಲ್​ ಅವರಿಗೆ ದೊಡ್ಡ ಖ್ಯಾತಿಯನ್ನೇ ಕೊಟ್ಟಿತು. ಅದಕ್ಕಿಂತ ಅವರ ಜೀವನದಲ್ಲಿ ದೊಡ್ಡ ಬ್ರೇಕ್​ ಸಿಕ್ಕಿದ್ದು, ಬಿಗ್‌ ಬಾಸ್‌ ಕನ್ನಡ ಸೀಸನ್‌ 10.

ಅಲ್ಲಿಂದ ಬಂದ ಮೇಲೆ ಒಂದಷ್ಟು ಷೋಗಳಲ್ಲಿ ಅವಕಾಶ ಸಿಕ್ಕಿತು. ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ನಮ್ರತಾ ಗೌಡ ಅವರು ಹಲವಾರು ಸೆಲೆಬ್ರಿಟಿಗಳಂತೆಯೇ ಪುನೀತ್​ ರಾಜ್​ಕುಮಾರ್​ (Puneet Rajkumar) ಅವರ ಅಭಿಮಾನಿ ಕೂಡ. ತಮ್ಮ ಕೈಮೇಲೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದರು.

Source link

Leave a Reply

Your email address will not be published. Required fields are marked *